Latest

ರೀಲ್ ಬದಲು ರಿಯಲ್ ಆಯ್ತು: ನಟ ಉಪೇಂದ್ರಗೆ ಗಾಯವಾಯ್ತು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿನಿಮಾ ಚಿತ್ರೀಕರಣದ ವೇಳೆ ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಕಬ್ಬಿಣದ ರಾಡ್ ತಗುಲಿ ಏಟಾಗಿರುವ ಘಟನೆ ನಡೆದಿದೆ. ‘ಕಬ್ಜ’ ಚಿತ್ರದ ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

ಕಬ್ಬಿಣದ ರಾಡ್ ನಿಂದ ಉಪೇಂದ್ರ ತಲೆಗೆ ಹೊಡೆಯುವ ದೃಶ್ಯವನ್ನು ಚಿತ್ರಿಕರಿಸಲಾಗುತ್ತಿತ್ತು. ಈ ವೇಳೆ ಕಬ್ಬಿಣದ ರಾಡ್ ನಿಜವಾಗಿಯೂ ಉಪೇಂದ್ರ ತಲೆಗೆ ಅಪ್ಪಳಿಸಿದೆ. ಪೈಟರ್ ಹಿಂದಿನಿಂದ ಬೀಸಿದ ರಾಡ್ ನಿಂದ ಉಪೇಂದ್ರ ತಪ್ಪಿಸಿಕೊಳ್ಳುವ ಸೀನ್ ಇದಾಗಿತ್ತು. ಆದರೆ ತಪ್ಪಿಸಿಕೊಳ್ಳುವಷ್ಟರಲ್ಲಿ ರಾಡ್ ತಲೆಗೆ ಬಂದು ಹೊಡೆದಿದೆ.

Home add -Advt

ಅದೃಷ್ಟವಶಾತ್ ಗಂಭೀರ ಗಾಯವಾಗಿಲ್ಲ. ಸ್ವಲ್ಪ ಸಮಯದ ವಿಶ್ರಾಂತಿ ಬಳಿಕ ಉಪೇಂದ್ರ ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಪಾನಮತ್ತನಾಗಿ ಮನೆಗೆ ಬೆಂಕಿಯಿಟ್ಟ ಪಾಪಿ; 6 ಜನ ಸಜೀವದಹನ

ರಾಜ್ಯಾದ್ಯಂತ ಶಾಲೆಗಳು ಬಂದ್ : ಇಲ್ಲಿದೆ ಅಧಿಕೃತ ಆದೇಶ

Related Articles

Back to top button