Kannada NewsKarnataka NewsLatest

ರಾಜಸ್ವ ನಷ್ಟ ಆರೋಪ: ಬೆಳಗಾವಿ ಸಬ್ ರಜಿಸ್ಟ್ರಾರ್ ಅಮಾನತು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆಸ್ತಿ ನೊಂದಣಿ ವೇಳೆ ದರವನ್ನು ಅಪಮೌಲ್ಯಗೊಳಿಸಿ ನೊಂದಣಿ ಮಾಡಲಾಗಿದೆ. ಇದರಿಂದ ಸರಕಾರಕ್ಕೆ 12.99 ಕೋಟಿ ರೂ ರಾಜಸ್ವ ನಷ್ಟವಾಗಿದೆ ಎಂದು ಆರೋಪಿಸಿ ಬೆಳಗಾವಿ ಸಬ್ ರಜಿಸ್ಟ್ರಾರ್ ವಿಷ್ಣುತೀರ್ಥ ಅವರನ್ನು ಅಮಾನತುಗೊಳಿಸಲಾಗಿದೆ.

2015-18 ಅವಧಿಯಲ್ಲಿ ಒಟ್ಟೂ 9 ದಸ್ತಾವೇಜುಗಳಿಂದ 1299.12 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಮುದ್ರಾಂಕ ಶುಲ್ಕ 12,78,79,056 ಹಾಗೂ ನೊಂದಣಿ ಶುಲ್ಕ 12,91,707 ರೂ. ಕಡಿಮೆ ಆಕರಿಸಲಾಗಿತ್ತು. ಈ ಬಗ್ಗೆ ವಿಷ್ಣುತೀರ್ಥ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿತ್ತು.

2015-16ರಲ್ಲಿ ಬೆಳಗಾವಿ ನಗರದಲ್ಲಿ ಕೃಷಿ ಜಮೀನಿನ ಮೌಲ್ಯ 26.84 ಲಕ್ಷ ರೂ. ಇತ್ತು. ವಾಣಿಜ್ಯ ಉದ್ದೇಶಕ್ಕಾಗಿ ಇದನ್ನು ಶೇ.75ರಷ್ಟು ಹೆಚ್ಚಿಸಿ 46.97 ಲಕ್ಷ ರೂ. ಮಾಡಿ 12,58,80,000 ರೂ. ಆಗುತ್ತದೆ. ಆದಾಗ್ಯೂ 77 ಕೋಟಿ ರೂ.ಗಳಿಗೆ ನೊಂದಣಿ ಮಾಡಲಾಗಿದೆ. ಎಲ್ಲವನ್ನೂ ನಿಯಮಾವಳಿ ಪ್ರಕಾರವೇ ಮಾಡಲಾಗಿದೆ ಎಂದು ವಿಷ್ಣುತೀರ್ಥ ಸಮಜಾಯಿಸಿ ನೀಡಿದ್ದರು.

ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ದಸ್ತಾವೇಜಿನಿಂದ ಸರಕಾರಕ್ಕೆ 12.99 ಕೋಟಿ ರೂ. ರಾಜಸ್ವ ನಷ್ಟವಾಗಿದೆ ಎಂದು ಆರೋಪಿಸಿ , ವಿಚಾರಣೆಯನ್ನು ಕಾಯ್ದಿಟ್ಟು ಅವರನ್ನು ಅಮಾನತು ಮಾಡಲಾಗಿದೆ.

ಎಲ್ಲವನ್ನೂ ನಿಯಮಾವಳಿ ಪ್ರಕಾರವೇ ಮಾಡಲಾಗಿದೆ. ಇದರಲ್ಲಿ ಸ್ವಲ್ಪವೂ ನಿಯಮಾವಳಿ ಉಲ್ಲಂಘನೆಯಾಗಿಲ್ಲ. ಆದರೆ ಸ್ಥಳ ಪರಿಶೀಲಿಸದೆ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ವಿಷ್ಣುತೀರ್ಥ ಪ್ರಗತಿವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.

ಅಮಾನತು ಆದೇಶ –  Vishnutheertha

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button