ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ತಯಾರಿಸಿಕೊಡುತ್ತಿದ್ದ ಪತ್ರಕರ್ತನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿದ್ದು, ರಾಜ್ಯದ ಗಡಿಭಾಗದ ಮೂಲಕ ಹೊರ ರಾಜ್ಯಗಳಿಗೆ ಸಂಚರಿಸುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಇದರ ಬೆನ್ನಲ್ಲೇ ನಕಲಿ ವರದಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಕೊಡಗು ಜಿಲ್ಲೆ ಕುಟ್ಟ ಚೆಕ್ ಪೋಸ್ಟ್ ನಲ್ಲಿ ಗೂಡ್ ವಾಹನ ಪರಿಶೀಲಿಸಿದಾಗ ಲಾರಿ ಚಾಲಕ ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರುವುದು ಗೊತಾಗಿದೆ. ಆರ್ ಟಿಪಿಸಿ ಆರ್ ಸಂಖ್ಯೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಅದು ನಕಲಿ ಎಂಬುದು ದೃಢವಾಗಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಿದ್ದಾಪುರದ ಪತ್ರಿಕಾ ವರದಿಗಾರ ಆರ್ ಟಿಪಿಸಿ ಆರ್ ಟೆಸ್ಟ್ ಮಾಡಿ ತನ್ನ ಸ್ಟುಡಿಯೋದಲ್ಲೇ ವರದಿ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಕುಟ್ಟ ಠಾಣೆ ಪೊಲೀಸರು ಸಿದ್ದಾಪುರದ ಪತ್ರಕರ್ತನನ್ನು ಬಂಧಿಸಿದ್ದಾರೆ.
ಬಿಜೆಪಿ ಶಾಸಕರ ಆಪ್ತನ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ