Kannada NewsLatest

ಜೊಲ್ಲೆ ಪ್ರೀಮಿಯರ್ ಲೀಗ್: 25,000 ಮತ್ತು ಟ್ರೋಫಿಯೊಂದಿಗೆ ಪ್ರಥಮಬಹುಮಾನ ಗೆದ್ದ ಕಿಂಗ್ಸ್ 11 ಬೆನಾಡಿ ತಂಡ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೆನಾಡಿ ಮತ್ತು ಕೋಡ್ನಿ ಗ್ರಾಮದಲ್ಲಿ ಬಸವಜ್ಯೋತಿ ಯೂಥ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಜೊಲ್ಲೆ ಪ್ರೀಮಿಯರ್ ಲೀಗ್ ಕ್ರೀಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನವಾಗಿ ಕಿಂಗ್ಸ್ 11 ಬೆನಾಡಿ ತಂಡಕ್ಕೆ 25,000 ಮತ್ತು ಟ್ರೋಫಿ, ಎರಡನೇಯ ಬಹುಮಾನ ಸನ್ ರೈಸರ್ಸ್ ಬೆನಾಡಿ ತಂಡಕ್ಕೆ 15,000 ಮತ್ತು ಟ್ರೋಪಿ, ಮೂರನೇ ಬಹುಮಾನ ಬೆನಾಡಿ ಸೂಪರ್ ಕಿಂಗ್ಸ್ ತಂಡಕ್ಕೆ 5,000 ಮತ್ತು ಟ್ರೋಪಿ ಹಾಗೂ ಕೋಡ್ನಿ ಗ್ರಾಮದಲ್ಲಿ ಪ್ರಥಮ ಬಹುಮಾನವನ್ನು ಎಸ್.ಕೆ ಸ್ಪೋರ್ಟ್ಸ್ ತಂಡಕ್ಕೆ 25,000 ಮತ್ತು ಟ್ರೋಪಿ, ಎರಡನೇಯ ಬಹುಮಾನ ಎಸ್.ಬಿ. ಸ್ಪೋರ್ಟ್ಸ್ ತಂಡಕ್ಕೆ 15,000 ಮತ್ತು ಟ್ರೋಪಿ, ಮೂರನೇ ಬಹುಮಾನ ಯಂಗ್ ಸ್ಟಾರ್ ತಂಡಕ್ಕೆ ಟ್ರೋಪಿಯನ್ನು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಯವರು ವಿತರಣೆ ಮಾಡಿದರು.

ಬಸವಪ್ರಸಾದ ಜೊಲ್ಲೆ ಮಾತನಾಡಿ ಜೊಲ್ಲೆ ಪ್ರೀಮಿಯರ್ ಲೀಗ್ ನಲ್ಲಿ ಈಗಾಗಲೇ ಅನೇಕ ತಂಡಗಳು ಭಾಗವಹಿಸಿವೆ. ಈ ಹಾಫ್ ಪೀಚ್ ಕ್ರೀಕೆಟ್ ಟೂರ್ನಿ ಇನ್ನು 1 ತಿಂಗಳ ಮಟ್ಟಿಗೆ ತಾಲೂಕಿನ ವಿವಿಧೆಡೆ ನಡೆಯಲಿವೆ. ಕ್ರಿಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಆಟಗಾರರಲ್ಲಿ ಸ್ಪರ್ಧಾತ್ಮಕ ಸ್ಪೂರ್ತಿ ಹಾಗೂ ನಾಯಕತ್ವದ ಗುಣ ಬೆಳೆಯಲು ಸಾಧ್ಯ. ಸೋಲೆ ಗೆಲುವಿನ ಸೋಪಾನ ಎಂದು ಸ್ಪರ್ಧಾಳುಗಳು ಗುರಿ ಸಾಧನೆಯತ್ತ ಮುನ್ನುಗ್ಗಬೇಕು ಎಂದು ನುಡಿದರು.

ಈ ಸಂಧರ್ಭದಲ್ಲಿ ಬಿಜೇಪಿ ಗ್ರಾಮಿಣ ಅಧ್ಯಕ್ಷರಾದ ಪವನ ಪಾಟೀಲ, ರಮೇಶ ಪಾಟೀಲ, ರಾವಸಾಹೇಬ ಜನವಾಡೆ, ಪಾಂಡು ಪಾಟೀಲ, ಬಾಳು ಜಾನಕರ, ಅರುಣ ಜಾವೇದ, ರಾಜು ದಿವಟೆ, ಅನಂತ ಕೇಸ್ತೆ ಆಟಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button