
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರುನ ಆರ್ ಆರ್ ನಗರ, ನಾಗರಬಾವಿ, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವೆಡೆಗಳಲ್ಲಿ ಮಧ್ಯಾಹ್ನ 12:23ರರ ಸುಮಾರಿ ಭಾರಿ ಸದ್ದು ಕೇಳಿಬಂದಿದ್ದು, ಮನೆ ಕಿಟಕಿ, ಬಾಗಿಲುಗಳೇ ಅಲುಗಾಡಿದ ಅನುಭವವಾಗಿದೆ. ಸ್ಫೋಟದ ಸದ್ದಿಗೆ ಭಯಗೊಂದ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ಭೂಮಿಯ ಒಳಗಿನಿಂದ ಬಂದಿರುವ ಶಬ್ಧದಂತಿದ್ದು, ಸ್ಫೋಟದ ರೀತಿ ಶಬ್ಧ ಕೇಳಿಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ಭೂಗೋಳ ತಜ್ನ ಹೆಚ್ ಎಸ್ ಎಂ ಪ್ರಕಾಶ್ ತಿಳಿಸಿದ್ದಾರೆ.
ಎಲ್ಲಿಯೋ ಮಿಸ್ ಕಮ್ಯೂನಿಕೇಷನ್ ಆಗಿದೆ – ಶ್ರೀರಾಮುಲು ಆಕ್ರೋಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ