ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಎರಡನೇ ಬಾರಿ ಕಲಾಪ ಆರಂಭಾವಾದಾಗಲೂ ವಿಪಕ್ಷ ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆ ಮುಂದುವರೆಸಿದ್ದು, ಕಾಂಗ್ರೆಸ್ ಸದಸ್ಯರ ಮನವೊಲಿಕೆಗೆ ವಿಫಲರಾದ ಸ್ಪೀಕರ್ ಕಾಗೇರಿ ಮತ್ತೆ ಕಲಾಪವನ್ನು ಮುಂದೂಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದರಾಮಯ್ಯ, ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು. ಸಿಡಿ ಯುವತಿಗೆ ರಕ್ಷಣೆ ನೀಡಬೇಕು ಕೋರ್ಟ್ ಮೊರೆ ಹೋದ 6 ಸಚಿವರು ರಾಜೀನಾಮೆ ನೀದಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಇತರ ಸದಸ್ಯರು ದನಿಗೂಡಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಮತ್ತೆ ಪ್ರತಿಭಟನೆ ಮುಂದುವರೆಸಿದ್ದರಿಂದ ಸ್ಪೀಕರ್ ಕಾಗೇರಿ ಕಲಾಪವನ್ನು ಮಧ್ಯಾಹ್ನ 3 ಗಂಟೆವರೆಗೂ ಮುಂದೂಡಿದ್ದಾರೆ.
ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯುವತಿಗೆ ರಕ್ಷಣೆ ನೀಡಬೇಕು. ಪೊಲಿಸರು ಮನಸ್ಸು ಮಾಡಿದರೆ ಯುವತಿಯನ್ನು 24 ಗಂಟೆಯಲ್ಲಿ ಪತ್ತೆ ಹಚ್ಚುತ್ತಾರೆ. ಆದರೆ ಸರ್ಕಾರ ಸಿಡಿ ಪ್ರಕರಣ, ಇದೊಂದು ನಕಲಿ ಸಿಡಿ ಎಂದು ಬಿಂಬಿಸಲು ಹೊರಟಿದೆ. ಕೆಲಸ ಕೊಡುವುದಾಗಿ ಹೇಳಿ ತನ್ನನು ನಂಬಿಸಿ ಬಳಸಿಕೊಂಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಆರೋಪಿಸಿದ್ದಾಳೆ. ಹೀಗಾಗಿ ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹೈಕೋರ್ಟ್ ಮುಖ್ಯನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಸಿಡಿ ಪ್ರಕರಣದ ತನಿಖೆ ನಡೆಯಲಿ. ನಮಗೆ ಎಸ್ ಐಟಿ ತನಿಖೆಯ ಮೇಲೆ ಯಾವುದೇ ನಂಬಿಕೆ ಇಲ್ಲ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದ್ದರೂ ಕೂಡ ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ. ಎಫ್ ಐ ಆರ್ ದಾಖಲಾಗಿಲ್ಲ ಅಂದ ಮೇಲೆ ಇವರು ತನಿಖೆಯನ್ನು ಹೇಗೆ ಮಾಡುತ್ತಾರೆ? ಇದನ್ನು ಫೇಕ್ ಸಿಡಿ ಎಂದು ಮಾಡಲು ಹೊರಟಿದ್ದಾರೆ. ಸದನದಲ್ಲಿ ನಮ್ಮ ಹೋರಾಟ ಮುಂದಿವರೆಯುತ್ತದೆ. ಕೋರ್ಟ್ ಮೊರೆ ಹೋಗಿದ್ದ 6 ಸಚಿವರು ಕೂಡ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ