ಪ್ರಗತಿವಾಹಿನಿ ಸುದ್ದಿ; ಧಾರವಾಡ: ಭಾರತದ ಸಂವಿಧಾನವನ್ನು ಸರ್ವರಿಗೂ ತಿಳಿಸುವ ಉದ್ದೇಶದಿಂದ ಸರ್ವರಿಗೂ ಸಂವಿಧಾನ ಯೋಜನೆಯಡಿಯಲ್ಲಿ ನಾಟಕ ರಚನೆಗೆ ಧಾರವಾಡ ರಂಗಾಯಣವು ಲೇಖಕರಿಂದ ಅರ್ಜಿ ಆಹ್ವಾನಿಸಿದೆ.
ಲೇಖಕರು 21 ವರ್ಷದವರಾಗಿದ್ದು, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಧಾರವಾಡ ರಂಗಾಯಣದ ವ್ಯಾಪ್ತಿಗೆ ಒಳಪಡುವ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಅಭ್ಯರ್ಥಿಗಳಾಗಿರಬೇಕು. ಕನಿಷ್ಟ 1 ಕಥಾ ಸಂಕಲನ, 1 ಕವನ ಸಂಕಲನ, 1 ನಾಟಕ ಹಾಗೂ ಇತರೆ ಸಾಹಿತ್ಯದ ಪ್ರಕಾರಗಳಲ್ಲಿ ಕೃತಿ ಪ್ರಕಟಿಸಿರಬೇಕು.
ಆಸಕ್ತ ಲೇಖಕರು ನಿಗದಿತ ಅರ್ಜಿ ನಮೂನೆಯನ್ನು ವೆಬ್ಸೈಟ್ ಮೂಲಕ ಪಡೆದು, ಅರ್ಜಿಯ ಮೇಲೆ ದಾಖಲಾತಿ ಮತ್ತು ಸ್ವವಿವರದೊಂದಿಗೆ ಭರ್ತಿ ಮಾಡಿ ಫೆ.25 ರ ಸಂಜೆ 5 ಗಂಟೆ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಪಂಡಿತ ಬಸವರಾಜ ರಾಜಗುರು ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ-580001 ಈ ವಿಳಾಸಕ್ಕೆ ಅಥವಾ ಅಂಚೆ ಮೂಲಕ ಇಲ್ಲವೆ ಇ-ಮೇಲ್ [email protected] ಮೂಲಕ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ www.rangayandharwad.com ವೆಬ್ಸೈಟ್ ಹಾಗೂ ದೂರವಾಣಿ ಸಂಖ್ಯೆ 0836-2441706ಗೆ ಸಂಪರ್ಕಿಸಬಹುದು ಎಂದು ರಂಗಾಯಣ ಆಡಳಿತಾಧಿಕಾರಿ ಮಂಜುನಾಥ ಡೊಳ್ಳಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ