ವಿದ್ವಾನ್ ಅರುಣ ಹೆಗಡೆ
ಪ್ರಪಂಚದಲ್ಲಿ ಅಧರ್ಮ ಹೆಚ್ಚುತ್ತಿದೆ, ಆದಕಾರಣ ಕರೋನಾ ರೋಗವೂ ಹೆಚ್ಚುತ್ತಿದೆ ಎಂದು ಹೆದರುವ ಅಗತ್ಯವಿಲ್ಲ. ಎಲ್ಲ ಜನಾಂಗಗಳಲ್ಲಿಯೂ ಧರ್ಮದಿಂದ ಬಾಳುವವರ ಸಂಖ್ಯೆ ಹೆಚ್ಛಾಗಿರುವುದನ್ನು ನಾವು ಕಾಣುತ್ತಿದ್ದೇವೆ.
ಪರರ ಸೊತ್ತು-ಸಂಪತ್ತು, ಪರಸ್ತ್ರೀ-ಪರಪುರುಷ ವ್ಯಾಮೋಹ , ದ್ವೇಷ-ಅಸೂಯಾದಿಗಳೆಲ್ಲವೂ ದಿನೇ ದಿನೇ ಕುಂಠಿತವಾಗುವದನ್ನು ಕಾಣುತ್ತಿದ್ದೇವೆ.
ತಾನು ಚೆನ್ನಾಗಿ ವಿದ್ಯೆಯನ್ನು ಅಭ್ಯಸಿಸಿ, ಉತ್ತಮವಾದ ಉದ್ಯೋಗವನ್ನು ಪಡೆದು ಹಣ ಸಂಪಾದಿಸಬೇಕು. ತಾನು ಗಳಿಸಿದ್ದರಲ್ಲಿ ಬಾಳಬೇಕೆಂಬ ಪ್ರಜ್ಞೆ ಈಗಿನ ಅಧಿಕ ಜನರಲ್ಲಿ ಇದೆ.
ಭಾರತೀಯರ ಧರ್ಮ, ಸಂಸ್ಕೃತಿಯಲ್ಲಿ ಪಾಶ್ಛಾತ್ಯರೂ ನಂಬಿಕೆ ಇಟ್ಟು ಅನುಸರಿಸಿ ಉತ್ತಮವಾದ ಜೀವನಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.
ಅಂತಹ ಭಾರತೀಯ ಸಂಸ್ಕಾರ -ಸಂಸ್ಕೃತಿಯ ಉತ್ತಮ ಜೀವನೋಪಾಯಗಳನ್ನು ತಿಳಿಸಲಿಚ್ಛಿಸುತ್ತೇವೆ.
೧. ನೈತಿಕತೆಯು ಅಧಃಪತನ ಹೊಂದದಿರಲಿ.
೨. ವ್ಯಸನಗಳಿಗೆ ಬಲಿಯಾಗದಿರಿ.
೩. ಆದದ್ದಾಯಿತು, ಇನ್ನಾದರೂ ಒಳ್ಳೆಯ ದಾರಿ ಹಿಡಿಯೋಣ.
೪. ಆಯುರ್ವೇದ- ಶಾಶ್ವತ ರೋಗ ನಿವಾರಕ.
೫. ಸಜ್ಜನರ ಸಂಗ-ಸಂಘ.
೬. ಮನೋಜವನಂತೆ ಮನೋಬಲ
೭. ಬಾಹ್ಯ -ಆಂತರಿಕ ಶುದ್ಧಿ
೮. ನಮ್ಮಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ
೯. ಇರುವ ಮನೆಯೇ ದೇವರಮನೆಯಾಗಲಿ.
೧೦. ಮರೆಯದಿರಿ : ನಾವು ಕಾಲಕ್ಕೆ ಅಧೀನರು.
೧೧. ಸಕಲ ಜಗತ್ತಿಗೆ ಹಿತವನ್ನು ಬಯಸೋ ಮನಸ್ಸಿರಲಿ.
೧೨. ಸರ್ವತೋಮುಖನನ್ನು ಕಾಣಿರೋ !
ಉತ್ತಮ ಜೀವನ ಪದ್ಧತಿಯಿಂದಲೇ ಕರೋನಾದಂತಹ ಮಹಾಮಾರಿ ನಿವಾರಣೆ ಸಾಧ್ಯ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ