ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿವಾದಾತ್ಮಕ ಪಠ್ಯ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಈ ಮೂಲಕ 6ನೇ ತರಗತಿಯ ಪಠ್ಯದಲ್ಲಿದ್ದ ಹಲವು ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿದೆ.
6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ, ವೈದಿಕ ಆಚರಣೆಗಳ ಕುರಿತಾಗಿ ಕೆಲ ವಿವಾದಾತ್ಮಕ ಸಿಲೆಬಸ್ ಗಳಿದ್ದು, ಹಿಂದೆ ಕೃಷಿ ಸಂಬಂಧಿತ ಪ್ರಾಣಿಗಳನ್ನು ಕೂಡ ಕೊಲ್ಲಲಾಗುತ್ತಿತ್ತು, ಇದರಿಂದ ಆಹಾರಧಾನ್ಯಗಳ ಅಭಾವಕ್ಕೂ ಕಾರಣವಾಯ್ತು ಎಂಬಿತ್ಯಾದಿ ಅಂಶಗಳಿದ್ದವು. ಇವುಗಳಿಂದ ತಪ್ಪುಸಂದೇಶಗಳು ರವಾನೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ವಿವಾದಿತ ಪಠ್ಯ ಕೈಬಿಡುವಂತೆ ಬ್ರಾಹ್ಮಣ ಅಭಿವೃದ್ಧಿ ನಿಗಮ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿರುವ ಹೊಸ ಧರ್ಮಗಳ ಉದಯ ಎಂಬ ಪಠ್ಯವನ್ನು ಕೈಬಿಡಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ