Latest

ಜಾರಕಿಹೊಳಿ ಪ್ರಕರಣ ತನಿಖೆಗೆ ಎಸ್ಐಟಿ ರಚಿಸಿ ಸರಕಾರ ಆದೇಶ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸಐಟಿ) ರಚಿಸಿ ಸರಕಾರ ಆದೇಶ ಹೊರಡಿಸಿದೆ.

ಎಡಿಜಿಪಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ರಾಜ್ಯ ಸರಕಾರದ ನಡೆ ಕುತೂಹಲ ಮೂಡಿಸಿದೆ.

Home add -Advt

ವಿಡೀಯೋ ನಕಲಿಯೋ, ಅಸಲಿಯೋ ಎನ್ನುವ ಕುರಿತು ತನಿಖೆ ನಡೆಸಲಾಗುತ್ತದೆಯೋ ಎನ್ನುವ ಕುರಿತು ತನಿಖೆ ನಡೆಸಲಾಗುವುದೋ ಇಲ್ಲವೋ ಎನ್ನುವ ಮಾಹಿತಿ ಆದೇಶದಲ್ಲಿಲ್ಲ. ಕೇವಲ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ರೂಪಿಸಿದವರು ಯಾರು ಎನ್ನುವುದನ್ನು ತಿಳಿಯುವುದಕ್ಕಷ್ಟೆ  ತನಿಖೆ ಸೀಮಿತವಾಗಲಿದೆ ಎನಿಸುತ್ತದೆ. 

ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೊರಡಿಸಿರುವ ಆದೇಶದ ಪೂರ್ಣ ವಿವರ ಇಲ್ಲಿದೆ –

ದಿನಾಂಕ 9 3 2021 ರಂದು ಮಾಜಿ ಮಂತ್ರಿಗಳಾದ  ರಮೇಶ್ ಲ ಜಾರಕಿಹೊಳಿ  ನನಗೆ ಪತ್ರ ಬರೆದು,  ಅವರ ವಿರುದ್ಧ ದಿನಾಂಕ ೦೨-೦೩-೨೦೨೧ ರಂದು  ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ  ಒಂದು ಅರ್ಜಿ ನೀಡಿದ್ದು,  ಅದರಲ್ಲಿ ಅವರ ವಿರುದ್ಧ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿದ್ದು ಇದರಲ್ಲಿ ಹಲವಾರು ಜನ ಸೇರಿ ಷಡ್ಯಂತ್ರ ರೂಪಿಸಿರುವಂಥದ್ದು ಬಹಳ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿರುತ್ತಾರೆ. 

ಈ  ಹಿನ್ನೆಲೆಯಲ್ಲಿ ಈ  ಷಡ್ಯಂತ್ರವನ್ನು  ರೂಪಿಸಿರುವ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆಯನ್ನು ಮಾಡಲು ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ಹಾಗೂ ಅದರ ನೇತೃತ್ವವನ್ನು ಸೌಮೇಂದು ಮುಖರ್ಜಿ, ಎಡಿಜಿಪಿ ಇವರಿಗೆ ವಹಿಸುವುದು ಮತ್ತು ಈ ಬಗ್ಗೆ ಸಂಪೂರ್ಣ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ನೀಡುವಂತೆ ಸೂಚಿಸಿದೆ.

Related Articles

Back to top button