Latest

ಕಾವೇರಿ ಆರತಿ ಮಾಡಿದ ಕಾವಿಧಾರಿಗಳು

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತೀರದಲ್ಲಿ ಕಾವೇರಿ ಆರತಿಯನ್ನು ವಿಶೇಷವಾಗಿ ಮಾಡಿ ನಾಡಿನ ಮತ್ತು ದೇಶದ ಜಗತ್ತಿನ ಕಲ್ಯಾಣಕ್ಕಾಗಿ ಕವಿಧಾರಿಗಳು ಪ್ರಾರ್ಥಿಸಿದರು.

ಬೇಬಿ ಗ್ರಾಮ ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ: ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ತಮ್ಮ ಆಶ್ರಮದಲ್ಲಿ ಜರುಗುವ 102 ನೆಯ ಬೆಳದಿಂಗಳ ದೀಪಾರತಿಯ ಸಂದರ್ಭದಲ್ಲಿ ಕಾವೇರಿ ಆರತಿ ಮಾಡಿ ಮಾತನಾಡುತ್ತಾ ನಾವು ಈಗ ದೈವದ ಕೃಪೆಗೆ ಶರಣಾಗುವುದು ಅವಶ್ಯವಿದೆ ಇವತ್ತು ಕಾವೇರಿ ಆರತಿ ಮಾಡುವುದರ ಮುಖಾಂತರ ಜನರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇವೆ ಈ ಸಂದರ್ಭದಲ್ಲಿ ಬೆಳಗಾವಿಯಿಂದ ಬಂದು ಹುಕ್ಕೇರಿ ಶ್ರೀಗಳು ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಂತಸದ ಸಂಗತಿ ಎಂದರು.

ಕಾವೇರಿ ಆರತಿ ಮಾಡಿ ತಾವೇ ಸ್ವತಹ ಕವನವನ್ನು ರಚಿಸಿ ಹಾಡಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಭಾರತೀಯ ಪರಂಪರೆಯಲ್ಲಿ ನದಿಗಳಿಗೆ ಹೆಚ್ಚು ಮಹತ್ವವಿದೆ ಕಾವೇರಿ ಕರುನಾಡಿನ ಜೀವನದಿ. ಉತ್ತರಪ್ರದೇಶದ ಭಾಗದಲ್ಲಿ ಕಾಶಿಯಲ್ಲಿ ಗಂಗಾರತಿಯನ್ನ ನಾವು ನೋಡುತ್ತೇವೆ ಆದರೆ ಕಾವೇರಿ ಆರತಿಯನ್ನ ಆರಂಭಿಸಿರುವ ಕೀರ್ತಿ ಪರಮ ಪೂಜ್ಯ ಶ್ರೀ ಡಾ ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ ಎಂದರು.

ನಟ ನಿರ್ದೇಶಕ ನವೀನ ಕೃಷ್ಣ ಅವರು ಭಾಗವಹಿಸಿ ಶ್ರೀಮಠದ ಕಾರ್ಯದ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದರಲದೇ 102 ರ ಈ ಬೆಳದಿಂಗಳ ಕಾವೇರಿ ಆರತಿಯ ಕಾರ್ಯಕ್ರಮದಲ್ಲಿ ಇಬ್ಬರೂ ಪೂಜ್ಯರು ಜನರ ಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದಾರೆ ಅವರಿಗೆ ನಾವು ಅಭಿನಂದಿಸುತ್ತೇವೆ ಎಂದರು ಸುದ್ದಿವಾಹಿನಿಯ ಶ್ರೀ ಅವರು ಉಪಸ್ಥಿತರಿದ್ದರು ಆಶ್ರಮದ ಮುಖ್ಯ ವ್ಯವಸ್ಥಾಪಕ ಶಿವಕುಮಾರ ಅವರು ಪ್ರಾರ್ಥನೆ ನಿರೂಪಣೆ ಮಾಡಿದರು.
ವಿಶೇಷ ಅಧಿವೇಶನ ಕರೆಯುವಂತೆ ಕುಮಾರಸ್ವಾಮಿ ಪತ್ರ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button