Kannada NewsKarnataka News

ಕೊರೋನಾ 2ನೇ ಅಲೆ: ಬೆಳಗಾವಿ ಜಿಲ್ಲೆಯ ಸಮಗ್ರ ಮಾಹಿತಿ ಇಲ್ಲಿದೆ; ಲಸಿಕೆ ವಿವರವೂ ಲಭ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆಯಲ್ಲಿ ಒಟ್ಟೂ 30022 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 12,346 ಜನರು ಗುಣಮುಖರಾಗಿದ್ದರೆ, ಇನ್ನೂ 17,449 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 87 ಜನರು ಸಾವಿಗೀಡಾಗಿದ್ದರೆ ಮರಣದ ಪ್ರಮಾಣ ಶೇ.0.42. ಸಧ್ಯ 2,357 ಜನರು ಆಕ್ಸಿಜನ್ ಬೆಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14,686 ಜನರು ಹೋಂ ಐಸೋಲೇಶನ್ ಆಗಿದ್ದರೆ, 319 ಜನರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 7,42,459 ಜನರು ಲಸಿಕೆ ಪಡೆದಿದ್ದಾರೆ.

ಜಿಲ್ಲಾಧಿಕಾರಿ ಮಾಹಿತಿ

ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಕೋವಿಡ್ ಮರಣ ಶೇ.0.42 ರಷ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ.33.56 ರಷ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸದ್ಯಕ್ಕೆ ಜಿಲ್ಲೆಯಾದ್ಯಂತ ಒಟ್ಟಾರೆ 17, 449 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 14,686 ಜನರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆಕ್ಸಿಜನ್ ಪೂರೈಕೆ ಸಮರ್ಪಕ:

ಜಿಲ್ಲೆಯಲ್ಲಿ ಸಮರ್ಪಕವಾಗಿ ಅಶ್ಯಕತೆಗನುಸಾರವಾಗಿ ಆಸ್ಪತ್ರೆಗಳಿಗೆ ಆಕ್ಷಿಜನ್ ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 15 ಕೆ.ಎಲ್. ಆಕ್ಷಿಜನ್ ಪೂರೈಕೆಯಾಗುತ್ತಿತ್ತು. ಈಗ ಸರ್ಕಾರದಿಂದ 22
ಕೆ.ಎಲ್. ಆಕ್ಷಿಜನ್ ಹಂಚಿಕೆಯಾಗಿದೆ. ಸ್ಥಳೀಯವಾಗಿ 3 ಸಂಸ್ಥೆಗಳಿಂದ 5 ಕೆ.ಎಲ್. ತಯಾರಿಕೆಯಾಗಿ
ಕ್ರಮ ಬದ್ಧವಾಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ.

ಕೋವಿಡ್-19 ವಾರ್ ರೂಂ ಮತ್ತು ಕೇರ್ ಸೆಂಟರ್ ಸ್ಥಾಪನೆ :

ಜಿಲ್ಲಾ ಕೇಂದ್ರದಲ್ಲಿ 1 ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಒಂದರಂತೆ ಕೋವಿಡ್ ವಾರ್ ರೂಂ
ಸ್ಥಾಪಿಸಲಾಗಿದೆ. ಅಲ್ಲಿ ಹೊಂ ಐಸೂಲೇಶನ್‌ದಲ್ಲಿ ಇರುವ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ
ವಿಚಾರಿಸಲಾಗುತ್ತಿದೆ.

ಸೋಂಕಿತರಿಗೆ ಸಂಬಂಧಪಟ್ಟ ಪ್ರಥಮ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಇರುವುದರ ಬಗ್ಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಲಭ್ಯವಿರುವ ಬೆಡ್ ಗಳ ವಿವರಗಳನ್ನು ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಎಲ್ಲ ತಾಲೂಕಗಳಲ್ಲಿ ಒಟ್ಟು 19 ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಒಟ್ಟು 319 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸ್ಟೇಲ್, ಯಾತ್ರಿ ನಿವಾಸ ಹಾಗೂ ಕಾಲೇಜು ಇವುಗಳಲ್ಲಿ ಒಟ್ಟು 1,077 ಹಾಸಿಗೆಗಳು ಲಭ್ಯವಿರುತ್ತವೆ
ಹಾಗೂ ಸರ್ಕಾರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 320 ಹಾಸಿಗೆಗಳು ಲಭ್ಯವಿರುತ್ತವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಸಿಕೆ ಪೂರೈಕೆ:

ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ 38,81,117 ಗುರಿ ನೀಡಲಾಗಿದೆ. ಇದರಲ್ಲಿ ಇಲ್ಲಿಯವರೆಗೆ 7,42,479 ಜನರಿಗೆ ಲಸಿಕೆ ನೀಡಲಾಗಿದೆ.
5,58,035 ಜನ ಮೊದಲನೇಯ ಡೋಸ್ ಪಡೆದುಕೊಂಡಿದ್ದಾರೆ. ಎರಡನೇಯ ಡೋಸ್ ಪಡೆದವರ ಸಂಖ್ಯೆ 1,84,444 ಆಗಿದೆ. 31,41,015 ಮೊದಲನೆಯ ಡೋಸ್ ಪಡೆಯಬೇಕಾದವರ ಸಂಖ್ಯೆ ಆಗಿದೆ. 1,33,404 ಜನ ಎರಡನೇಯ ಡೋಸ್ ಪಡೆಯಬೇಕಾಗಿದೆ‌ ಎಂದು ತಿಳಿಸಿದ್ದಾರೆ.

ಕೇಂದ್ರದಿಂದ 670 ವಯಲ್ ಹಾಗೂ ರಾಜ್ಯದಿಂದ 3,740 ವಯಲ್ ಕೋವ್ಯಾಕ್ಸಿನ ಲಸಿಕೆ ಪೂರೈಕೆಯಾಗಿದ್ದು, ಒಟ್ಟು 4,410 ವಯಲ್ ಲಸಿಕೆ ಪೂರೈಕೆ ಆಗಿದೆ.
ಅದೇ ರೀತಿ, ಕೇಂದ್ರದಿಂದ 8,310 ವಯಲ್ ಹಾಗೂ ರಾಜ್ಯದಿಂದ 15,490ವಯಲ್ ಗಳಷ್ಟು ಕೋವಿಶಿಲ್ಡ್ ಲಸಿಕೆ ಪೂರೈಕೆ ಯಾಗಿದ್ದು, ಒಟ್ಟು 23,800 ವಯಲ್ ಕೋವಿಶಿಲ್ಡ್ ಲಸಿಕೆ ಪೂರೈಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾಹಿತಿ ನೀಡಿದ್ದಾರೆ.

18 ರಿಂದ 44 ವಯಸ್ಸಿನವರ ಗುರಿ 22,95,517 ಇದರಲ್ಲಿ 5,075 ಲಸಿಕೆ ನೀಡಲಾಗಿದೆ.ಈ ಲಸಿಕಾಕರಣವನ್ನು ಮೇ.11 ರಿಂದ ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಮಡಿಸಿವರ್ ಗಳ ಪೂರೈಕೆ :

ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಏ.1ರಿಂದ ಮೇ.23 ರ ವರೆಗೆ 23,283 ರೆಮಡಿಸಿವರ್‌ ವಯಲ್‌ಗಳು
ಪೂರೈಕೆಯಾಗಿರುತ್ತವೆ.
ಇವುಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಒಟ್ಟು 19,531 ವಯಲ್‌ಗಳನ್ನು ನೀಡಲಾಗಿದೆ. ಸದ್ಯ 3,752 ವಯಲ್‌ಗಳು ಜಿಲ್ಲಾ ಉಗ್ರಾಣದಲ್ಲಿ ಲಭ್ಯವಿರುತ್ತವೆ.

ಅದೇ ರೀತಿ, ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಏ.1 ರಿಂದ ಮೇ.23 ರ ವರೆಗೆ 16,881 ರೆಮಡಿಸಿವರ್‌ ವಯಲ್‌ಗಳು ಪೂರೈಕೆಯಾಗಿರುತ್ತವೆ.

ರೆಮಿಡಿಸಿವಿರ್ ಗಾಗಿ ಆಸ್ಪತ್ರೆಯವರು ವೆಬ್ ಸೈಟ್ ಮೂಲಕ ನೋಂದಣಿ ಮಾಡಿದಾಗ ನೇರವಾಗಿ ಆಯಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ.

ರೆಮಿಡಿಸಿವಿರ್ ಹಂಚಿಕೆ ಅನುಸಾರ ಸಮರ್ಪಕವಾಗಿ ಹಂಚಿಕೆ ಮಾಡಲಾಗುತ್ತಿದೆ. ಎಲ್ಲರಿಗೂ ರೆಮಿಡಿಸಿವಿರ್ ಅಗತ್ಯವಿರುವುದಿಲ್ಲ; ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಲಾಗುವುದು ಎಂದು ತಿಳಿಸಿದರು.

ಕೋವಿಡ್ -19 ಕುರಿತು ಅಂಕಿ ಅಂಶಗಳ ಮಾಹಿತಿ :

ಇನ್ನು, ಕೋವಿಡ್ -19 ಕುರಿತು ಅಂಕಿ ಅಂಶಗಳ‌ ಮಾಹಿತಿಯನ್ನು ನೀಡಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಮಾ.17 ರಿಂದ ಮೇ.24 ರ ವರೆಗೆ ಜಿಲ್ಲೆಯಲ್ಲಿ ಒಟ್ಟು 2,05,154 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ
30,022 ಜನರಲ್ಲಿ ಸೊಂಕು ದೃಢ (ಪಾಸಿಟಿವ್ )ಪಟ್ಟಿದೆ ಎಂದು ತಿಳಿಸಿದ್ದಾರೆ.

12,346 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದು,
17,449 ಸಕ್ರಿಯವಾಗಿರುವ ಪ್ರಕರಣಗಳಿವೆ.
ಹೊಂ ಐಸೊಲೇಶನ್‌ದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 14,686 ಆಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 319 ಆಗಿದೆ‌.

ಜಿಲ್ಲೆಯಲ್ಲಿ ಕಡಿಮೆ ಕೋವಿಡ್ ಮರಣ ಪ್ರಮಾಣ:

ಕೋವಿಡ್ ಕಾರಣದಿಂದಾಗಿ 87 ಜನ ಮರಣ ಹೊಂದಿದ್ದಾರೆ. ಅಲ್ಲದೇ, ಸಕಾರಾತ್ಮಕ ಪ್ರಕರಣ ಶೇಕಡಾವಾರು (ಪಾಸಿಟಿವಿಟಿ ರೇಟ) ಕಳೆದ 10 ದಿವಸದಿಂದ 33.56% ಆಗಿದೆ.

ಗುಣಮುಖರಾದವರ ಪ್ರಮಾಣ ಶೇಕಡಾವಾರು
68.67% ಆಗಿದ್ದು, ಮರಣ ಪ್ರಮಾಣ ಶೇಕಡಾವಾರು (ಕಳೆದ 10 ದಿವಸದಿಂದ) 0.42% ಆಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4,146 ಹಾಸಿಗೆಗಳು ಲಭ್ಯವಿವೆ.
ಕೋವಿಡ್-19 ರೋಗಿಗಳಿಗೆ ಮೀಸಲಿಟ್ಟಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಸಿಗೆಗಳು ಲಭ್ಯವಿದ್ದು ಇವುಗಳಲ್ಲಿ 2,357 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 17ರಿಂದ ಇಲ್ಲಿಯವರೆಗಿನ ಕೊರೋನಾ 2ನೇ ಅಲೆಯ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ –

Press Note – CCC, Covid war Room and ABAK

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button