ಸೋಂಕಿತರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡುವುದು ಸಾಧ್ಯವಿಲ್ಲ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನ ಸ್ಥಿತಿ ಆತಂಕಕಾರಿಯಾಗಿದೆ. ದಿನದಿಂದ ದಿನಕ್ಕೆ ಆಕ್ಟಿವ್ ಕೇಸ್ ಗಳು ಹೆಚ್ಚುತ್ತಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾದಿದ ಅವರು, ಕೊರೊನಾ ವೈರಸ್ ತನ್ನ ಸ್ವಭಾವವನ್ನೇ ಬದಲಿಸಿದೆ. ವೈರಾಣು ನಮ್ಮ ಜೊತೆ ಚೆಸ್ ರೀತಿ ಆಟವಾದುತ್ತಿದೆ. ಮೊದಲ ಅಲೆಯಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ. ಇದು ಹೊಸ ಕಾಯಿಲೆ, ವೈರಸ್ ಆಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಷ್ಟೊಂದು ಆಕ್ಸಿಜನ್ ಕೊರತೆ ಕೂಡ ಎದುರಾಗಿರಲಿಲ್ಲ. ಈಗಗಾಲೇ ನಾವು 500 ಟನ್ ಆಕ್ಸಿಜನ್ ಬಳಸಿದ್ದೇವೆ. ಮೇ ತಿಂಗಳಲ್ಲಿ 1414ಟನ್ ಆಕ್ಸಿಜನ್ ಪೂರೈಕೆಗೆ ಮನವಿ ಮಾಡಿದ್ದೇವೆ. ಇನ್ನು ಬೆಂಗಳೂರಿನಲ್ಲಿ ಇನ್ನೂ 2000 ಐಸಿಯು ಅಗತ್ಯವಿದೆ ಎಂದರು.
ಸೋಂಕಿತರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡುವುದು ಸಾಧ್ಯವಿಲ್ಲ. ಯಾರಿಗೆ ಅಗತ್ಯವಿದೆಯೋ ಅಂತವರನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಿ. ಉಳಿದಂತೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ