Latest

ಸೋಂಕಿತರ ಸೇವೆಗೆ 12 ಆಕ್ಸಿಜನ್ ಬಸ್ ಗಳು ಸಜ್ಜು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಸೋಂಕಿತರ ಸೇವೆಗೆ 12 ಆಕ್ಸಿಜನ್ ಬಸ್ ಗಳು ಸಜ್ಜಾಗಿದ್ದು, ತಲಾ 10 ಲಕ್ಷ ರೂ. ವೆಚ್ಚದಲ್ಲಿ ತಲಾ 5 ಹಾಸಿಗೆಗಳುಳ್ಳ ಬಸ್ ಗಳನ್ನು ತಯಾರಿಸಲಾಗಿದೆ.
ಬುಧವಾರ ಬೆಂಗಳೂರಿನ ಕೆಎಸ್‍ಆರ್ ಟಿ ಸಿ, ಕೇಂದ್ರ ಕಛೇರಿಯ ಮುಂಭಾಗದಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ,  ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಎಸ್ಆರ್ ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಸಾರಿಗೆ ಸುರಕ್ಷಾ “ಸಂಚಾರಿ – ಐ ಸಿ ಯು” ಮತ್ತು ಆಕ್ಸಿಜನ್ ಬಸ್ಸುಗಳಿಗೆ ಚಾಲನೆ ನೀಡಿದರು.
ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ  ಶಿವಯೋಗಿ ಸಿ.ಕಳಸದ  ಹಾಗೂ ನಿಗಮದ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ವಿಶೇಷ ಕ ರಾ ರ ಸಾ ನಿಗಮದ ಬಸ್ಸುಗಳಲ್ಲಿ ಇರುವ  ಸೌಲಭ್ಯಗಳು
• ಐದು ಹಾಸಿಗೆಯುಳ್ಳ ಅಂಬುಲೆನ್ಸ್,
• ಪ್ರತಿಯೊಂದು ಬೆಡ್ ಗೂ ಆಕ್ಸಿಜನ್ ವ್ಯವಸ್ಥೆ,
• ರೋಗಿಗಳ ಮಾನಿಟರ್ ( ಬಿ.ಪಿ, ಆಕ್ಸಿಜನ್ ಪ್ರಮಾಣ, ಇ.ಸಿ.ಜಿ, ತಾಪಮಾನ) ಐ.ವಿ. ವ್ಯವಸ್ಥೆ,
• ವೆಂಟಿಲೇಟರ್ ಅಳವಡಿಸಲು ಸೌಲಭ್ಯ,
• ತುರ್ತು ಔಷಧಿ ವ್ಯವಸ್ಥೆ,
•  ಜನರೇಟರ್ ವ್ಯವಸ್ಥೆ,
ಈ ವೇಳೆ ಲಕ್ಷ್ಮಣ್  ಸವದಿ  ಬಸ್ಸಿನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
• ಅಂದಾಜು ರೂ.10 ಲಕ್ಷ ವೆಚ್ಚದಲ್ಲಿ ನಿಗಮದಲ್ಲಿಯೇ ಆಂತರಿಕವಾಗಿ ನಿರ್ಮಿಸಲಾಗಿದೆ‌. ನಿಗಮವೇ ಸಂಪೂರ್ಣ ವೆಚ್ಚವನ್ನು ಭರಿಸಿದೆ.
• ಈಗಾಗಲೇ ನಮ್ಮ 4 ಸಾರಿಗೆ ನಿಗಮಗಳ ವತಿಯಿಂದ ಸುಮಾರು 12 ಕ್ಕೂ ಹೆಚ್ಚು ಆಕ್ಸಿಜನ್ ಪೂರೈಕೆ  ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ.
• ಇವುಗಳಲ್ಲಿ ಚಿತ್ರದುರ್ಗ, ಚಿಕ್ಕಬಳ್ಳಾಪುರದಲ್ಲಿ, ಚಿಕ್ಕಮಗಳೂರಿನಲ್ಲಿ  ಕಲಬುರ್ಗಿ ಮತ್ತು ಬೆಳಗಾವಿಗಳಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿಯಿಂದ ಮತ್ತು ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿಯಿಂದ ಆಕ್ಸಿಜನ್ ಬಸ್ಸುಗಳು ಸೇರಿವೆ.
• ಇವುಗಳಲ್ಲಿ ಎರಡು ಬಸ್ಸುಗಳಿಗೆ ಅಂಬುಲೆನ್ಸ್ ಮಾದರಿಯಲ್ಲಿ ಉಪಕರಣಗಳನ್ನು ಅಳವಡಿಸಲಾಗಿದೆ.
• ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗತ್ವ ಒದಗಿ ಬಂದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಆಕ್ಸಿಜನ್ ಬಸ್ಸುಗಳನ್ನು ಒದಗಿಸಲು ನಮ್ಮ ಸಾರಿಗೆ ನಿಗಮಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.
•  ಸ್ಥಳೀಯವಾಗಿ ಆಕ್ಸಿಜನ್ ಮತ್ತು ವೈದ್ಯಕೀಯ ಉಪಕರಣಗಳನ್ನು ನಿರ್ವಹಿಸಲು ಖಾಸಗಿ ಸಹಭಾಗಿತ್ವ ಅಥವಾ ಯಾವುದಾದರೂ ಆಸ್ಪತ್ರೆಗಳ ಸಹಭಾಗಿತ್ವ ಅಗತ್ಯವಾಗಿದೆ. ಸಾರಿಗೆ ನಿಗಮಗಳ ಈ ಎಲ್ಲಾ ಸೇವೆಗಳೂ ಸಂಪೂರ್ಣ ಉಚಿತವಾಗಿವೆ.
• ಈಗಾಗಲೇ ಹೈದರಾಬಾದಿನ ಒಂದು ಸ್ವಯಂಸೇವಾ ಸಂಸ್ಥೆಯು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬಸ್ಸುಗಳಿಗೆ ಪ್ರಯೋಜಕತ್ವ ನೀಡಲು ಮುಂದೆ ಬಂದಿದೆ.
• ಆರೋಗ್ಯ ಸಚಿವರಾದ  ಸುಧಾಕರ ಅವರೊಂದಿಗೂ ಬಗ್ಗೆ ಚರ್ಚಿಸಲಾಗಿದ್ದು, ಇದು ಕೈಗೂಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬಸ್ಸುಗಳನ್ನು ಕರ್ನಾಟಕದಲ್ಲಿ ಒದಗಿಸಲು ನಮಗೆ ಸಾಧ್ಯವಾಗುತ್ತದೆ.
•  ಕೋವಿಡ್ ರೋಗಿಗಳು ಆಸ್ಪತ್ರೆಗಳಿಗೆ ಬಂದಾಗ ತಕ್ಷಣಕ್ಕೆ ಅವರಿಗೆ ವಿಶ್ರಮಿಸಿ ಆಕ್ಸಿಜನ್ ನೀಡಲು ಈ ಬಸ್ಸುಗಳು ಸಂಜೀವಿನಿಯಂತೆ ಉಪಕಾರಿಯಾಗಲಿವೆ. ಏಕೆಂದರೆ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಕುಳಿತುಕೊಳ್ಳುವುದಕ್ಕೂ ಸ್ಥಳ ವಿರುವುದಿಲ್ಲ ಮತ್ತು ಆಕ್ಸಿಜನ್ ಸಿಲೆಂಡರ್ಗಳು ಲಭ್ಯವಿರುವುದಿಲ್ಲ. ಅಂತಹ ಸಮಯದಲ್ಲಿ ಈ ಆಕ್ಸಿಜನ್ ಬಸ್ಸುಗಳು ಸಂಜೀವಿನಿಯಂತೆ ಜನರ ಪ್ರಾಣ ಉಳಿಸಲು ನೆರವಿಗೆ ಬರುತ್ತವೆ.
• ಕೋವಿಡ್ ನಿಯಂತ್ರಣದ ಉದ್ದೇಶದಿಂದ ಸಾರಿಗೆ ನಿಗಮಗಳಿಗೆ ಬಸ್ಸುಗಳನ್ನು ಒದಗಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಈ ಬಸ್ಸುಗಳಲ್ಲಿ ಆಕ್ಸಿಜನ್ ಅಥವಾ ಅಂಬುಲೆನ್ಸ್ ವ್ಯವಸ್ಥೆಯನ್ನು ನಿರ್ವಹಿಸಲು ಅನುಭವಿ ಅರೆ ವೈದ್ಯಕೀಯ ಸಿಬ್ಬಂದಿಗಳು ಅಗತ್ಯವಾಗಿದ್ದಾರೆ. ಈ ಬಗ್ಗೆ ಯಾರೇ ಮುಂದೆ ಬಂದರೂ ಸಾರಿಗೆ ನಿಗಮಗಳು ಕೈಜೋಡಿಸಲು ಸಿದ್ಧವಿದೆ.
• ಯಾವುದೇ ಜಿಲ್ಲೆಗಳಲ್ಲಿ ಆಕ್ಸಿಜನ್ ಬಸ್ಸುಗಳು ಅಗತ್ಯವಿದ್ದರೆ ಆಯಾ ಜಿಲ್ಲೆಗಳ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಬಹುದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button