Latest

ಪರಿಸ್ಥಿತಿ ಕೈಮೀರಿದೆ; ನಾವು ಸಂದಿಗ್ಧಸ್ಥಿಯಲ್ಲಿದ್ದೇವೆ ಎಂದ ಸಚಿವ ಸುಧಾಕರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಸ್ಥಿತಿ ಕೈಮೀರಿದೆ. ಅನಿವಾರ್ಯವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಂದು ರಾಜ್ಯಪಾಲ ವಜುಬಾಯಿ ವಾಲಾ ಹಾಗೂ ಸಿಎಂ ಯದಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕಠಿಣ ನಿಯಮದ ಬಗ್ಗೆ ನಿರ್ಧರಿಸಲಾಗುವುದು ಎಂದರು.

ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಪರಿಶಿತಿಗೆ ಜನರ ಬೇಜವಬದಾರಿಯೇ ಕಾರಣ ಎಷ್ಟೇ ಎಚ್ಚರಿಕೆ ನೀಡಿದರೂ ನಿರ್ಲಕ್ಷ ಮಾಡುತ್ತಿದ್ದಾರೆ. ಇದು ಯುದ್ಧದ ಸಮಯ. ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಎಲ್ಲರಿಗೂ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಆಕ್ಸಿಜನ್, ಐಸಿಯು ವ್ಯವಸ್ಥೆ ಹೆಚ್ಚಿಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ಪ್ರತಿಷ್ಠೆ ಪ್ರಶ್ನೆ ಬರಲ್ಲ ಜನರ ಜೀವ ಉಳಿಸುವತ್ತ ಗಮನಹರಿಸಬೇಕಿದೆ ಎಂದರು.

ವಿಪಕ್ಷದವರ ಆರೋಪ ಅಲ್ಲಗಳೆಯಲಾಗದು. ಕೋವಿಡ್ ನಂತಹ ಸಾಂಕ್ರಾಮಿಕ ರೋಗ ದೇಶವನ್ನೇ ವ್ಯಾಪಿಸುತ್ತಿರುವಾಗ ಸೋಮ್ಕಿತರ ಸಂಖ್ಯೆ ಹೆಚ್ಚಳವಾದಾಗ ಬೆಡ್, ಆಕ್ಸಿಜನ್ ಕೊರತೆಯಾಗುತ್ತದೆ. ಒಮ್ಮೆಲೇ ಈ ರೀತಿ ಪರಿಸ್ಥಿತಿಗಳು ಎದುರಾಗುತ್ತವೆ. ಹಾಗಂತ ಸರ್ಕಾರ ವಿಫಲ, ಆಡಳಿತ ನಿರ್ವಹಣೆ ಸರಿಯಿಲ್ಲ ಎಂದಲ್ಲ. ಬೆಡ್, ಐಸಿಯು, ಔಷಧ ವ್ಯವಸ್ಥೆ ಮಾಡಬಹುದು ಆದರೆ, ವೈದ್ಯರು, ನರ್ಸ್, ಆರೋಗ್ಯ ಸಿಬ್ಬಂದಿಗಳನ್ನು ಸೃಷ್ಟಿಸಲಾಗದು. ಇದು ಆರೋಪ ಪ್ರತ್ಯಾರೋಪ ಮಾಡುತ್ತಾ ಕೂರುವ ಸಮಯವಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಯುದ್ಧದ ಸಮಯ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button