ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ನಂತರದಲ್ಲಿ ಬೆಳಗಾವಿಯ ಟಿಳಕವಾಡಿ ಪೋಲಿಸ ಠಾಣೆಗೆ ವರ್ಗಾವಣೆಗೊಂಡಿದ್ದ ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಪ್ರಕಟವಾಗಿದೆ. 2015ರಲ್ಲಿ ಪ್ರಕರಣ ನಡೆದಿತ್ತು.
ಪ್ರಕರಣದ ಸಾರಾಂಶ: ಸುಖವಿಂದರ ಸಿಂಗ್ ತಂದೆ ಪೃಥ್ವಿಸಿಂಗ ಅಲಿಯಾಸ್ ರೋಣಿಸಿಂಗ್, ವಯಸ್ಸು 32 ವರ್ಷ, (ಹಾಲಿ: ಗುಲಮೋಹರ ಕಾಲನಿ, ಭಾಗ್ಯನಗರ 9 ನೇ ಕ್ರಾಸ್, ಬೆಳಗಾವಿ) ಮೊದಲ ಆರೋಪಿ.
2ನೇ ಆರೋಪಿ ಗೇಸಿ ರಾಖಿ ಡಯಾಸ್ (38 ವರ್ಷ).
ಗೇಸಿಯ ಶಾಹುನಗರದ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಇದ್ದ ಅಪ್ರಾಪ್ತ ಬಾಲಕಿ ಮೇಲೆ ಸುಖವಿಂದರ್ ಸಿಂಗ್ ಪದೇ ಪದೆ ಲೈಂಗಿಕ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದಳು ಎನ್ನುವುದು ಆರೋಪ. ಅಲ್ಲದೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎಂದೂ ಆರೋಪಿಸಲಾಗಿತ್ತು.
ಸಪಖವಿಂದರ್ ಸಿಂಗ್ ಮತ್ತು ಗೇಸಿ ಗೆಳೆಯರು. ಗೇಸಿಯನ್ನು ನೋಡಲು ಪದೆ ಪದೆ ಬರುತ್ತಿದ್ದ ಸುಖವಿಂದರ್ ಸಿಂಗ್ ಅವರ ಮನೆಯಲ್ಲಿದ್ದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ.
ನ್ಯಾಯಾಧೀಶರಾದ ಮಂಜಪ್ಪಾ ಹನುಮಂತಪ್ಪಾ ಅಣ್ಣಯ್ಯನವರ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 14 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 29 ದಾಖಲೆಗಳು ಹಾಗೂ 06 ಮುದ್ದೆಮಾಲ್ ಗುರುತಿಸಿ ಅವುಗಳ ಆಧಾರದ ಮೇಲಿಂದ ಆರೋಪಿನಾದ ಸುಖವಿಂದರಸಿಂಗ್ ಇವನಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 55 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತದಲ್ಲಿ ನೋಂದಬಾಲಕಿಗೆ 50,000 ಸಾವಿರ ರೂಪಾಯಿಗಳನ್ನು ಕೊಡಬೇಕು ಎಂದು ತಿರ್ಪು ನೀಡಿ ಆದೇಶಿಸಿದ್ದು & ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನೋಂದಬಾಲಕಿಗೆ ಪರಿಹಾರ ರೂಪದಲ್ಲಿ 2 ಲಕ್ಷ ರೂಪಾಯಿಗಳನ್ನು ಕೊಡಲು ಆದೇಶಿಸಲಾಗಿದೆ.
ಆರೋಪಿ 02 ಗೆಸಿ ರಾಕಿ ಡಯಾಸ್ ಇವಳನ್ನು ದೋಷಮುಕ್ತ ಮಾಡಿ ಬಿಡುಗಡೆ ಮಾಡಲಾಗಿದೆ.
ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಪ್ರಕರಣವನ್ನು ನಡೆಸಿ ಹಾಗೂ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ