Kannada NewsLatest

ರಮೇಶ್ ವಿರುದ್ಧ ಷಡ್ಯಂತ್ರ; ಸಿಡಿಗೆ 15 ಕೋಟಿ ಖರ್ಚು; ಬಾಲಚಂದ್ರ ಜಾರಕಿಹೊಳಿ

ಸಿಬಿಐ ತನಿಖೆ ನಡೆಯಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕೊಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ್ದ ಮಾನವ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇದೀಗ ಕೇಸ್ ವಾಪಸ್ ಪಡೆಯಲು ಮುಂದಾದ ಬೆನ್ನಲ್ಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಬೆಂಗಳೂರಿನ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಮಾಧ್ಯಮದವರಿಗೆ ಒಂದು ವಿನಂತಿ ಮಾಡಿಕೊಳ್ಳುತ್ತೇನೆ ಸಿಡಿಯಲ್ಲಿರುವ ಮಹಿಳೆ ಸಂತ್ರಸ್ತ ಮಹಿಳೆ ಎಂದು ದಯವಿಟ್ಟು ಹೇಳಬೇಡಿ. ಯಾಕೆಂದರೆ ಇದರಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಮಹಿಳೆಯ ಹಿಂದೆ ಇನ್ನೂ ಮೂರು ಜನರಿದ್ದಾರೆ. ಒಟ್ಟು 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದರು.

ದೂರು ನೀಡುವ ಮುನ್ನವೇ ದೃಶ್ಯ ಯೂಟೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ದಯವಿಟ್ಟು ಮನೆಯಿಂದ ಹೊರಗೆ ಬಂದು ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆಗೆ ಮಾಹಿತಿ ನೀಡಲಿ. ಸಿಡಿ ಪ್ರಕರಣದ ವಿರುದ್ಧ ದೂರು ನೀಡಲಿ ಎಂದು ಹೇಳಿದರು.

ದಿನೇಶ್ ಕಲ್ಲಹಳ್ಳಿ, ಸಿಡಿ ಬಿಡುಗಡೆ ಮಾಡಿ ದೂರು ನೀಡುವ ಮೊದಲೇ ರಷ್ಯಾದಿಂದ ಯೂಟೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ಕಲ್ಲಹಳ್ಳಿ ಅವರನ್ನೂ ಯಾರೋ ಮಿಸ್ ಗೈಡ್ ಮಾಡಿರಬಹುದು. ಈಗಾಗಲೇ ಅವರು ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಾರೆ. ಒಟ್ಟಾರೆ ಇಡೀ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು, ಪಂಚ ರಾಜ್ಯ ಚುನಾವಣೆ, ಬೆಳಗಾವಿ ಲೋಕಸಭಾ ಉಪಚುನಾವಣೆ ಇದರ ಬೆನ್ನಲ್ಲೇ ಜಾರಕಿಹೊಳಿ ಕುಟುಂಬದ ತೇಜೋವಧೆ ಮಾಡಬೇಕು ಹಾಗೂ ರಮೇಶ್ ಜಾರಕಿಹೊಳಿಯವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಕು ಎಂಬ ಉದ್ದೇಶಕ್ಕೆ ಈ ನಕಲಿ ವಿಡಿಯೋ ಸೃಷ್ಟಿ ಮಾಡಲಾಗಿದೆ. ಸಿಡಿ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button