ಪ್ರಗತಿವಾಹಿನಿ ಸುದ್ದಿ; ನವದೆಹಲಿ: “ಜಲ ಜೀವನ ಮಿಷನ್ ಯೋಜನೆಯ ಗುರಿ ಸಾಧನೆ” ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ ಅದಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ಜಲ ಶಕ್ತಿ ರಾಜ್ಯ ಸಚಿವ ರತನಲಾಲ್ ಕಟಾರಿಯಾ ಉತ್ತರಿಸಿದ್ದಾರೆ.
ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯು 5ನೆ ಅಗಷ್ಟ 2019 ರಂದು ಜಾರಿಗೆ ಬಂದ ಸಮಯದಲ್ಲಿ 89.61 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ 24.51 ಲಕ್ಷ ಕುಟುಂಬಗಳು ಶೆ. 27% ರಷ್ಟು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ ಎಂದು ವರದಿಯಾಗಿದೆ. ಅಂದಿನಿಂದ 2.96 ಲಕ್ಷ ಶೆ.3% ರಷ್ಟು ಗ್ರಾಮೀಣ ಕುಟುಂಬಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಕರ್ನಾಟಕ ರಾಜ್ಯದ 91.19 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ 27.27 ಲಕ್ಷ ಶೆ.29.91% ರಷ್ಟು ಜನರು ನಲ್ಲಿ ನೀರಿನ ಸಂಪರ್ಕ ಮೂಕಲ ಕುಡಿಯುವ ನೀರನ್ನು ಪಡೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ವರದಿ ಮಾಡಿದೆ.
ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ 2019-20 ಸಾಲಿನಲ್ಲಿ ಒಟ್ಟು ನಿಗದಿಪಡಿಸಿದ ರೂ.546.06 ಕೋಟಿ ಮೊತ್ತವನ್ನು ರಾಜ್ಯಗಳು ಉಪಯೋಗಿಸಿಕೊಂಡಿವೆ. 2020-21 ನೇ ಸಾಲಿನ ರೂ..1189.40 ಕೋಟಿಗಳಷ್ಟು ರಾಜ್ಯಗಳಿಗೆ ನೀಡಿದೆ ಮತ್ತು ಇದುವರೆಗೆ ರೂ.296.29 ಕೋಟಿಗಳಷ್ಟು ಈ ಯೋಜನೆಗೆ ಕರ್ನಾಟಕ ಸರ್ಕಾರ ಪಡೆದಿದೆ. ಈ ಯೋಜನೆಗೆ ಜಿಲ್ಲಾವಾರು ಹಣವನ್ನು ಹಂಚಿಕೆ ರಾಜ್ಯ ಸರ್ಕಾರದ ಮಟ್ಟದಲ್ಲಿದೆ.
ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿಲ್ಲಿ ರಚಿಸಲಾದ ಪ್ರತಿಯೊಂದು ಸ್ವತ್ತನ್ನು ಜಿಯೋ-ಟ್ಯಾಗ್ ಮಾಡಲು ಅವಕಾಶವಿದೆ. ಬೆಳಗಾವಿ ಜಿಲ್ಲೆ ಸೇರಿದಂತೆ ದೇಶಾದ್ಯಂತ ಜೆಜೆಎಂ ಅಡಿಯಲ್ಲಿ ಮಾಡಿದ ದೈಹಿಕ ಸಾಧನೆಗಳ ಜಿಲ್ಲಾವಾರು ಮತ್ತು ಗ್ರಾಮ ಮಟ್ಟದ ಸ್ಥಿತಿ ಜೆಜೆಎಂ ಡ್ಯಾಶ್ಬೋರ್ಡ್ನಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ