ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಅನುಸಾರ ೧೮ ವರ್ಷ ಮೇಲ್ಪಟ್ಟ ಯುವಕರಿಗೆ ಕೊರೊನಾ ಲಸಿಕೆ (ವ್ಯಾಕ್ಸಿನ್) ಹಾಕಲಾಗುತ್ತಿದೆ.
ಆದರೆ ಲಸಿಕೆ ಪಡೆಯಲು ಇರುವ ನಿಯಮಗಳೇನು ಎನ್ನುವ ಗೊಂದಲಕ್ಕೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಮಾಹಿತಿ ನೀಡಿದ್ದಾರೆ.
ಸರಕಾರದ ಕೊವಿನ್ www.cowin.gov.in ಅಥವಾ http://www.selfregistration.cowin.gov.in ಆಪ್‌ನಲ್ಲಿ ಸಂಪೂರ್ಣ ವಿವರ ದಾಖಲಿಸಬೇಕು. ತಮಗೆ ಬಂದ ಮೆಸೆಜ ಅನುಸಾರ ನಿಗಧಿತ ಅವಧಿಯೋಳಗೆ ಆಸ್ಪತ್ರೆಗೆ ಆಗಮಿಸಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಆದರೆ ೪೫ ವರ್ಷ ಮೇಲ್ಪಟ್ಟವರು ನೇರವಾಗಿ ಆಸ್ಪತ್ರೆಗೆ ಆಗಮಿಸಿ (ಪ್ರಥಮ ಡೋಸ್) ಹೆಸರು ನೊಂದಾಯಿಸಿ ಲಸಿಕೆಯನ್ನು ಪಡೆದುಕೊಳ್ಳಬಹುದು.
ಕೋವಿಶೀಲ್ಡ್ ಲಸಿಕೆಯನ್ನು ಹಾಕಲಾಗುತ್ತಿದ್ದು, ಸರಕಾರದ ಸೂಚನೆಯನುಸಾರ ಅರ್ಹ ೧೮ ಹಾಗೂ ೪೫ ವರ್ಷ ಮೇಲ್ಪಟ್ಟವರು ಪ್ರಥಮ ಡೋಸ್ ಪಡೆದ ೮೪ ದಿನಗಳ ನಂತರ ದ್ವಿತೀಯ ಡೋಸ್ ನೀಡಲಾಗುತ್ತದೆ. ಕೆಲವು ಸಂದರ್ಭದಲ್ಲಿ ವೆಬ್‌ಸೈಟನಲ್ಲಿ ಉಂಟಾದ ತಾಂತ್ರಿಕ ದೋಷಗಳಿಂದ ಹಲವರು ಗೊಂದಲಕ್ಕೀಡಾಗಿ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೀಳಿದು ಅನಾವಶ್ಯಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸತ್ಯಕ್ಕೆ ದೂರವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಸರಕಾರವು ನಿರ್ಧರಿಸಿದ ಸೂಚನೆಗೆ ಅನುಗುಣವಾಗಿ ಲಸಿಕೆಯನ್ನು ಹಾಕಲಾಗುತ್ತಿದೆ. ದಯವಿಟ್ಟು ನಿಗದಿ ಪಡಿಸಿದ ದಿನದಂದು ಆಗಮಿಸಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
೧೮ ವರ್ಷ ಮೇಲ್ಪಟ್ಟವರು ಕೊವಿನ್ www.cowin.gov.in ಆಪನಲ್ಲಿ ತಮ್ಮ ಸಂಪೂರ್ಣ ವಿವರವನ್ನು ದಾಖಲಿಸಿದರೆ ಮಾತ್ರ ಲಸಿಕೆ ನೀಡಲಾಗುತ್ತದೆ. ಇರುವ ತಾಂತ್ರಿಕ ದೋಷವನ್ನು ಜಿಲ್ಲಾ ಆರೋಗ್ಯ ಇಲಾಖೆಯು ಸರಿಪಡಿಸಿದೆ. ಆದರೆ ಕೆಲವರು ಅನಾವಶ್ಯಕವಾಗಿ ಗೊಂದಲಕ್ಕೀಡಾಗುತ್ತಿದ್ದು, ಒಂದು ವೇಳೆ ತಾಂತ್ರಿಕ ದೋಷ ಉಂಟಾದರೆ ದಯವಿಟ್ಟು ಸಹಕರಿಸಲು ಕೋರಲಾಗಿದೆ.
ಒಂದೇ ಮನೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟರೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ