Latest

ಈ ವೈರಸ್ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ ಎಂದೇ ಗೊತ್ತಿರಲಿಲ್ಲ ಎಂದ ಕಂಗನಾ

ಪ್ರಗತಿವಾಹಿನಿ ಸುದ್ದಿ; ಮುಂಬೈ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೆಲೆಬ್ರಿಟಿಗಳು ಕೂಡ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಕಂಗನಾ ರಣಾವುತ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಂಗನಾ, ನಾನು ಕೆಲದಿನಗಳಿಂದ ಸುಸ್ತು, ಸ್ವಲ್ಪ ಜ್ವರ ಹಾಗೂ ಕಣ್ಣುರಿಯಿಂದ ಬಳಲುತ್ತಿದ್ದು, ತನ್ನ ಊರಾದ ಹಿಮಾಚಲ ಪ್ರದೇಶಕ್ಕೆ ಹೋಗಬೇಕೆಂದು ಕೋವೀದ್ ಟೆಸ್ಟ್ ಗೆ ಒಳಗಾಗಿದ್ದೆ. ಇದೀಗ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹಾಗಾಗಿ ನಾನು ಕ್ವಾರಂಟೈನ್ ನಲ್ಲಿದ್ದೇನೆ.

ಈ ವೈರಸ್ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ ಎಂಬುದು ನನಗೆ ಗೊತ್ತೇ ಇರಲಿಲ್ಲ. ಇದೀಗ ನನ್ನ ಕೈಲಿದೆ. ಇದನ್ನು ನಾನು ನಾಶಮಾಡುತ್ತೇನೆ. ನಿಮಗಿಂತ ದೊಡ್ಡ ಶಕ್ತಿ ಬೇರಾವುದೂ ಇಲ್ಲ. ಕೊರೊನಾ ಬಂದಾಕ್ಷಣ ಹೆದರಬೇಡಿ ನೀವೆಷ್ಹ್ಟು ಭಯಪಡುತ್ತೀರೋ ವೈರಸ್ ನಿಮ್ಮನ್ನು ಅಷ್ಟೇ ಭಯಪಡಿಸುತ್ತದೆ. ಇದೊಂದು ಸಣ್ಣ ಜ್ವರವಷ್ಟೇ ಎಲ್ಲರೂ ಒಗ್ಗಟ್ಟಾಗಿ ಈ ವೈರಸ್ ನಾಶ ಮಾಡೋಣ ಎಂದು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯ ಆಕ್ಸಿಜನ್ ಸಿಲಿಂಡರ್ ನ್ನೇ ಕದ್ದೊಯ್ದ ಕಳ್ಳರು

Home add -Advt

Related Articles

Back to top button