Kannada NewsKarnataka News

ಕಿತ್ತೂರು ಬಳಿ ಮನೆಗಳ್ಳನ ಬಂಧನ: 2.41 ಲಕ್ಷ ರೂ ನಗದು, ಆಭರಣ ವಶ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು–  ನಿಚ್ಚಣಕಿ, ಹುಲಿಕಟ್ಟಿ, ಗಿರಿಯಾಲ ಗ್ರಾಮಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕಿತ್ತೂರು ಪೊಲೀಸರು ಬಂಧಿಸಿ ಅವನಿಂದ ಕಳ್ಳತನ ಮಾಡಿದ್ದ ಬಂಗಾರ, ಬೆಳ್ಳಿಯ ಆಭರಣಗಳನ್ನು ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ  ಮಾರ್ಗದರ್ಶನದಲ್ಲಿ  ಶಿವಾನಂದ ಕಟಗಿ, ಡಿ.ಎಸ್.ಪಿ. ಬೈಲಹೊಂಗಲ ನೇತೃತ್ವದಲ್ಲಿ ಕಿತ್ತೂರ ವೃತ್ತ ನಿರೀಕ್ಷಕರಾದ  ಮಂಜುನಾಥ ಎಸ್ ಕುಸುಗಲ್, ಮತ್ತು ಎಸ್.ಬಿ.ಮಾವಿನಕಟ್ಟಿ ಪಿ.ಎಸ್.ಐ (ಅ.ವಿ) ಕಿತ್ತೂರ ರವರ ತಂಡ ಕಾರ್ಯಾಚರಣೆ ನಡೆಸಿದೆ.

  2.41.200/- ರೂಪಾಯಿ ಕಿಮ್ಮತ್ತಿನ ಒಟ್ಟು 69 ಗ್ರಾಂ ತೂಕದ ಬಂಗಾರದ ಮತ್ತು 220 ಗ್ರಾಂ ಬೆಳ್ಳಿಯ ಆಭರಣಗಳನ್ನು ಹಾಗೂ  120000/ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
  ಶಿವಾನಂದ ಕಲ್ಲಪ್ಪ ಹುಬ್ಬಳ್ಳಿ ವಯಸ್ಸು: 30 ವರ್ಷ ಸಾ: ಉಗರಖೋಡ ತಾ: ಕಿತ್ತೂರ ಬಂಧಿತ ವ್ಯಕ್ತಿ.
 12-06-2021 ರಂದು ಬೆಳಗಿನ 04:30 ಗಂಟೆಯ ಸುಮಾರಿಗೆ  ಪೊಲೀಸರು ವಿಶೇಷ ರಾತ್ರಿ ಗಸ್ತು ಕರ್ತವ್ಯದ ಮೇಲಿದ್ದಾಗ ಕಿತ್ತೂರ ಹಳೆ ಚೆನ್ನಮ್ಮಾ ಸರ್ಕಲ್ ಹತ್ತಿರ ಇರುವ ರಸ್ತೆಯ ಬಾಜು ಇರುವ ಖುಲ್ಲಾ ಜಾಗದಲ್ಲಿ ಈತ ನಿಂತಿದ್ದ.
ಅವನ ಹತ್ತಿರ ಹೋಗಿ ಹಿಡಿದುಕೊಂಡು ವಿಚಾರಿಸಲು ತಾನು ಶಿವನೂರ ಕಡೆಗೆ ಹೋಗುವ ಸಲುವಾಗಿ ನಿಂತಿರುತ್ತೇನೆ ಎಂದು ಸಂಶಯಾತ್ಮಕವಾಗಿ ಹೇಳಿದ್ದರಿಂದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದರು.
ಅವನು ನಿಚ್ಚಣಕಿ, ಹುಲಿಕಟ್ಟಿ, ಗಿರಿಯಾಲ ಗ್ರಾಮಗಳಲ್ಲಿ ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅವನಿಂದ ಆಭರಣ ಹಾಗೂ ಹಣವನ್ನು ವಶಪಡಿಸಿಕೊಂಡು ದಸ್ತಗೀರ ಮಾಡಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಬಿ.ಎಸ್.ಪತ್ತಾರ, ಎಸ್.ಎಸ್.ಕಾಜಗಾರ, ಆರ್.ಎಸ್.ಶೀಲಿ, ಎಸ್.ಎಮ್.ಜವಳ, ಆರ್.ಕೆ.ಗೆಜೇರಿ, ಎಸ್.ಎಮ್.ಜೈನರ, ಸಿ.ಎಸ್.ಬುದ್ದಿ, ಎಲ್.ಎಫ್.ಜಂಬಲವಾಡಿ, ನೇತ್ರಾ ಸುಣಗಾರ, ಗೌರಿ ಪಾರಿಶ್ವಾಡ, ಕೃಷ್ಣಾ ಭಜಂತ್ರಿ, ಮಕ್ತುಮ ಯಕ್ಕುಂಡಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button