Latest

28 ದಿನಗಳ ಬಳಿಕ ಸಿಡಿ ಯುವತಿ ಪ್ರತ್ಯಕ್ಷ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ.

ಸಿಡಿ ಪ್ರಕರಣ ಬಹಿರಂಗವಾಗಿ 28 ದಿನಗಳ ಬಳಿಕ ಸಂತ್ರಸ್ತ ಯುವತಿ ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಪೊಲೀಸ್ ಭದ್ರತೆಯಲ್ಲಿ ಮಾಧ್ಯಮಗಳು, ವಕೀಲರು, ನೆರೆದಿದ್ದ ಜನರ ಕಣ್ತಪ್ಪಿಸಿ ಯುವತಿಯನ್ನು ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಡಿ ಯುವತಿ ಪರ ವಕೀಲ ಜಗದೀಶ್, ಸಂತ್ರಸ್ತ ಯುವತಿ ಈಗಗಾಲೇ ಕೋರ್ಟ್ ಹಾಲ್ ನಲ್ಲಿದ್ದು, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತಿದ್ದಾಳೆ. ಮಧ್ಯಾಹ್ನ 2:30ಕ್ಕೇ ಯುವತಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ ಎಂದರು.

ಯುವತಿಯ ಭದ್ರತೆ ಹಾಗೂ ಗೌಪ್ಯತೆಯ ದೃಷ್ಟಿಯಿಂದ ಎಲ್ಲರ ಕಣ್ತಪ್ಪಿಸಿ ಕೋರ್ಟ್ ಮುಂದೆ ಹಾಜರುಪಡಿಸಬೇಕಿತ್ತು. ಈ ನಿಟ್ಟಿನಲ್ಲಿ ಈಗಾಗಲೇ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಗಿ ತಿಳಿಸಿದ್ದಾರೆ.

ಯುವತಿ ಮಾನಸಿಕವಾಗಿ ಸದೃಢಳಾಗಿದ್ದಾಳೆ, ದೈಹಿಕವಾಗಿ ಸ್ವಲ್ಪ ಬಳಲಿದ್ದು, ತನಗಾದ ಅನ್ಯಾಯದ ಬಗ್ಗೆ ನ್ಯಾಯಾಧೀಶರ ಮುಂದೆ ಧೈರ್ಯವಾಗಿ ಹೇಳಿಕೆಗಳನ್ನು ದಾಖಲಿಸಲಿದ್ದಾಳೆ ಎಂದು ತಿಳಿಸಿದರು.

ಸಿಡಿ ಲೇಡಿ ಕೋರ್ಟ್ ಗೆ ಹಾಜರಾಗುವ ಬಗ್ಗೆ ಸ್ಫೋಟಕ ಸುಳಿವು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button