Latest

ಬೆಳಗಾವಿಯಲ್ಲಿ ಮಾರ್ಚ್ ೩ರಂದು ಡಾ. ಸಂಗಮೇಶ ಸವದತ್ತಿಮಠರ ಅಮೃತ ಮಹೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ನಗರದ ಲಕ್ಷ್ಮಿ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಮಾಸಿಕ ಸುವಿಚಾರ ಚಿಂತನ ಹಾಗೂ ಖ್ಯಾತ ಸಾಹಿತಿಗಳು, ಭಾಷಾತಜ್ಞರಾ ಡಾ. ಸಂಗಮೇಶ ಸವದತ್ತಿಮಠ ಅವರ ಅಮೃತ ಮಹೋತ್ಸವ ಇದೇ ಮಾ.೩ ಭಾನುವಾರ ಸಂಜೆ ೬ ಗಂಟೆಗೆ ಜರುಗಲಿದೆ.

ಸಮಾರಂಭದ ಸಾನಿಧ್ಯವನ್ನು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಪ್ರೊ. ನೇತ್ರಾವತಿ ಹಿರೇಮಠ್ ಅವರ ಸಂಪಾದಕತ್ವದಲ್ಲಿ ಯಶಸ್ವಿ ಪ್ರಕಾಶನದಿಂದ ಹೊರಬಂದ ಡಾ. ಸಂಗಮೇಶ್ ಸವದತ್ತಿಮಠ “ಬರಹ ಬದುಕು” ಎಂಬ ಅಭಿನಂದನಾ ಗ್ರಂಥವನ್ನು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಬಿಡುಗಡೆ ಮಾಡಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸಂಸದ ಸುರೇಶ ಅಂಗಡಿ ವಹಿಸಲಿದ್ದಾರೆ. ಅಮೃತ ಮಹೋತ್ಸವ ಉದ್ಘಾಟನೆಯನ್ನು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೆರವೇರಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಅವರು ಡಾ. ಸಂಗಮೇಶ್ ಸವದತ್ತಿಮಠರನ್ನು ಅಭಿನಂದಿಸಿ ಗೌರವಿಸಲಿದ್ದಾರೆ.

Home add -Advt

ಈ ಕಾರ್ಯಕ್ರಮದಲ್ಲಿ ಡಾ. ಸಂಗಮೇಶ್ ಸವದತ್ತಿಮಠ ಅವರ ಬರಹ ಬದುಕು ಪುಸ್ತಕ ವನ್ನು ಕುರಿತು ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಡಾ. ಮೈತ್ರೆಯಿಣಿ ಗದಿಗೆಪ್ಪಗೌಡರ ಮಾತನಾಡಲಿದ್ದಾರೆ. ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ.

Related Articles

Back to top button