Latest

ಕಾಂಗ್ರೆಸ್ ನಿಂದ 100 ಕೋಟಿ ರೂ.

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಲಸಿಕೆ ಉತ್ಪಾದಕರಿಂದ ಲಸಿಕೆಯನ್ನು ನೇರವಾಗಿ ಪಡೆದು ಅದನ್ನು ರಾಜ್ಯದ ಜನರಿಗೆ ನೀಡುವ ಸಲುವಾಗಿ 100 ಕೋಟಿ ರೂ. ಯೋಜನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಅನಾವರಣಗೊಳಿಸಿದರು.
‘ರಾಜ್ಯದ ಜನರಿಗೆ ಲಸಿಕೆ ನೀಡುವಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಈ  ಕಾರ್ಯವನ್ನು ಪಕ್ಷದ ವತಿಯಿಂದ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡಬೇಕಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ, ಆತ್ಮನಿರ್ಭರ ಭಾರತದ ಮನೋಭಾವದಲ್ಲಿ ಕಾಂಗ್ರೆಸ್ ಲಸಿಕೆ ಉತ್ಪಾದಕರಿಂದ ಲಸಿಕೆಯನ್ನು ನೇರವಾಗಿ ಪಡೆದು ಅದನ್ನು ವಿತರಿಸಲು ಅನುಮತಿ ನೀಡಬೇಕು ಎಂದು ನಾನು ಬಿಜೆಪಿ ಸರ್ಕಾರಗಳಲ್ಲಿ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಸ್ತುತ ಭಾರತದಲ್ಲಿ ಲಸಿಕೆ ಖರೀದಿ ನಿಯಮಗಳ ಪ್ರಕಾರ ಲಸಿಕೆಯನ್ನು ಕೇಂದ್ರ, ರಾಜ್ಯ ಸರ್ಕಾರಗಳು, ಆಸ್ಪತ್ರೆ ಹಾಗೂ ಕೈಗಾರಿಕೆಗಳು ಮಾತ್ರ ಉತ್ಪಾದಕರಿಂದ ಖರೀದಿ ಮಾಡಬಹುದಾಗಿದೆ. ಹೀಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಲಸಿಕೆ ಖರೀದಿಗೆ ಸರ್ಕಾರಗಳು ಅನುಮತಿ ನೀಡಬೇಕು.
‘ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಕಾಂಗ್ರೆಸ್ 100 ಕೋಟಿ ರೂ. ಯೋಜನೆ ರೂಪಿಸಿದೆ. ಇದರಲ್ಲಿ 10 ಕೋಟಿ ರೂ ಹಣವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಿಧಿಯಿಂದ ನೀಡಲಾಗುವುದು. ಉಳಿದ 90 ಕೋಟಿ ಹಣವನ್ನು ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯ ಹಣದ ಮೂಲಕ ಸಂಗ್ರಹಿಸಲಾಗುವುದು. ಕಳೆದೊಂದು ತಿಂಗಳಿನಿಂದ ಮೋದಿ ಹಾಗೂ ಯಡಿಯೂರಪ್ಪನವರ ಸರ್ಕಾರ ಲಸಿಕೆ ನೀಡುವಲ್ಲಿ ವಿಫಲವಾಗಿರುವ ಕಾರಣ ಮುಖ್ಯಮಂತ್ರಿಗಳು ಶಾಸಕರ ನಿಧಿಯನ್ನು ಬಳಸಿಕೊಂಡು ಅದರಿಂದ ಲಸಿಕೆಯನ್ನು ನೇರವಾಗಿ ಖರೀದಿ ಮಾಡಿ ಅದನ್ನು ಜನರಿಗೆ ವಿತರಿಸಲು ಅನುಮತಿ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button