ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
ಹೆಣ್ಣೆಂಬ ಈ ಮನುಕುಲವು ತನ್ನ ಜನಿಸುವಿಕೆಯಲ್ಲಿಯೇ ತಾಯಿಯ ಸ್ಥಾನವನ್ನು ಪಡೆಯುತ್ತಾಳೆ. ಮುಂದೆ ಹಂತ ಹಂತವಾಗಿ ಹೆಂಡತಿಯಾಗಿ, ಮಗಳಾಗಿ, ಸೊಸೆಯಾಗಿ, ಸ್ನೇಹಿತೆಯಾಗಿ ಭಾರತಾಂಬೆಯ ಹೆಮ್ಮೆಯ ಪುತ್ರಿಯಾಗಿ, ನಾರಿ ಶಕ್ತಿಯ ಸ್ಥಾನವನ್ನು ಗುರುತಿಸಿಕೊಳ್ಳುತ್ತಾಳೆ.
ಹೆಣ್ಣಿಗೆ ಯಾರಿರಲಿ, ಇಲ್ಲದಿರಲಿ ಅವಳ ಅರಿವಿಗೆ ಹಾಗೂ ಬದುಕಿಗೆ ಅಕ್ಷರ ಬೇಕು. ಅವಳು ಬಂಗಾರದ ಬಿನ್ನಾಣಗಿತ್ತಿಯಾಗಿರಲಿ ವೈಯಾರಾದ ಸೂಕ್ಷ್ಮಮತಿಯಾಗಿರಲಿ ಅಕ್ಷರದಾಭರಣ ಅವಳಲ್ಲಿರಬೇಕು. ಹೆಣ್ಣಿಗೆ ಅಕ್ಷರದಿಂದಲೇ ಅರಿವು, ಅಕ್ಷರದಿಂದಲೇ ಗೆಲುವು ಸಾಭಿಮಾನದ ಕುರುಹಗಾಗಿ ಸ್ವಾತಂತ್ರ್ಯದ ಬದುಕಿಗಾಗಿ ಹೆಣ್ಣೆತ್ತವರ ಬಾಳು ಗೋಳಾಗದಂತೆ ಕನಸು ಕಾಣುವಾಗ ಗಂಡು, ಹೆಣ್ಣು ಎಂಬ ಬೇದವಿಲ್ಲದೇ ಸಮಾನತೆ ಶಿಕ್ಷಣ ಬೇಕು. ಹೆಣ್ಣಿಗೆ ಆಗಲೇ ಅವಳು ಸಮಾಜಮುಖಿಯಾಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಕಠfಣತೆಯನ್ನು ಹೊಂದುತ್ತಾಳೆ.
ಹಲವಾರು ಜನರಿಗೆ ಅರಿವಿಲ್ಲದಿರುವ ಸರರ್ಕಾದ ಕಾರ್ಯಕ್ರಮದ ಒಂದು ಅಂಶವನ್ನು ಈ ಸಂರ್ದಭದಲ್ಲಿ ಉಲ್ಲೇಖಿಸಿ ಸಮಾಜಕ್ಕೆ ಬಿಂಬಿಸುವುದು ತುಂಬಾ ಅತ್ಯಗತ್ಯ.
ಬಿ ಎಸ್ ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿಗಳು ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿಯವರು (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ) ಸಚಿವರಿರುವಾಗ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಜಾರಿಗೆ ತಂದಿರುತ್ತದೆ. ೧೫ ಬಾಲಕೀಯರು ೫ ಬಾಲಕರ ತಂಡವನ್ನು ಮೀನಾ ತಂಡವಾಗಿ ರಚಿಸಿ ಇವರು ಶಿಕ್ಷಣದಿಂದ ವಂಚಿತರಾಗುವ ಶಾಲೆಗೆ ಬಾರದ ಮಕ್ಕಳಿಗೆ ಪ್ರೇರಣೆ ನೀಡಿ ಶಾಲೆಗೆ ದಾಖಲಿಸಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳೆಂಬ ಬೇದ ತೊಲಗಿಸಿ ವಿದ್ಯೆಯ ಆಸಕ್ತಿ ಮೋಡಿಸುವ ಕಾರ್ಯ ನಡೆಸುತ್ತಾರೆ. ಇದರಿಂದ ಲಿಂಗ ತಾರತಮ್ಯ, ಅಪ್ರಾಪ್ತ ವಯಸಿನವರ ಬಾಲ್ಯ ವಿವಾಹ ನಿಲ್ಲಿಸುವುದು, ಬಾಲ್ಯ ಕಾರ್ಮಿಕತೆಯನ್ನು ತೊಲಗಿಸುವುದು, ವರದಕ್ಷಿಣೆ ನರ್ಮೂಲನೆಗೊಳಿಸುವುದು, ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳಿಂದ ಸಮುದಾಯದ ಸ್ವಚ್ಛತೆಯನ್ನು, ಸಮುದಾಯದಲ್ಲಿ ಜಾಗೃತೆಯನ್ನು ಮೂಡಿಸಲು ಮೀನಾ ತಂಡ ಸಕ್ರೀಯವಾಗಿ ಕಾರ್ಯ ಚಟುವಟಿಕೆಯಲ್ಲಿ ಸಿದ್ಧವಿರುತ್ತದೆ. ಸರ್ಕಾರವು ಪ್ರತಿ ವರ್ಷ ಸಪ್ಟೆಂಬರ್ ೨೪ ರಂದು ಮೀನಾ ದಿನಾಚರಣೆಯನ್ನು ಆಚರಿಸುತ್ತದೆ.
ಮೀನಾ ದಿನಾಚರಣೆ ಸಂಭ್ರಮ – ಮಹಿಳಾ ಶಕ್ತಿ ಸಂಗಮ ಎಂದು ಆಚರಿಸುತ್ತಿದೆ.
ಮೀನಾ ತಂಡದ ಚಟುವಟಿಕೆಯ ಪುಟ್ಟ ಮಕ್ಕಳ ಒಂದು ಪಟ್ಟ ಕಥೆಯನ್ನು ತಮಗೆ ತಿಳಿಸಲೇಬೇಕು ಸ್ನೇಹಿತರೇ, ಮೀನಾ ತಂಡದಲ್ಲಿ ಶ್ಯಾಮಲಾ ಮತ್ತು ಶ್ಯಾಮ ಇಬ್ಬರು ಇದ್ದು, ಇವರು ಗೆಳತಿ ಮಮತಾಳ ಮನೆಗೆ ಹೊಗುತ್ತಿದ್ದರು. ದಾರಿಯಲ್ಲಿ ಒಂದು ಕೆಂಪು ಬಸ್ಸು ಧೂಳನ್ನು ಹಾರಿಸುತ್ತಾ ಬಂದಿರುವುದನ್ನು ಕಂಡರು. ಬಸ್ಸಿನಿಂದ ಇಬ್ಬರು ಇಳಿದಿರುವುದನ್ನು ಕಣ್ ತುಂಬಿಕೊಂಡರು. ಅವರು ತಂದೆ ಮಗನಿರಬಹುದೆಂದು ಶಂಕಿಸಿ ಅವರು ಹೊಗುವ ದಾರಿಯಲ್ಲಿ ಹಿಂಬಾಲಿಸಿ ತಾವಿಬ್ಬರು ಹೊರಟರು. ಅವರು ತಮ್ಮ ಸ್ನೇಹಿತೆ ಮಮತಾಳ ಮನೆಗೆ ಹೋಗುವುದನ್ನು ಕಂಡು ಅಪರಿಚಿತ ವ್ಯಕ್ತಿಯನ್ನು ಹಿಂಬಾಲಿಸಿದರು. ಅವರು ಸ್ನೇಹಿತೆ ಮಮತಾಳ ಮನೆಗೆ ಹೋಗುವುದನ್ನು ನೋಡಿ ತಾವು ಅಲ್ಲಿಗೆ ಹೋಗಿ ಕಿಟಕಿಯಲ್ಲಿ ಇಣುಕಿ ನೋಡುತ್ತಾ ಅಲ್ಲಿಯ ಸಂವಾದವನ್ನು ಆಲಿಸಿದರು. ಹಿರಿಯ ವಯಸ್ಸಿನ ವ್ಯಕ್ತಿಯು ಮಮತಾಳ ಮನೆಯಲ್ಲಿ ಗದರಿಸುತ್ತಾ ಇರುವುದನ್ನು ಮಮತಾಳು ಅಳುತ್ತಾ ಇರುವುದನ್ನು ಕಂಡರು. ತಂದೆ ತಾಯಿಯವರು ಮಮತಾಳಿಗೆ ಹುಡುಕಿದ ವರ ಇವನಿರಬಹುದು. ಹಿರಿಯ ವಯಸ್ಸಿನವನು ವರದಕ್ಷಿಣೆಗಾಗಿ ಪೀಡಿಸುವುದನ್ನು ಕಂಡರು. ಮಮತಾಳು ವರದಕ್ಷಿಣೆ ಕೊಟ್ಟು ತಂದೆ ತಾಯಿ ದಿವಾಳಿ ಆಗುವುದನ್ನು ಬಯಸಲಿಲ್ಲ ಎಂಬ ಅಭಿಪ್ರಾಯ ಕಂಡು ತಾವೇನು ಮಾಡಬಹುದೆಂದು ಯೋಚಿಸಿದರು. ಹಿರಿಯ ವಯಸ್ಸಿನವನು ತನ್ನ ಮಗನಿಗೆ ಒಂದು ಸೈಕಲ್, ಸ್ವಲ್ಪ ಹಣ ಲಕ್ಷದ ರೂಪದಲ್ಲಿ ಮದುವೆ ನಂತರ ಮೊದಲು ಹಬ್ಬಕ್ಕಾಗಿ ಸ್ಕೂಟರ್ ಕೊಡುವಂತೆ ಪೀಡಿಸುವುದನ್ನು ಕಂಡರು. ಅಲ್ಲದೆ ತಾವು ತುಂಬಾ ಕಡಿಮೆ ಕೇಳಿದೆವು. ನಿಮಗೆ ಸಾದ್ಯವಿಲ್ಲದಿದ್ದರೆ ಇದಕ್ಕು ಹೆಚ್ಚು ಕೊಡುವ ಕುಟುಂಬಗಳು ಬೇಕಷ್ಟಿದೆ ಎಂದು ಹೇಳಿದ್ದನ್ನು ಕೇಳಿದ ಶ್ಯಾಮಲಾ ಮತ್ತು ಶ್ಯಾಮ ಮಮತಾಳ ತಂದೆ ತಾಯಿಗಳಿಗೆ ವರದಕ್ಷಿಣೆ ಕೊಡುವದಾಗಲಿ, ತೆಗೆದುಕೊಳ್ಳುವುದಾಗಲಿ ಕಾನುನಾತ್ಮಕ ತಪ್ಪು, ಬಾಲ್ಯ ವಿವಾಹವು ತಪ್ಪು ಎಂದು ತಿಳಿಸಿ ಊರಿನ ಎಲ್ಲಾ ಮನೆಗಳಿಗೆ ಹೋಗಿ ಕಾನೂನಿನ ಅರಿವನ್ನು ಊರ ಜನರಿಗೆ ತಿಳಿಸಿ ಬಾಲ್ಯ ವಿವಾಹ, ವರದಕ್ಷಣೆ ಪೀಡೆಯಂಥ ವಿವಾಹವನ್ನು ತಡೆದರು. ಊರಲ್ಲಿ ಆ ವರನಿಗೆ ಯಾರೂ ಹುಡುಗಿಯನ್ನು ಕೊಡದಂತೆ ಮಾಡಿದರು. ಅದಕ್ಕೆ ತನ್ನ ಹಾಗು ಸುತ್ತ ಮುತ್ತಲಿನ ರಕ್ಷಣೆಗೆ ಹೆಣ್ಣು ಹಕ್ಕಿಯಂತೆ ಹಾರಾಡಿ ಸ್ವಂತ ಬಾಳ್ವೆಯನ್ನು ನಡೆಸುವುದಕ್ಕೆ ಹೆಣ್ಣೆಗೆ ವಿದ್ಯೆ ಅತ್ಯಗತ್ಯ. ಭಾರತದ ಹೆಮ್ಮೆಯ ನಾರಿಯರ ಪಟ್ಟಿಯಲ್ಲಿ ಯಾವ ರಂಗದಲ್ಲೂ ಪುರುಷನಿಗೆ ಸರಿಸಾಠಿಯಾಗಿ ನಾರಿ ಮುಂದಿದ್ದಾಳೆ. ಹಿಂದೆ ಎನ್ನುವ ಮಾತಿಲ್ಲ.
ಒಂದು ಹೆಣ್ಣಿಗೆ ವಿದ್ಯೆ ಕಲಿಸಿದರೆ ಅದು ಇಡಿ ಕುಟುಂಬ ಹಾಗೂ ದೇಶಕ್ಕೆ ವಿದ್ಯೆಯಾಗುತ್ತದೆ. ಸ್ತೀ ಶಕ್ತಿಯೇ ಹೆಮ್ಮೆಯ ಶಕ್ತಿ.
ವಿಶ್ವ ಮಹಿಳಾ ದಿನಾಚರಣೆಗೆ ಹಾರ್ಧಿಕ ಶುಭಾಶಯಗಳು.
–ರಾಜೇಶ್ವರಿ ಎಸ್ ಹೆಗಡೆ
ನಿವೃತ್ತ ಅಧಿಕ್ಷಕರು
ಶಿಕ್ಷಣ ಇಲಾಖೆ ಬೆಳಗಾವಿ