ಗೋಕಾಕಲ್ಲಿ ತಮ್ಮನನ್ನು ನಿಲ್ಲಿಸಿ, ಕನಕಪುರದಲ್ಲಿ ಡಿಕೆಶಿ ಸೋಲಿಸುತ್ತೇನೆ – ರಮೇಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಡಿ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ ಷಢ್ಯಂತ್ರ ಇದೆ ಎಂದು ಯುವತಿಯ ಪೋಷಕರೇ ಆರೋಪ ಮಾಡಿದ್ದಾರೆ. ಅವರು ರಾಜಕಾರಣದಲ್ಲಿರಲು ನಾಲಾಯಕ್. ಗೋಕಾಕದಲ್ಲಿ ನನ್ನ ತಮ್ಮನನ್ನು ಚುನಾವಣೆಗೆ ನಿಲ್ಲಿಸಿ ಕನಕಪುರದಲ್ಲಿ ಡಿ.ಕೆ.ಶಿವಕುಮಾರ ಸೋಲಿಸಲು ಏನು ಬೇಕೋ ಅದನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಘರ್ಜಿಸಿದ್ದಾರೆ.
ಡಿ.ಕೆ.ಶಿವಕುಮಾರ ವಿರುದ್ಧ ಇಂದೇ ಪೊಲೀಸ್ ದೂರು ದಾಖಲಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವತಿಯ ಪೋಷಕರು ಡಿ.ಕೆ.ಶಿವಕುಮಾರ ವಿರುದ್ಧ ಆರೋಪ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಅವರಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಎಲ್ಲ ಪಕ್ಷಗಳ ನಾಯಕರು ಗಮನಿಸಬೇಕು. ಇಂತವರಿಗೆ ರಾಜಕೀಯದಲ್ಲಿ ಅವಕಾಶ ನೀಡಬಾರದು. ನನ್ನ ಬಳಿ ಅವರ ವಿರುದ್ಧ 11 ಸಾಕ್ಷಿಗಳಿವೆ. ಎಲ್ಲವನ್ನೂ ಎಸ್ಐಟಿಗೆ ಕೊಡುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ಕುತೂಹಲ
ಡಿಕೆಶಿ ನಮ್ಮ ಮಗಳನ್ನು ಒತ್ತೆಯಾಳು ಮಾಡಿದ್ದಾರೆ: ಯುವತಿಯ ಪೋಷಕರ ಗಂಭೀರ ಆರೋಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ