Latest

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಒಂದು ವರ್ಷ ತಡವಾಗಿ ಪ್ರಶಸ್ತಿ ಪ್ರಕಟಿಸಲಾಗಿದೆ. ’ಅಕ್ಷಿ’ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದರೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡದ ಅವನೇ ಶ್ರೀಮನ್ನಾರಾಯಣ ಚಿತ್ರ ಅತ್ಯುತ್ತಮ ಸ್ಟಂತ್ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ಚಿತ್ರ : ಮರಕ್ಕರ್​- ಅರಬಿಕಾಡಾಲಿಂಟೆ-ಸಿಂಹಂ
ಅತ್ಯುತ್ತಮ ನಟ: ಅಸುರನ್​ ಸಿನಿಮಾಗಾಗಿ ಧನುಷ್​, ಭೋನ್ಸಲೆ ಚಿತ್ರಕ್ಕಾಗಿ ಮನೋಜ್​ ಬಾಜ್ಪೇಜಿ, ಅತ್ಯುತ್ತಮ ನಟಿ: ಪಂಕಾ ಮತ್ತು ಮಣಿಕರ್ಣಿಕಾ ಚಿತ್ರಕ್ಕಾಗಿ ನಟಿ ಕಂಗನಾ ರಣಾವತ್ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಸಹಾಯಕ ನಟ: ಸೂಪರ್​ ಡಿಲಕ್ಸ್​ ಚಿತ್ರಕ್ಕಾಗಿ ನಟ ವಿಜಯ್​ ಸೇತುಪತಿ
ಅತ್ಯುತ್ತಮ ಸಹಾಯಕ ನಟಿ: ದಿ ತಷ್ಕೆಂಟ್​ ಫೈಲ್ಸ್​ ಗಾಗಿ ನಟಿ ಪಲ್ಲವಿ ಜೋಷಿ
ಅತ್ಯುತ್ತಮ ನಿರ್ದೇಶಕ: ಬಹಟ್ಟರ್​ ಹುರೈನ್​ ಚಿತ್ರಕ್ಕಾಗಿ ಸಂಜಯ್​ ಪುರಾನ್ ಸಿಂಗ್​ ಚೌಹನ್
ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ
ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ
ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ
ಅತ್ಯುತ್ತಮ ಸಾಹಸ ನಿರ್ದೇಶನ ಅವನ್ನೇ ಶ್ರೀಮನ್ನಾರಾಯಣ
ಅತ್ಯುತ್ತಮ ಸಾಹಸ ನಿರ್ದೇಶನ ತೆಲುಗು: ಮಹರ್ಷಿ
ಅತ್ಯುತ್ತಮ ನಿರ್ದೇಶಕ : ತಮಿಳಿನ ವೆಟ್ರಿಮಾರನ್ ಚಿತ್ರದ ನಿರ್ದೇಶಕ ಅಸುರನ್
ಅತ್ಯುತ್ತಮ ತುಳು ಚಿತ್ರ: ಪಿಂಗಾರ
ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ
ಅತ್ಯುತ್ತಮ ತಮಿಳು ಚಿತ್ರ: ಅಸುರನ್​
ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ
ಅತ್ಯತ್ತಮ ಸಾಮಾಜಿಕ ಕಳಕಳಿ ಚಿತ್ರ: ಆನಂದಿ ಗೋಪಾಲ್​
ಅತ್ಯುತ್ತಮ ಸಂಗೀತ ನಿರ್ದೇಶ: ವಿಶ್ವಾಸಂ ಚಿತ್ರಕ್ಕಾಗಿ ಡಿ ಇಮಾನ್​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button