ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಠಾಧೀಶರ ಆಶೀರ್ವಾದ, ಮಾರ್ಗದರ್ಶನದ ಮೇರೆಗೆ ಕೊರೋನಾ ಹೊಡೆದೊಡಿಸಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಶ್ರಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ನಗರದ ಹುಕ್ಕೇರಿ ಹಿರೇಮಠದಲ್ಲಿ ಆಯೋಜಿಸಿದ್ದ ಅಗ್ಮಿಹೋತ್ರ, ಧನ್ವಂತರಿ ಸುದರ್ಶನ ಹೋಮದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ನಾವೆಲ್ಲ ಸುದೈವಿಗಳು ಪೂಜ್ಯರ ಆಶೀರ್ವಾದದಿಂದ ನಾಡನ್ನು ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ. ದೇಶದ ಜನರ ಬಹಳ ವರ್ಷಗಳ ಕನಸು ಪ್ರಭು ಶ್ರೀರಾಮಚಂದ್ರನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕೆಂದುಕೊಂಡಿದ್ದೇವೊ ಅದು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೆಲಸ ಪ್ರಾರಂಭವಾಗಿದೆ. ಈ ಮಂದಿರಕ್ಕೆ ಸಾಮಾನ್ಯ ಜನರು ಸುಮಾರು 2350 ಕೋಟಿ ಹಣ ಕೊಟ್ಟಿರುವುದು ರಾಮನ ಬಗ್ಗೆ ಎಷ್ಟು ಶ್ರದ್ದೆ ಇದೆ ಎನ್ನುವುದು ತಿಳಿಯುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಗತ್ತು ಅಶ್ಚರಿ ರೀತಿ ನೋಡುವಂತೆ ದೇಶವನ್ನು ಕೊಂಡೊಯ್ಯುತ್ತಿದ್ದಾರೆ. ಕೊರೋನಾ ಮಹಾಮಾರಿ ಕಾಡುತ್ತಿದೆ. ಈಗಾಗಲೇ ಕೆಲ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಹಾಕಲಾಗಿದೆ. ಗುರುವಾರ ಸಂಜೆ ಬೆಂಗಳೂರಿಗೆ ಹೋದ ಮೇಲೆ ಮತ್ತಷ್ಟು ಕ್ರಮ ಕೈಗೊಳ್ಳಲು ಅಧಿಕಾರಗಳ ಜತೆ ಸಭೆ ನಡೆಸಲಿದ್ದೇನೆ. ಹುಕ್ಕೇರಿ ಹಿರೇಮಠದ ಶ್ರೀಗಳು ಅಗ್ನಿಹೋತ್ರ ಮಾಡುವುದರಿಂದ ಕೊರೋನಾ ದೂರ ಮಾಡಬಹುದು ಎಂದಿದ್ದಾರೆ. ಇದನ್ನು ಎಲ್ಲ ಕಡೆ ಮಾಡಲು ಆದೇಶ ಮಾಡುತ್ತೇನೆ. ಬರುವ ದಿನಗಳಲ್ಲಿ ಕೊರೋನಾ ಮಹಾಮಾರಿ ದೂರವಾಗಬೇಕೆಂದು ಮಠಾಧೀಶರು ಆಶೀರ್ವಾದ ಮಾಡಬೇಕು. ನಿಮ್ಮ ಅಣತೆ, ಮಾರ್ಗದರ್ಶನದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಿಎಂ ಯಡಿಯೂರಪ್ಪ ದೈವ ಭಕ್ತರು. ದೈವದಲ್ಲಿ ಅಪಾರವಾರ ಭಕ್ತಿ ಇಟ್ಟವರು. ಸ್ವಾಮೀಜಿಗಳ ಮಾರ್ಗದರ್ಶನ ಅವರು ಕೆಲಸ ಮಾಡುತ್ತಿದ್ದಾರೆ. ಜಗತ್ತಿಗೆ ಸಮಸ್ಯೆ ಬಂಗಾಗ ಆದ್ಯಾತ್ಮದಲ್ಲಿ ಪರಿಹಾತ ಕಂಡುಕೊಂಡಿದ್ದು ಭಾರತ. ನಮ್ಮ ದೇಶದಲ್ಲಿ ಆಧ್ಯಾತ್ಮದ ಬಗ್ಗೆ ಹಚ್ಚಿನ ಒತ್ತು ನೀಡಿದ್ದು, ಭಾರತದ ಪರಂಪರೆ. ಇವೆಲ್ಲವೂ ನಮ್ಮನ್ನು ಶಾಂತವಾಗಿ ಇಡಲು ಸಾಧ್ಯವಾಗಿದೆ ಎಂದು ಹೇಳಿದರು.
ಪಾಶ್ಚಾತ್ಯ ದೇಶದಲ್ಲಿ ನಿದ್ದೆ ಮಾತ್ರೆ ಸೇವಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ. ಕಾರಣ ಮಾನಸಿಕ ನೆಮ್ಮದಿ ಅವರಿಗೆ ಇಲ್ಲ. ಅವರು ಮಾನಸಿಕ ನೆಮ್ಮದಿ ಅರೆಸಿ ಭಾರತಕ್ಕೆ ಬರುತ್ತಿದ್ದಾರೆ. ಇಲ್ಲಿ ಪಾರಂಪರಿಕ ಜೀವನ ಪದ್ದತಿ ಚನ್ನಾಗಿದೆ. ಯಾವ ರೂಪದಲ್ಲಿ ಬೇಕಾದರೂ ದೇವರನ್ನು ಪೂಜಿಸಬಹುದು. ಆದರೆ ಆಧ್ಯಾತ್ಮಿಕ ಶಾಂತಿ ವಿಶ್ವಕ್ಕೆ ಸಾರುವವರು ಧರ್ಮ ಗುರುಗಳು, ಸ್ವಾಮೀಜಿಗಳು ಎಂದರು.
ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸದೃಢ ಬೆಳಗಾವಿ ಬೆಳೆಯಲು ನಿಮ್ಮ ಕೈಯಲ್ಲಿದೆ. ಇಲ್ಲಿ ಯಾವುದೇ ಗೂಂಡಾ ಸಂಸ್ಕೃತಿಗೆ ಅವಕಾಶ ಇರಬಾರದು. ಆಶೀರ್ವಾದದ ಸಂದೇಶದಿಂದ ಸಿಎಂ ಕೈ ಬಲಪಡಿಸುವ ಶಕ್ತಿ ಶ್ರೀಗಳ ಕೈಯಲ್ಲಿ ಇದೆ ಎಂದು ಹೇಳಿದರು.
ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಪಾರ್ಲಿಮೆಂಟ್ ನಲ್ಲಿ ಕೆಲ ಬದಲಾವಣೆ ಮಾಡುವಂತೆ ಸೂಚನೆ ನೀಡಿದರು. ಆದರೆ ಅವರು ದೇಶಕ್ಕೆ ಒಳ್ಳೆಯದಾಗಲಿ ಎಂದು ಶ್ರೀಗಳು ಕಳಕಳಿಯಿಂದ ಮಾಡಿದ್ದರು. ಅದನ್ನು ನಾನು ಪ್ರಧಾನಿ ನರೇಂದ್ರ ಮೋದಿ ಅವರ ಗಮಕ್ಕೆ ತಂದಿದ್ದೆ. ಅವರ ಕಳಕಳಿಗೆ ದೇಶವೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹೇಳಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿಎಂ ಯಡಿಯೂರಪ್ಪನವರು ದೈವಿ ಭಕ್ತರು. ರಾಜ್ಯಕ್ಕೆ ಕಷ್ಟ ಬಂದಾಗ ಯಡಿಯೂರಪ್ಪನವರು ದೇವರ ಮೊರೆ ಹೋಗಿ ಪರಿಹಾರ ಕಂಡುಕೊಳ್ಳುತ್ತಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಎದುರಾದಾಗ ಕಾಲಿಗೆ ಚಕ್ರ ಕಟ್ಟಿಕೊಂಡು ಏಕಾಂಗಿಯಾಗಿ ಪ್ರವಾಹದಲ್ಲಿ ಹಾನಿಯಾದ ಸ್ಥಳಗಳಿಗೆ ತೆರಳಿ ಪರಿಹಾರ ಕೊಡುವ ಕೆಲಸ ಮಾಡಿದ್ದಾರೆ ಎಂದರು.
ಸಿಎಂ ಯಡಿಯೂರಪ್ಪನವರಿಗೆ ಆಯುರಾರೋಗ್ಯ ವೃದ್ದಿಸಲಿ. ಇನಷ್ಟು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸುಮಾರು 50 ಕ್ಕೂ ಮಠಾಧೀಶರು ಸಿಎಂಗೆ ಆಶೀರ್ವಾದ ಮಾಡಲು ಬಂದಿದ್ದಾರೆ. ಅಲ್ಲದೆ ಕೊರೋನಾ ತೋಲಗಿಸಲು ಸಿಎಂ ಬಿ.ಎಸ್.ಯಡಿಯೂರಪ್ಪನವರು ಎಲ್ಲ ಧರ್ಮದ ಮಠಗಳಲ್ಲಿ ಅಗ್ನಿಹೋತ್ರ ಮಾಡಿಸುವ ಮೂಲಕ ಕರೋನಾಗೆ ಮುಕ್ತಿ ಹಾಡುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಶಾಸಕ ಅನಿಲ್ ಬೆನಕೆ, ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಅಲ್ಪಸಂಖ್ಯಾತ ನಿಗಮ ಮಂಡಳಿ ಅಧ್ಯಕ್ಷ ಮುಕ್ತಾರ ಹುಸೇನ ಪಠಾನ, ಸಹಕಾರಿ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಡಮನಿ, ಜಗದ್ಗುರು ಪಂಚಪೀಠದ ಪಂಚಾಚಾರ್ಯ ಪರಂಪರೆಯ ಕಟಕೋಳ ಎಂ ಚಂದರಗಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ವೀರಕ್ತ ಪರಂಪರೆಯ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಪಿ.ಜಿ.ಹುಣಶ್ಯಾಳದ ಶ್ರೀ ನಿಜಗುಣ ದೇವರು, ಸವದತ್ತಿ ಚಿದಂಬರ ಆಶ್ರಮದ ಬ್ರಾಹ್ಮಣ ಸ್ವಾಮೀಜಿ ಸೇರಿದಂತೆ 80ಕ್ಕೂ ಅಧಿಕ ಸ್ವಾಮೀಜಿಗಳು ಉಪಸ್ಥಿತರಿದ್ದರು.
ರಾಜಕಾರಣಿಗಳ ವಿರುದ್ಧ ಎಫ್ ಐಆರ್ ದಾಖಲಿಸಲು ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ