ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2019ರ ಲೋಕಸಭಾ ಚುನಾವಣೆ ವೇಳೆ ಸುರೇಶ ಅಂಗಡಿಯವರನ್ನು ಬದಲಾಯಿಸಿ ಬೇರೆಯವರಿಗೆ ಬೆಳಗಾವಿ ಟಿಕೆಟ್ ಕೊಡಬೇಕೆನ್ನುವ ಕೂಗು ಎದ್ದಿತ್ತು. ಆ ಸಂದರ್ಭದಲ್ಲಿ ಕೇಳಿ ಬಂದಿದ್ದ ಹೆಸರು ಮಹಾಂತೇಶ ವಕ್ಕುಂದ.
ಮಹಾಂತೇಶ ವಕ್ಕುಂದ ಬಿಜೆಪಿಯ ಸಕ್ರೀಯ ಕಾರ್ಯಕರ್ತ. ಹೆಚ್ಚು ಪ್ರಚಾರವಿಲ್ಲದೆ ಸಕ್ರೀಯವಾಗಿ ಪಕ್ಷದ ಕೆಲಸ ಮಾಡುತ್ತ ಬಂದ ಯುವಕ. ಹಾಗಾಗಿ 2019ರ ಚುನಾವಣೆಗೆ ಕೆಲವೇ ದಿನಗಳಿರುವಾಗ ಮಹಾಂತೇಶ ವಕ್ಕುಂದ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್ ಅವರೊಂದಿಗೆ ಮಾತುಕತೆಯನ್ನೂ ನಡೆಸಿತ್ತು. ಈ ಕುರಿತು ಪ್ರಗತಿವಾಹಿನಿ ಸುದ್ದಿ ಪ್ರಕಟಿಸಿತ್ತು ( ಬಿಜೆಪಿ ಹೈಕಮಾಂಡ್ ಬೆಳಗಾವಿಯಿಂದ ದೆಹಲಿಗೆ ಕರೆಸಿಕೊಂಡಿದ್ದು ಯಾರನ್ನು? ). ಆದರೆ ಅಂತಿಮವಾಗಿ ಸುರೇಶ ಅಂಗಡಿ ಅವರೇ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಈ ಬಾರಿಯೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಹಾಂತೇಶ ವಕ್ಕುಂದ ಅವರ ಹೆಸರು ಮೊದಲಿನಿಂದಲೂ ಇದೆ. ಪ್ರಗತಿವಾಹಿನಿ ಹಲವಾರು ಬಾರಿ ಅವರ ಹೆಸರನ್ನು ಉಲ್ಲೇಖಿಸುತ್ತಲೇ ಬಂದಿದೆ.
ಈಗ ಬಿಜೆಪಿಯ ಅಂತಿಮ ಆಕಾಂಕ್ಷಿಗಳ ಪಟ್ಟಿ ಅಮಿತ್ ಶಾ ಬಳಿ ಹೋಗುವ ಸಂದರ್ಭದಲ್ಲಿ ಮತ್ತೆ ಮಹಾಂತೇಶ ವಕ್ಕುಂದ ಹೆಸರು ಮುನ್ನೆಲೆಗೆ ಬಂದಿದೆ. ಅನೇಕ ಆಕಾಂಕ್ಷಿಗಳು ದೆಹಲಿಗೆ ತೆರಳಿ ಪ್ರಯತ್ನ ಮುಂದುವರಿಸಿದ್ದಾರೆ. ನಾಲ್ಕೈದು ಹೆಸರು ಪರಿಶೀಲನೆಯ ಪಟ್ಟಿಯಲ್ಲಿದೆ. ಯಾರು ಹಿತವರು ಬಿಜೆಪಿಗೆ ಈ ನಾಲ್ವರೊಳಗೆ?
ಇಂತಹ ಸಂದರ್ಭದಲ್ಲಿ, ಒಮ್ಮೆ ಅಚ್ಛರಿಯ ಹೆಸರು ಬರಬಹುದಾದಲ್ಲಿ ಮಹಾಂತೇಶ ವಕ್ಕುಂದ ಹೆಸರು ಬರಬಹುದು ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ವಿಶೇಷವೆಂದರೆ ಮಹಾಂತೇಶ ವಕ್ಕುಂದ 3 ತಿಂಗಳ ಹಿಂದೆ ಪಕ್ಷದ ಹಿರಿಯರನ್ನು ಭೇಟಿಯಾಗಿ ಅವಕಾಶ ಸಿಕ್ಕಿದರೆ ತಾವೂ ಸ್ಪರ್ಧಿಸಲು ಸಿದ್ಧ ಎನ್ನುವ ವಿಷಯವನ್ನು ತಿಳಿಸಿದ್ದು ಬಿಟ್ಟರೆ ಅಂತಹ ಪ್ರಯತ್ನವನ್ನೇನೂ ಮಾಡಿಲ್ಲ. ಬೆಂಗಳೂರು, ದೆಹಲಿ ಕಡೆಗೂ ಮುಖಮಾಡಲಿಲ್ಲ. ಆದಾಗ್ಯೂ ಕೊನೆಯ ಕ್ಷಣದಲ್ಲಿ ಅವರ ಹೆಸರು ಮತ್ತೆ ಸುದ್ದಿಯಲ್ಲಿದೆ.
ಗುರುವಾರ ಬಿಜೆಪಿ ತನ್ನ ಅಭ್ಯರ್ಥಿ ಅಖೈರುಗೊಳಿಸಬಹುದೆನ್ನುವ ನಿರೀಕ್ಷೆ ಎಲ್ಲರಲ್ಲಿದೆ.
ಕಾಂಗ್ರೆಸ್ ಈಗಾಗಲೆ ಸತೀಶ್ ಜಾರಕಿಹೊಳಿ ಹೆಸರನ್ನು ಘೋಷಿಸಿದ್ದಲ್ಲದೆ, ಬಿ ಫಾರ್ಮನ್ನು ಸಹ ಹಸ್ತಾಂತರಿಸಿದೆ. ಸತೀಶ್ ಜಾರಕಿಹೊಳಿಯೇ ಅಭ್ಯರ್ಥಿ: ಈಗ ಅಧಿಕೃತ
———
ಮಹಾಂತೇಶ ವಕ್ಕುಂದ ಅವರಿಗೆ ಸಂಬಂಧಿಸಿದ ಕೆಲವು ಸುದ್ದಿಗಳು –
ಬೆಳಗಾವಿ ಲೋಕಸಭೆ ಚುನಾವಣೆ: ಫೀಲ್ಡಿಗಿಳಿದ ಬಿಜೆಪಿ ಚಾಣಕ್ಯ -ಆಕಾಂಕ್ಷಿಗಳ ಪಟ್ಟಿ
ಬಿಜೆಪಿ ಆ ಮೂವರನ್ನು ಉಸ್ತುವಾರಿ ಮಾಡಿದ್ದೇಕೆ?; ಬೆಳಗಾವಿಗೆ ಸಂಭವನೀಯ ಅಭ್ಯರ್ಥಿ ಯಾರು?
ಕೋರೋನಾ ವೈರಸ್ ನಿರ್ವಹಣೆಗಾಗಿ 4 ಸದಸ್ಯರ ಸಮಿತಿ
20 ಸಾವಿರ ಆಯುರ್ವೇದ ಚೂರ್ಣ ವಿತರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ