Latest

ರಾಷ್ಟ್ರ ರಕ್ಷಣೆಗಾಗಿ ಹುಟ್ಟಿರುವ ಪಕ್ಷವೇ ಬಿಜೆಪಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಷ್ಟ್ರೀಯ ವಿಚಾರಧಾರೆಗಳೊಂದಿಗೆ, ಪಕ್ಷಕ್ಕಿಂತ ರಾಷ್ಟ್ರ ಮೊದಲು ಎಂಬ ವಿಚಾರದೊಂದಿಗೆ, ರಾಷ್ಟ್ರ ರಕ್ಷಣೆಗಾಗಿ ದೇಶದ ಜನತೆಯ ಸೇವೆಗಾಗಿ ಹುಟ್ಟಿಕೊಂಡಿರುವ ರಾಜಕೀಯ ಪಕ್ಷ ಎಂದರೆ ಭಾರತೀಯ ಜನತಾ ಪಾರ್ಟಿ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಬಜೆಪಿ ಚುನಾವಣಾ ಕಾರ್ಯಾಲಯದ ಮುಂದೆ ಬಿಜೆಪಿ ಸಂಸ್ಥಾಪನಾ ದಿನ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ತುಷ್ಟೀಕರಣದ ನೀತಿ ದೇಶದ ರಕ್ಷಣೆಯಲ್ಲಿ ವಿಫಲವಾಗಿರುವದನ್ನು ಕಂಡು ದೇಶ ಭಕ್ತರು ಕೂಡಿ ಜನಸಂಘ ಸ್ಥಾಪಿಸಿದರು. ಆದರೆ ದೇಶದ ಆಡಳಿತದಲ್ಲಿ ಕಪ್ಪು ಚುಕ್ಕೆಯಾದ ತುರ್ತುಪರಿಸ್ಥಿತಿಯ ನಂತರ ಜನಸಂಘ, ಸ್ವತಂತ್ರ ಪಕ್ಷಗಳು ಒಟ್ಟಾರೆ ಸೇರಿ ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ಭಾರತೀಯ ಜನತಾ ಪಕ್ಷ ಸ್ಥಾಪನೆಯಾಯಿತು ಆದರೆ ರಾಜಕೀಯ ಪಕ್ಷಗಳಲ್ಲಿಯ ಅಸಹಕಾರ ತೋರಿದ್ದರಿಂದ 1980 ಏಪ್ರಿಲ್ 6ರಂದು ಮುಂಬೈನಲ್ಲಿ ಅಜಾತ ಶತೃ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸ್ಥಾಪನೆಯಾಯಿತು. ತತ್ವ ಸಿದ್ಧಾಂತದ ಆಧಾರದ ಮೇಲೆ ಸ್ಥಾಪನೆಯಾದ ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನು ರಾಷ್ಟ್ರೀಯ, ರಾಜ್ಯ, ಜಿಲ್ಲೆ, ಮಂಡಲ, ಬೂತ್ ಮಟ್ಟದಲ್ಲಿ ಪದಾಧಿಕಾರಿಯಾಗುವ ಹಾಗೂ ಪಕ್ಷದ ತತ್ವ ಸಿದ್ಧಾಂತದಡಿಯಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮವನ್ನು ಗುರುತಿಸಿ ಅವರಿಗೆ ಸ್ಥಾನಮಾನವನ್ನು ಕೊಡುವ ಏಕೈಕ ಪಕ್ಷ ಬಿಜೆಪಿ ಆಗಿದೆ ಎಂದರು.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಜಮ್ಮು ಕಾಶ್ಮೀರ್ 370ನೇ ವಿಧಿಯ ರದ್ದತಿ, ರಾಮ ಮಂದಿರ ನಿರ್ಮಾಣ, ಗಡಿ ರಕ್ಷಣಡಯಲ್ಲಿ ತನ್ನದೇ ಸಾರ್ವಭೌಮತ್ವವನ್ನು ಸಾರುತ್ತಿರುವ ಭಾರತ ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜಗತ್ತಿನಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ನಮ್ಮ ತಂದೆಯವರು ಜನಸಂಘದಿಂದ ಹುಬ್ಬಳ್ಳಿ-ಧಾರವಾಡ ಮೇಯರ್ ಆಗಿದ್ದ ಸಂದರ್ಭದಲ್ಲಿ ಅವರ ಜೊತೆಗೂಡಿ ಬಾಂಬೆ ಮುಂಬೈ ಮುಂಬೈಯಲ್ಲಿ ಬಿಜೆಪಿ ಸಂಸ್ಥಾಪಕ ಸ್ಥಾಪನ ದಿನದಂದು ನಾನು ಪಾಲ್ಗೊಂಡಿರುವುದು ನನ್ನ ಸುದೈವ ಎಂದರು

ಬಿಜೆಪಿ ರಾಜ್ಯಾ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಪ್ರಪಂಚದಲ್ಲಿ 18 ಕೋಟಿ ಕಾರ್ಯಕರ್ತರನ್ನು ಹೊಂದಿದೆ ಅತಿ ದೊಡ್ಡದಾದ ಪಕ್ಷ ಬಿಜೆಪಿ ಯಾಗಿದ್ದು ಕೇವಲ ಎರಡು ಸ್ಥಾನದಿಂದ ಇಂದು 303 ಸಂಸದರನ್ನು ಹೊಂದಿದೆ ಸರ್ವವ್ಯಾಪಿ ಸರ್ವಸ್ಪರ್ಶಿ ಪಕ್ಷ ಬಿಜೆಪಿ ಯಾಗಿದೆ ಎಂದರು.

ವೇದಿಕೆಯ ಮೇಲೆ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ್ ಮಹಾನಗರ ಅಧ್ಯಕ್ಷ ಶಶಿ ಪಾಟೀಲ್ ರಾಜ್ಯ ವಕ್ತಾರ ಎಂ ಬಿ ಜೀರಲಿ, ಶಾಸಕ ಅನಿಲ್ ಬೆಣಕೆ, ಶಶಿಕಾಂತ ಪಾಟೀಲ್, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ ಮಾಜಿ ಅಧ್ಯಕ್ಷ ರಾಜೇಂದ್ರ ಹರಕುಣಿ ಯುವ ಮೊರ್ಚಾ ರಾಜ್ಯ ಕಾರ್ಯದರ್ಶಿ ಅರವಿಂದ ರೆಡ್ಡಿ ಇದ್ದರು.

ಕಾರ್ಯಕ್ರಮದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಕ್ಕಲಕೋಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮೋಹಿತೆ ಸುಭಾಷ್ ಪಾಟೀಲ್ ಸಂದೀಪ್ ದೇಶಪಾಂಡೆ ಮುರುಗೇಂದ್ರ ಗೌಡ ಪಾಟೀಲ್ ದಾದಾ ಗೌಡ ಬಿರಾದಾರ್ ಗಿರೀಶ್ ದೊಂಗಡಿ ಮುಕ್ತಾರ್ ಪಟಾನ್ ದೀಪ ಕುಡುಚಿ ನೀನಾ ತೋಪನ್ನವರ್ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮ ನವರ ಮಹಾನಗರ ಜಿಲ್ಲಾ ವಕ್ತಾರ ಇಂಡಿಯನ್ ಹನುಮಂತ ಬಂಗಾಲಿ ಸಂಜೆ ಕಂಚಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್ ಎಸ್ ಸಿದ್ದನಗೌಡ ನಾಗನಗೌಡ ದೊಡ್ಡಗೌಡರ್ ಧನ್ಯಕುಮಾರ್ ಪಾಟೀಲ್ ಮಹಂತೇಶ ಒಕ್ಕುಂದ ರುದ್ರನ ಚಂದ್ರಗಿ ಅಭಯ್ ಅವಲಕ್ಕಿ ವಿಜಯ ಗುಡ್ಡ ದಾರಿ ಕಾರ್ಯಕರ್ತರು ಪದಾಧಿಕಾರಿಗಳು ದಾದಾ ಗೌಡ ಬಿರಾದರ್ ಸ್ವಾಗತಿಸಿ ನಿರೂಪಿಸಿದರು ಮುರುಗನ್ ಗೌಡ ಪಾಟೀಲ್ ವಂದಿಸಿದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button