ಪ್ರಗತಿವಾಹಿನಿ ಸುದ್ದಿ; ಭುವನೇಶ್ವರ: ರಾಜ್ಯಸಭೆಯ ಮಾಜಿ ಸದಸ್ಯ, ಖ್ಯಾತ ಶಿಲ್ಪಿ ರಘುನಾಥ್ ಮೊಹಪಾತ್ರ ಕೋವಿಡ್ ಗೆ ಬಲಿಯಾದ ಬೆನ್ನಲ್ಲೇ ಅವರ ಇಬ್ಬರು ಮಕ್ಕಳು ಕೂಡ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.
ಮೇ 9ರಂದು ರಘುನಾಥ್ ಮೊಹಪಾತ್ರ ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದರು. ಇದೇ ಆಸ್ಪತ್ರೆಯಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಕಿರಿಯ ಮಗ ಒಡಿಶಾ ಕ್ರಿಕೆಟ್ ತಂಡದ ನಾಯಕ ಪ್ರಶಾಂತ್ ಮೊಹಪಾತ್ರ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಇದೇ ವೇಳೆ ರಘುನಾಥ್ ಅವರ ಹಿರಿಯ ಮಗ ಜಶೋಬಂತ ಮೊಹಾಪಾತ್ರ ಅವರಿಗೂ ಸೋಂಕು ತಗುಲಿದ್ದರಿಂದ ಒಡಿಶಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರೂ ಕೂಡ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಸುಂದರ್ ಲಾಲ್ ಬಹುಗುಣ ಕೋವಿಡ್ ಗೆ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ