ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನನ್ನ ಸಿಡಿ ತಯಾರಿಸುತ್ತಿರುವ ವಿಷಯ 4 ತಿಂಗಳ ಮೊದಲೇ ಗೊತ್ತಾಗಿತ್ತು. 26 ಗಂಟೆ ಮೊದಲು ನನ್ನ ಹೈಕಮಾಂಡ್ ನಿಂದ ಫೋನ್ ಮಾಡಿದ್ದರು. ಇದು ನೂರಕ್ಕೆ ನೂರು ನಕಲಿ ವಿಡೀಯೋ. ಅದನ್ನು ಮಾಡಿದವರನ್ನು ಜೈಲಿಗೆ ಹಾಕಿಸದೆ ಬಿಡಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ನನ್ನ ವಿರುದ್ಧ ಷಢ್ಯಂತ್ರಕ್ಕೆ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಬೆಂಗಳೂರಿನ ಯಶವಂತಪುರ ಮತ್ತು ಒರಾಯನ್ ಮಾಲ್ ಸುತ್ತಮುತ್ತ 2 ಅಪಾರ್ಟ್ ಮೆಂಟ್ ನಲ್ಲಿ ಷಡ್ಯಂತ್ರ ನಡೆದಿದೆ. ಒರಾಯನ್ ಬಳಿ ಅಪಾರ್ಟ್ ಮೆಂಟ್ ನ 5ನೇ ಮಹಡಿ ಮತ್ತು ಯಶವಂತ ಅಪಾರ್ಟ್ ಮೆಂಟ್ ನ 4ನೇ ಮಹಡಿಯಲ್ಲಿ ಷಡ್ಯಂತ್ರ ನಡೆಸಲಾಗಿದೆ ಎಂದು ಅವರು ಹೇಳಿದರು.
ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದ ಮತ್ತು ಹೇಳುವ ಎಲ್ಲ ಮಾತುಗಳಿಗೂ , ಕ್ರಮಗಳಿಗೂ ನಾನು ಬದ್ದನಿದ್ದೇನೆ. ಅವರು ಹೇಳುವ ಕಡೆ ಕಣ್ಮುಚ್ಚಿ ಸಹಿ ಮಾಡುತ್ತೇನೆ ಎಂದೂ ಅವರು ಹೇಳಿದರು.
ಬಾಲಚಂದ್ರ ಜಾರಕಿಹೊಳಿ ಮೊದಲ ನನ್ನ ಬಳಿ ಇಂತಹ ಸಿಡಿ ಇರೋದು ನಿಜಾನಾ ಎಂದು ಕೇಳಿದ್ದರು. ನಾನು ಅಂತಾದ್ದೇನೂ ಇಲ್ಲ ಎಂದು ಹೇಳಿದ್ದೆ. ನಾನು ನನ್ನ ಕೆಲಸದಲ್ಲಿ ತೊಡಗಿಕೊಂಡಿದ್ದೆ. ನನ್ನಲ್ಲಿ ಅಳುಕಿದ್ದರೆ ನಾನು ಹೀಗೆ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ನನಗೆ ರಾಜಕೀಯ ಮುಖ್ಯ ಅಲ್ಲ, ನನ್ನ ಕುಟುಂಬ ಮುಖ್ಯ. ನನ್ನ ಕುಟುಂಬದ ಗೌರವ ಮುಖ್ಯ ಎಂದು ಅವರು ತಿಳಿಸಿದರು.
5 ಕೋಟಿ ರೂ. ಮತ್ತು 2 ಫ್ಲ್ಯಾಟ್ ಗಳನ್ನು ಆ ಯುವತಿಗೆ ಕೊಡಿಸಲಾಗಿದೆ ಎಂದೂ ಜಾರಕಿಹೊಳಿ ಹೇಳಿದರು.
ರಾಜಿನಾಮೆ ನನ್ನ ಸ್ವಂತ ನಿರ್ಧಾರ. ಯಾರೂ ನನಗೆ ಹೇಳಿರಲಿಲ್ಲ ಎಂದೂ ಹೇಳಿದರು.
ಎಚ್.ಡಿ.ಕುಮಾರಸ್ವಾಮಿಗೆ ವಿಶೇಷ ಧನ್ಯವಾದ ತಿಳಿಸಿದ ರಮೇಶ ಜಾರಕಿಹೊಳಿ, ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೊತೆ ನಿಂತವರಿಗೆಲ್ಲ ಧನ್ಯವಾದ ಹೇಳಿದರು.
ರಮೇಶ್ ವಿರುದ್ಧ ಷಡ್ಯಂತ್ರ; ಸಿಡಿಗೆ 15 ಕೋಟಿ ಖರ್ಚು; ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ