ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾ.4ರಿಂದ 4 ದಿನಗಳ ಕಾಲ ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ನೀರು ಸರಬರಾಜು ನಿಗಮ ತಿಳಿಸಿದೆ.
ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡುವ ಗೇಟ್ ಮುರಿದಿದ್ದು ಇದರಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ನೀರು ಸರಬರಾಜು ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಹಾನಗರ ಪಾಲಿಕೆಗೆ ತಿಳಿಸಿದ್ದಾರೆ.
ಮುರಿದಿರುವ ಗೇಟನ್ನು ಪರಿಶೀಲಿಸಲಾಗಿ ಮುಂದಿನ ನೀರು ಬಿಡುಗಡೆ ಮುನ್ನ ಗೇಟನ್ನು ದುರುಗೊಳಿಸುವುದು ಅನಿವಾರ್ಯ. ಆದುದರಿಂದ ಗೇಟನ್ನು ದುರಸ್ಥಿಗೊಳಿಸಲು ನೀರು ಸರಬರಾಜು ನಿಲ್ಲಿಸಬೇಕಾಗುತ್ತದೆ. ಹಾಗಾಗಿ ಹಿಡಕಲ ಜಲಾಶಯದಿಂದ 4 ದಿನಗಳವರೆಗೆ ಕುಡಿಯುವ ನೀರು ಸರಬರಾಜು ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
( ಈ ಸುದ್ದಿಯನ್ನು ಎಲ್ಲರಿಗೂ ಮಾಹಿತಿಗಾಗಿ ಶೇರ್ ಮಾಡಿ)
ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆ ತಡೆ ನೀಡಲು ಮನವಿ
ಬೆಳಗಾವಿ ಮೃಗಾಲಯಕ್ಕೆ ಸಿಂಹ, ಹುಲಿ, ಚಿರತೆ : ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ