ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚರವಾಗಿ ಭಾರಿ ಚರ್ಚೆ ನಡೆಯುತ್ತಿದ್ದ ಬೆನ್ನಲ್ಲೇ ವಿರೋಧಿ ಬಣಕ್ಕೆ ಸಿಎಂ ಯಡಿಯೂರಪ್ಪ ಟಾಂಗ್ ನೀಡಿದ್ದು, ಯಾರು ದೆಹಲಿಗೆ ಹೋಗಿ ಬಂದರೋ ಅವರಿಗೆ ಅಲ್ಲಿಯೇ ಉತ್ತರ ಕೊಟ್ಟು ಕಳಿಸಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶಾಸಕಾಂಗ ಸಭೆ ಬಗ್ಗೆ ಚರ್ಚಿಸಬೇಕಾದ ಅಗತ್ಯವೇ ಇಲ್ಲ. ನನ್ನ ಮುಂದೆ ಇರುವುದು ಕೋವಿಡ್ ನಿಯಂತ್ರ, ರಾಜ್ಯದ ಜನರ ಹಿತರಕ್ಷಣೆ. ಬೇರಾವ ವಿಷಯದ ಬಗ್ಗೆಯೂ ನಾನು ಆದ್ಯತೆ ನೀಡುವುದಿಲ್ಲ. ಯಾರೋ ದೆಹಲಿಗೆ ಹೋಗಿ ಬಂದರು ಎಂದರೆ ಅವರಿಗೆ ಅಲ್ಲಿಯೇ ಉತ್ತರವನ್ನು ಕೊಟ್ಟು ಕಳುಹಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಸಾವು ನೋವುಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಚಿವರು, ಶಾಸಕರು ಎಲ್ಲರೂ ಒಗ್ಗಟ್ಟಾಗಿ ಇದನ್ನು ತಡೆದು ಜನರ ಹಿತ ಕಾಯಬೇಕು ಹೊರತು ಬೇರೆ ವಿಚಾರಗಳ ಚರ್ಚೆಯಲ್ಲಿ ತೊಡಗುವುದಲ್ಲ ಎಂದು ವಿರೋಧಿ ಬಣಕ್ಕೆ ಬಿಸಿ ಮುಟ್ಟಿಸಿದ್ದಾರೆ.
ನಾಯಕತ್ವ ಬದಲಾವಣೆಯಾದರೆ ಬೆಂಕಿ ಹೊತ್ತಲಿದೆ…!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ