Kannada NewsKarnataka NewsLatest

ರಂಜಾನ್ ನಿಮಿತ್ತ ಬಡವರಿಗೆ ದಿನಸಿ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ,  ಸವದತ್ತಿ – ಮುನವಳ್ಳಿ ಹಾಗೂ ಯರಗಟ್ಟಿ ಗ್ರಾಮದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಪರವಾಗಿ ಮುಸ್ಲಿಂ ಸಮಾಜದ ಬಡವರಿಗೆ ರಂಜಾನ್ ಹಬ್ಬದ ನಿಮಿತ್ತ ದಿನಸಿ ಕಿಟ್ ಗಳನ್ನು ವಿತರಿಸಿದರು.
ಕೊರೋನಾ ಸೋಂಕಿನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ರಂಜಾನ್ ಆಚರಣೆಗಾಗಿ ನೆರವಾಗುವ ಉದ್ದೇಶದಿಂದ ಅಲ್ಪ ನೆರವು ನೀಡಲಾಗುತ್ತಿದೆ. ಎಲ್ಲರ ಕಷ್ಟಗಳು ಕರಗಿ ಸುಖ, ಶಾಂತಿ ನೆಲಸಲಿ ಎಂದು  ಪ್ರಾರ್ಥಿಸುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.
 ಈ ಭಾಗದ ಯುವ ಕಾಂಗ್ರೆಸ್ ಮುಖಂಡ ಅಲ್ತಾಫ್ ಮುಲ್ಲಾ, ವೈದ್ಯರಾದ ಬಸೀರ್ ಅಹ್ಮದ್‌ ಬೈರೆಕದಾರ್, ಪುರಸಭೆ ಸದಸ್ಯ ಪರುಶರಾಮ ಗಂಟಿ, ಅಬ್ಬು ಬಿಜಲಿಖಾನ್, ಸಲೀಂ ಜಮಾದಾರ ಹಾಗೂ ಮುನವಳ್ಳಿ ಮತ್ತು ಯರಗಟ್ಟಿ ಯುತ್ ಕಾಂಗ್ರೆಸ್ ನ ಯುವಕರು ರೇಷನ್ ಕಿಟ್ ಗಳನ್ನು ವಿತರಿಸುವ ಕಾರ್ಯದಲ್ಲಿ ನೆರವಾದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button