Kannada NewsLatest

ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ಸಿದ್ಧೇಶ್ವರ ಶ್ರೀಗಳ ಜೊತೆ ಚರ್ಚೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ವಿಜಯಪುರ ಜ್ಞಾನಯೋಗಾಶ್ರಮ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಜಿ ಅವರು  ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಸಮಗ್ರ ಚರ್ಚೆ ನಡೆಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ|| ಎಸ್.ಸಿ. ಕಮತೆಯವರು ಶ್ರೀಗಳ ಹಾಗೂ ಉಪಸ್ಥಿತರಿದ್ದ ಎಲ್ಲ ಗಣ್ಯರಿಗೆ ಮಂಡಿಸಿ ಚರ್ಚೆಗೆ ಅನುವುಮಾಡಿಕೊಟ್ಟರು. ತದನಂತರ ಶಿಕ್ಷಣ ನೀತಿಯ ಧ್ಯೇಯ ಮತ್ತು ಉದ್ದೇಶಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶ್ರೀಗಳು ಈ ಶಿಕ್ಷಣ ನೀತಿಯ ಪ್ರತಿಫಲ ಸಮಾಜಕ್ಕೆ ದೊರಕಬೇಕಾದರೆ ಶಿಕ್ಷಕರು ಅತ್ಯಂತ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕೆಲಸಮಾಡಬೇಕಾಗುವುದೆಂದು ಅಭಿಪ್ರಾಯಪಟ್ಟರು.

ಶ್ರೀಗಳು ಚರ್ಚೆಯನ್ನು ಮುಂದುವರೆಸುತ್ತ ಇತಿಹಾಸದ ತಕ್ಷಶಿಲಾ ಹಾಗೂ ನಾಳಂದಾ ವಿಶ್ವವಿದ್ಯಾಲಯಗಳನ್ನು ಹೋಲುವಂತ ಹೊಸ ವಿಶ್ವವಿದ್ಯಾಲಯಗಳು ಈ ಶತಮಾನದಲ್ಲಿ ಮರುಸ್ಥಾಪನೆಯಾಗಬೇಕೆಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧಸಂಸ್ಥಾನ ಮಠ ನಿಡಸೋಸಿ, ಗಣ್ಯರಾದ ಶ್ರೀ ಎ.ಎಸ್. ಪಾಶ್ಚಾಪುರೆ ಹೈಕೋರ್ಟ ನ್ಯಾಯಾಧಿಶರು (ವಿಶ್ರಾಂತ), ಶ್ರೀ ಎ.ಬಿ. ಪಾಟೀಲ ಚೇರಮನ್ ಎಸ್.ಡಿ.ವ್ಹಿ.ಎಸ್. ಸಂಘ, ಸಂಕೇಶ್ವರ ಹಾಗೂ ಮಾಜಿ ಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಇತರರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪದವಿ, ಸ್ನಾತಕೋತ್ತರ ಪರೀಕ್ಷೆ ಫಿಕ್ಸ್

ಪಂಡರಾಪುರದ ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳ ದಿಂಡಿ, ಪಾಲಿಕಿ ಪ್ರವೇಶ ನಿಷೇಧ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button