ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಜುಲೈ 1ರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಶಿಕ್ಷಕರು ಜೂನ್ 15ರಿಂದಲೇ ಶಾಲೆಗೆ ತೆರಳಬೇಕು ಎಂದು ಸೂಚಿಸಲಾಗಿತ್ತು.
ಆದರೆ ಇದೀಗ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿದಿರುವುದರಿಂದ ಮತ್ತು ಬಸ್ ಗಳು ಆರಂಭವಾಗದಿರುವುದರಿಂದ ಶಿಕ್ಷಕರು ಶಾಲೆಗೆ ಹಾಜರಾಗುವ ದಿನವನ್ನು ಮುಂದೂಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಈ ಕುರಿತು ಶಿಕ್ಷಣ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಾಳೆ ಸಂಜೆಯೊಳಗೆ ಆದೇಶ ಹೊರಡಿಸಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಶಾಲೆಗಳ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಶಿಕ್ಷಕರು ಜೂನ್ 15ರಿಂದಲೇ ಶಾಲೆಗೆ ತೆರಳಬೇಕೆಂದು ಸೂಚಿಸಲಾಗಿತ್ತು. ಈಗ ಲಾಕ್ ಡೌನ್ ಇನ್ನೂ ತೆರವಾಗದಿರುವುದರಿಂದ ಬಸ್ ಗಳು ಆರಂಭವಾಗಿಲ್ಲ. ಹಾಗಾಗಿ ಶಿಕ್ಷಕರು ಇಂದಿನ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ತೆರಳಲು ಸಾಧ್ಯವಿಲ್ಲ ಎನ್ನುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೆ 11 ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿರುವುದರಿಂದ ಲಾಕ್ ಡೌನ್ ವಿಸ್ತರಿಸಲಾಗಿದೆ. ಅಂತಹ ಜಿಲ್ಲೆಗಳಲ್ಲಿ ಶಿಕ್ಷಕರು ಶಾಲೆಗೆ ತೆರಳುವುದು ಸಾಧ್ಯವಿಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ ಕುಮಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಭಾನುವಾರ ಸಂಜೆ ಇಲ್ಲವೇ ಸೋಮವಾರ ಬೆಳಗ್ಗೆ ಚರ್ಚಿಸಲಿದ್ದಾರೆ. ಶಿಕ್ಷಕರಿಗೂ ಶಾಲೆಗ ಹಾಜರಾಗುವ ದಿನಾಂಕವನ್ನು ಮುಂದೂಡುವ ಅನಿವಾರ್ಯತೆಯನ್ನು ತಿಳಿಸಲಿದ್ದಾರೆ.
ಬಹುತೇಕ ಶಾಲೆ ಆರಂಭಕ್ಕೆ 2 -3 ದಿನ ಮೊದಲು ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಬೆಳಗಾವಿ; ಒಂದೇ ಅಪಾರ್ಟ್ ಮೆಂಟ್ ನ 7 ಜನರಲ್ಲಿ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ