Kannada NewsKarnataka NewsLatest

ಬೆಳಗಾವಿಗೆ ಇಂದು ಡಿ.ಕೆ.ಶಿವಕುಮಾರ್ ಎಂಟ್ರಿ; ಕುತೂಹಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭಾನುವಾರ ಬೆಳಗಾವಿಗೆ ಎಂಟ್ರಿ ಕೊಡಲಿದ್ದಾರೆ. ಉಪಚುನಾವಣೆ ಹಿನ್ನೆಲೆಯಲ್ಲಿ ಅವರು ಆಗಮಿಸುತ್ತಿದ್ದರೂ ಸಿಡಿ ಪ್ರಕರಣ ತೀವ್ರ ಸಂಚಲನ ಮೂಡಿಸಿರುವ ಸಂದರ್ಭದಲ್ಲಿ ಮಹತ್ವ ಪಡೆದಿದೆ.

ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸೋಮವಾರ ಸತೀಶ್ ಜಾರಕಿಹೊಳಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಭಾನುವಾರವೇ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಹೂಡುತ್ತಿದ್ದಾರೆ. ಸಂಜೆ ಅವರು ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರ ಸಭೆಯನ್ನೂ ನಡೆಸಲಿದ್ದಾರೆ. ಚುನಾವಣೆ ಗೆಲ್ಲುವ ಹಿನ್ನೆಲೆಯಲ್ಲಿ ನಡೆಸಬೇಕಾದ ತಂತ್ರಗಳ ಕುರಿತು ಅವರು ಚರ್ಚಿಸುವರು.

ಸಿಡಿ ಪ್ರಕರಣದ ಕೇಂದ್ರ

ಪ್ರಸ್ತುತ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ನಡೆದಿರುವುದು ಬೆಂಗಳೂರು ಆಗಿದ್ದರೂ ಇದರ ಪ್ರಮುಖ ವ್ಯಕ್ತಿಯಾಗಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ತವರು ಬೆಳಗಾವಿ. ಇದಲ್ಲದೆ ಯುವತಿಯ ಪೋಷಕರು ಬೆಳಗಾವಿಯ ವಿಳಾಸ ನೀಡಿದ್ದು, ಅವರು ಬೆಳಗಾವಿಯವರು ಎನ್ನುವ ರೀತಿಯಲ್ಲಿ ಬಿಂಬತವಾಗುತ್ತಿದೆ.

ಅಲ್ಲದೆ ನಿನ್ನೆಯಷ್ಟೆ ಡಿ.ಕೆ.ಶಿವಕುಮಾರ ಈ ಸಿಡಿ ಪ್ರಕರಣದ ಹಿಂದಿದ್ದಾರೆ. ಅವರೇ ಷಢ್ಯಂತ್ರ ನಡೆಸಿದ್ದಾರೆ ಎಂದು ರಮೇಶ ಜಾರಕಿಹೊಳಿ ಆರೋಪಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಗೆ ಶಿವಕುಮಾರ ಆಗಮನ ಕುತೂಹಲ ಮೂಡಿಸಿದೆ.

ಸಿಡಿ ಪ್ರಕರಣಕ್ಕೆ ಶಿವಕುಮಾರ ರಮೇಶ ಜಾರಕಿಹೊಳಿ ತವರಿನಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ? ಚುನಾವಣೆಯಲ್ಲಿ ಈ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತದೆಯೇ? ಎನ್ನುವ ಕುತೂಹಲ ಮೂಡಿದೆ.

ಇನ್ನು 15 ದಿನ ಬೆಳಗಾವಿ ಎಲ್ಲ ಪ್ರಮುಖ ರಾಜಕಾರಣಿಗಳ ಕೇಂದ್ರವಾಗಲಿದ್ದು, ಸಿಡಿ ಪ್ರಕರಣ ಯಾವ ರೀತಿಯ ಆರೋಪ-ಪ್ರತ್ಯಾರೋಪಗಳಿಗೆ ಎಡೆಮಾಡಿಕೊಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ರಾಜಕೀಯ ಚಟುವಟಿಕೆಗಳು ಏಪ್ರಿಲ್ 15ರ ವರೆಗೆ ಬೆಳಗಾವಿಗೆ ಶಿಫ್ಟ್ ಆಗಲಿದೆ.

 

ಸಿಡಿ ಲೇಡಿಯಿಂದ 5ನೇ ವಿಡಿಯೋ ಬಾಂಬ್

ಗೋಕಾಕಲ್ಲಿ ತಮ್ಮನನ್ನು ನಿಲ್ಲಿಸಿ, ಕನಕಪುರದಲ್ಲಿ ಡಿಕೆಶಿ ಸೋಲಿಸುತ್ತೇನೆ – ರಮೇಶ ಜಾರಕಿಹೊಳಿ

 ರಂಗುರಂಗಿನ ಆಟ ಮೈಮನಗಳಲ್ಲಿ….!

ಪವಿತ್ರತೆಯ ಸಂಕೇತ ಹೋಳಿ : ಹೋಳಿ ಆಡುವ ಮುನ್ನ ಈ ಲೇಖನ ಓದಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button