Kannada NewsLatest

​ಗ್ರಾಮೀಣ ಕ್ಷೇತ್ರದ ಕೆಲಸ ಪುಣ್ಯದ ಕೆಲಸ: ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ​: ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಸೇವೆ ಮಾಡುವುದೆಂದರೆ ಪುಣ್ಯದ ಕೆಲಸ. ಅದರಲ್ಲೂ ಕ್ಷೇತ್ರದಲ್ಲಿ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಕ್ಷೇತ್ರದ ಶಿಂದೋಳ್ಳಿ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗಳಿಗೆ ​ಸೋಮವಾರ​​ ಚಾಲನೆಯನ್ನು ನೀ​ಡಿ ಅವರು ಮಾತನಾಡುತ್ತಿದ್ದರು. ​ನಾನು ಶಾಸಕಿಯಾದ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಜನರಿಗೆ ಅಭಿವೃದ್ಧಿ ಎನ್ನುವುದೇ ಮರೀಚಿಕೆಯಾಗಿತ್ತು. ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು, ಕೂಲಿಕಾರ್ಮಿಕರು, ಬಡವರೇ ಇದ್ದಾರೆ. ಅವರಿಗೆ ನಿತ್ಯದ ಜೀವನೋಪಾಯವೇ ಕಷ್ಟಕರ ಸಂಗತಿ. ಹಾಗಾಗಿ ಅಂತವರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ನನ್ನ ಜೀವನ ಪೂರ್ತಿ ಇಲ್ಲಿಯ ಜನರೊಂದಿಗೆ ಕಳೆಯುತ್ತೇನೆ. ನಿಮ್ಮ ನೆಮ್ಮದಿಯಲ್ಲೇ ನನ್ನ ನೆಮ್ಮದಿ ಕಂಡುಕೊಳ್ಳುತ್ತೇನೆ ಎಂದು ಅವರು ಆನಂದ ಭಾಷ್ಪಗಳನ್ನು ಹರಿಸುತ್ತ ನುಡಿದರು. 
​​
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಿಲನ್ ಮಾತಾರಿ, ಗಂಗವ್ವ ಪೂಜೇರಿ, ಶೀಲಾ ತಿಪ್ಪಣ್ಣಗೋಳ, ಸುನಿತಾ ತಳವಾರ, ಪಿರಾಜಿ ಅನಗೊಳಕರ್, ನಾಗೇಂದ್ರ, ಬಾಬುಗೌಡ ಪಾಟೀಲ, ನಂದಿನಿ ಕುರುಬರ, ರೇಖಾ ಶಾಪೂರಕರ್, ಸವಿತಾ ಮುಚ್ಚಂಡಿ, ಯಲ್ಲಪ್ಪ ಶಾಪೂರಕರ್, ಸತೀಶ ಶಾಪೂರಕರ್, ಶ್ರೀ ಕರಿಸಿದ್ದೇಶ್ವರ ಕಮೀಟಿಯ ಅಧ್ಯಕ್ಷ ಅನಂತ ಕೃಷ್ಣಪ್ಪಗೋಳ, ಉಪಾಧ್ಯಕ್ಷ ರಮೇಶ ನಾಗನ್ನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button