ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜುಲೈ 3 ನೇ ವಾರದಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮ ವಹಿಸಿ ಈ ವರ್ಷ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸೀಮಿತ ವಿಷಯಗಳಿಗೆ ಎರಡು ದಿನ ಪರೀಕ್ಷೆ ನಡೆಸಲಾಗುವುದು ಜುಲೈ ಮೂರನೆ ವಾರ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದ್ದು, 20 ದಿನ ಮುಂಚಿತವಾಗಿ ತಿಳಿಸಲಾಗುವುದು ಎಂದರು.
ಶಿಕ್ಷಣ ಸಚಿವರ ಸುದ್ದಿಗೋಷ್ಠಿ ಮುಖ್ಯಾಂಶ:
* ಜುಲೈ ಅಂತ್ಯದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದ್ದು, ಹೆಚ್ಚು SSLC ನೊಂದಾಯಿತ ವಿದ್ಯಾರ್ಥಿಗಳಿರುವ ಪ್ರೌಢಶಾಲೆಗಳನ್ನು ಪರೀಕ್ಷಾ ಕೇಂದ್ರವಾಗಿಸಿ, ಪರೀಕ್ಷಾ ಕೇಂದ್ರಗಳನ್ನು ಮರು ಮಾರ್ಪಡಿಸುವುದು.
* ಪರಿಕ್ಷಾರ್ಥಿಗಳಿಗಿಂತ ಕಡಿಮೆ ಸಂಖ್ಯಾಬಲವಿರುವ ಪ್ರೌಢಶಾಲಾ ಮಕ್ಕಳನ್ನು ಹತ್ತಿರದ ಪರೀಕ್ಷಾ ಕೇಂದ್ರಕ್ಕೆ ಸಂಯೋಜಿಸುವುದು.
* ಪ್ರತಿ ಪರೀಕ್ಷಾ ಕೊಠಡಿಗೆ ತಲಾ 10/12 ಪರೀಕ್ಷಾರ್ಥಿಗಳನ್ನು ಅಲಾಟ್ ಮಾಡುವುದು. ಈ ಪ್ರಮಾಣದಲ್ಲಿ ಪರೀಕ್ಷೆ ನಡೆಸಲು ಆ ಕೇಂದ್ರದಲ್ಲಿ ಕೊಠಡಿಗಳು ಇರತಕ್ಕದ್ದು.
* ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಅದೀಕ್ಷಕರನ್ನು ಮತ್ತು ಕಸ್ಟೋಡಿಗಳನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಂದ ನೇಮಕ ಮಾಡುವುದು.
* ಪರೀಕ್ಷಾ ಕೇಂದ್ರವನ್ನು ರಚಿಸುವಾಗ ಅಗತ್ಯ ಪ್ರಮಾಣದಲ್ಲೀ ಕೊಠಡಿಗಳು ಮತ್ತು ಹೆಚ್ಚುವರಿ ವಿಶೇಷ ಕೊಠಡಿಯ ಲಭ್ಯತೆ ಹಾಗೂ ಸರಿಯಾದ ಅಳತೆಯ ಡೆಸ್ಕ್ ಗಳು ಇರುವಿಕೆಯನ್ನು ಖಚಿತಪಡಿಸಿಕೊಳ್ಳತಕ್ಕದ್ದು.
* ಜುಲೈ 3ನೇ ವಾರದಲ್ಲಿ ನಿಗದಿತ 2 ದಿನಗಳಲ್ಲಿ ಪರೀಕ್ಷಾ ಕಾರ್ಯವನ್ನು ನಡೆಸಲಾಗುವುದು. ವೇಳಾಪಟ್ಟಿಯನ್ನು ಪರೀಕ್ಷೆಗೆ 20 ದಿನಗಳಿಗೆ ಮುಂಚೆ ನುಡಲಾಗುವುದು.
* ಒಂದು ದಿನ ಭಾಷಾ ವಿಷಯಗಳಲ್ಲೂ, ಮತ್ತೊಂದು ದಿನ ಕೋರ್ ವಿಷಯಗಳಲ್ಲೂ ಪರೀಕ್ಷಾ ಕಾರ್ಯವನ್ನು ನಡೆಸಲಾಗುವುದು.
* ಪ್ರಶ್ನೆಪತ್ರಿಕೆಯು ಹೊಸ ಮಾದರಿ ಪ್ರಶ್ನೆಗಳನ್ನು ಹೊಂದಿರಲಿದೆ. ಇಸ್ಟರಲ್ಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪ್ರಕಟಿಸಲಾಗುವುದು.
* ಪರೀಕ್ಷಾ ಕಾರ್ಯವನ್ನು ಕೋವಿಡ್ -19 ಮಾದರಿ SOP ನಿಯಮಗಳಿಗೆ ಅನುಗುಣವಾಗಿ ಸಜ್ಜುಗೊಳಿಸುವುದು. ಎಲ್ಲಾ ವಿದ್ಯಾರ್ಥಿಗಳಿಗೂ. N-95 ಮಾದರಿಯ ಮಾಸ್ಕ್ ಒದಗಿಸಲಾಗುವುದು. ಕೊಠಡಿ ಮೇಲ್ವಿಚಾರಕರಿಗೆಲ್ಲ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಲಾಗುವುದು.
* ಖಾಸಗಿ ಅಭ್ಯರ್ಥಿಗಳಿಗೆ 100 ಸಂಖ್ಯೆಯಲ್ಲಿ ಅವಕಾಶವಿದ್ದರೆ ತಾಲ್ಲೂಕು ಹಂತದಲ್ಲಿಯೂ ಪರೀಕ್ಷಾ ಕೇಂದ್ರವನ್ನು ಸಜ್ಜುಗೊಳಿಸಲು ಚಿಂತಿಸಲಾಗುವುದು.
ಇಲ್ಲದಿದ್ದರೆ ನಿಯಮಾನುಸಾರ ಜಿಲ್ಲಾ ಕೇಂದ್ರದಲ್ಲೇ ಆಯೋಜಿಸುವುದು.
* ಭಾಷಾ ವಿಷಯಗಳಲ್ಲಿ ತಲಾ 40 ಅಂಕಗಳ 40 ಪ್ರಶ್ನೆಗಳಂತೆ ಒಟ್ಟು 120 ಅಂಕಗಳಿಗೆ 120 ಬಹು ಅಂಶ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಂತೆ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಗುವುದು. ಹಾಗೂ ಪ್ರತಿ ವಿಷಯಕ್ಕೂ ತಲಾ 50 ನಿಮಿಷಗಳಂತೆ ಒಟ್ಟು 150 ನಿಮಿಷಗಳಿಗೆ ಪರೀಕ್ಷೆ ನಡೆಸಲಾಗುವುದು.ಇದೇ ರೀತಿಯಲ್ಲಿ ಒಂದು ದಿನ ಬಿಡುವು ನೀಡಿ ಕೋರ್ ವಿಷಯಗಳಿಗೂ ಪರೀಕ್ಷೆಯನ್ನು ನಡೆಸಲಾಗುತ್ತದೆ.
* ಕ್ಲಸ್ಟರ್ ಪರೀಕ್ಷಾ ಕೇಂದ್ರಗಳು ಇರುವುದಿಲ್ಲ.
* ದೊಡ್ಡ ಕೊಠಡಿಗಳು ಲಭ್ಯವಿದ್ದರೆ 12 ಕಿಂತ ಹೆಚ್ಚು ಮಕ್ಕಳನ್ನು 6*6 ಅಡಿಗಳ ಅಂತರದಲ್ಲಿ ಅಲಾಟ್ ಮಾಡಬಹುದು.
* 10/12 ಪ್ರಶ್ನೆಪತ್ರಿಕೆಗಳಿಗೆ ಒಂದು ಪ್ಯಾಕೇಟ್ ನಂತೆ ಪ್ರಶ್ನೆಪತ್ರಿಕೆ ಪ್ಯಾಕೇಟ್ ಗಳನ್ನು ಪೂರೈಸಲಾಗುವುದು.
* ಲಸಿಕೆ ಪಡೆದಿರುವ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಸಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸುವುದು, ಪ್ರೌಢಶಾಲಾ ಶಿಕ್ಷಕರನ್ನು ಪರೀಕ್ಷಾ ಕಾರ್ಯ ನಿರ್ವಹಣೆಗೆ ಬಳಸಿಕೊಳ್ಳಬಹುದು. ಯಾವುದೇ ಸಂದರ್ಭದಲ್ಲಿ ಆಯಾ ಪರೀಕ್ಷಾ ವಿಷಯ ಬೋದಕರನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳುವಂತಿಲ್ಲ.
* ಕೋವಿಡ್ ರೋಗ ಕಾರಣದಿಂದ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದಂತೆಯೇ ಪೂರಖ ಫರೀಕ್ಷೆಯಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು.
* ವಲಸೆ ಮಕ್ಕಳು ಇಚ್ಚೆಪಟ್ಟರೇ ವಲಸೆ ಹೋಗಿರುವ ಸಮೀಪದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬಹುದು.
* ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ನೀಡಲಾಗುವುದು.
* ಈ ಮೇಲ್ಕಂಡ ನಿಯಮಗಳನ್ನು ಅನುಸರಿಸಿ ಈ ವರ್ಷ ಪರೀಕ್ಷಾ ಕಾರ್ಯವನ್ನು ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಅಗತ್ಯ ಮಾನಸಿಕ ಸಿದ್ಧತೆ ಮಾಡಿಕೊಳ್ಳುವುದು.
ಪಿಯುಸಿ ಪರೀಕ್ಷೆ ರದ್ದು – ಸುರೇಶ ಕುಮಾರ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ