ರಾಷ್ಟ್ರೀಯ ಪ್ಯಾರಾ ಸ್ವೀಮಿಂಗ್ ಚಾಂಪಿಯನ್‍ಶಿಫ್: ಲಿಂಗರಾಜ ಕಾಲೇಜು ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚಿಗೆ ಬೆಂಗಳೂರಿನಲ್ಲಿ 20 ರಿಂದ 22 ಮಾಚ್ 2021 ರಂದುಜರುಗಿದ 20ನೇ ರಾಷ್ಟ್ರೀಯ ಪ್ಯಾರಾ ಸ್ವೀಮಿಂಗ್ (ಅಂಗವಿಕಲರ ಈಜು)ನಲ್ಲಿ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಯನ್ನುಗೈದಿದ್ದಾರೆ.
ಬಿ.ಕಾಂ.ಮೊದಲ ವರ್ಷದ ವಿದ್ಯಾರ್ಥಿನಿ ಸಿಮ್ರನ್ ಗುಂಡಲ್ಕರ್ ಹಿರಿಯ ಮಹಿಳೆಯರ ಎಸ್6 ವೈಯಕ್ತಿಕ ವಿಭಾಗದಲ್ಲಿ 3 ಚಿನ್ನದ ಪದಕಗಳನ್ನು ಪಡೆದಿದ್ದಾಳೆ.50 ಮೀ.ಫ್ರೀಸ್ಟ್ಯಾಲ್ ಹಾಗೂ 100 ಮೀ.ಫ್ರೀಸ್ಟ್ಯಾಲ್ ಮತ್ತು 50 ಮೀ.ಬ್ಯಾಕ್ ಸ್ಟ್ರೋಕ್‍ದಲ್ಲಿಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ.
ಬಿ.ಕಾಂ. ಮೊದಲ ವರ್ಷದ ಸಾಹಿಲ್‍ಜಾಧವ ಹಿರಿಯ ಪುರುಷರ ಎಸ್9 ವೈಯಕ್ತಿಕ ವಿಭಾಗದಲ್ಲಿ 100 ಮೀಟರ್ ಬಟರ್‍ಫ್ಲ್ಯಾದಲ್ಲಿ ಬೆಳ್ಳಿ ಪದಕವನ್ನು ಹಾಗೂ 200 ಮೀ.ಮಿಡ್ಲೆಯಲ್ಲಿಕಂಚಿನ ಪದಕವನ್ನು ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹಾರ್ದಿಕವಾಗಿ ಅಭಿನಂದಿಸಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಆರ್.ಪಾಟೀಲ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ