Kannada NewsLatest

ಭಾರತೀಯ ಕ್ರೈಸ್ತರ ದಿನಾಚರಣೆ; ಕೋವಿಡ್ ಪೀಡಿತರಿಗೆ ಹಣ್ಣು, ಹಂಪಲು ವಿತರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಫಾಸ್ಟರ್ಸ್ ಅಂಡ್ ಕ್ರಿಸ್ಟಿನ್ ಲೀಡರ್ಸ್ ಅಸೋಸಿಯೇಷನ್, ಶನಿವಾರ – ಭಾರತೀಯ ಕ್ರೈಸ್ತ ದಿನಾಚರಣೆಅಂಗವಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಕೋವಿಡ್ 19 ನಿಯಮಗಳನ್ನು ಪಾಲಿಸಿ, ಹಣ್ಣು ಹಂಪಲವನ್ನು ವಿತರಿಸಲಾಯಿತು.

ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಜೆ ಥೋಮಸ್ ನೇತೃತ್ವದಲ್ಲಿ ಕೋವಿಡ್ ಹಾಗು ಇತರ ಒಳರೋಗಿಗಳಿಗೆ ಹಣ್ಣು, ಹಾಲು, ಬಿಸ್ಕೆಟ್, ನೀರು ನೀಡಿ ಅವರು ಶೀಘ್ರ ಗುಣವಾಗಲೆಂದು ಅವರಿಗಾಗಿ ಪ್ರಾರ್ಥಿಸಲಾಯಿತು.

ಬೆಳಗಾವಿ ಫಾಸ್ಟರ್ಸ್ ಅಂಡ್ ಕ್ರಿಸ್ಟಿನ್ ಲೀಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಪಿ ಥೋಮಸ್ ಮಾತನಾಡಿ, ಕೋವಿಡ್ ಸೋಂಕು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಭಾರತೀಯ ಸಮುದಾಯ ಕೋವಿಡ್ ಸೋಂಕಿನಿಂದ ತತ್ತರಿಸಿದೆ. ಕೋವಿಡ್ ಈ ನಾಡಿನಿಂದ ತೊಲಗಲಿ ಎಂದು ಏಸು ಕ್ರಿಸ್ತನಲ್ಲಿ ಪ್ರಾರ್ಥಿಸಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ್ದೇವೆ. ದಯಾಘನನಾದ ದೇವರಲ್ಲಿ ಜಗತ್ತಿಗೆ ಶಾಂತಿ, ಸುಖ, ನೆಮ್ಮದಿ ಕರುಣಿಸು ಎಂದು ಪ್ರಾರ್ಥಿಸಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಅಡ್ವೋಕೆಟ್ ಎನ್.ಆರ್.ಲಾತೂರ ಮಾತನಾಡಿ, ಭಾರತೀಯ ಕ್ರೈಸ್ತ ಸಮುದಾಯ ಈ ವರುಷದಿಂದ ಪ್ರತಿವರ್ಷ ಜುಲೈ 3ರಂದು ಕ್ರೈಸ್ತ ದಿನವನ್ನಾಗಿ ಆಚರಿಸುತ್ತಿದೆ. ನಾಡಿನ ಸುಖ, ಶಾಂತಿ, ನೆಮ್ಮದಿಗೆ ಪ್ರಾರ್ಥಿಸಿ ಬಿಮ್ಸ್ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ್ದಾರೆ. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ದೇವರ ಆಶೀರ್ವಾದವಿರಲಿ ಎಂದು ಹಾರೈಸಿದರು.

ಪಾಸ್ಟರ್ ಶಂಕರ್ ಸವದತ್ತಿ ಮತ್ತು ಪಾಸ್ಟರ್ ಸುಧಾಕರ್, ಜಿಲ್ಲಾಸ್ಪತ್ರೆಯ ನರ್ಸಿಂಗ್ ಮುಖ್ಯಸ್ಥರಾದ ಶ್ರೀಮತಿ ಕುಲಕರ್ಣಿ, ನ್ಯಾಯಾವಾದಿ ರಮೇಶ್, ಫಾಸ್ಟರ್ಸ್ ಅಂಡ್ ಕ್ರಿಸ್ಟಿನ್ ಲೀಡರ್ಸ್ ಅಸೋಸಿಯೇಷನ್‍ನ ಮುಖಂಡರು, ಕಾರ್ಯಕರ್ತರು ಇದ್ದರು.

ಪಾಸ್ಟರ್ ಪಿ ಥೋಮಸ್ ಮಾತನಾಡಿ ಯೇಸುಕ್ರಿಸ್ತನ 12 ಮಂದಿ ಶಿಷ್ಯರಲ್ಲಿ ಒಬ್ಬರಾಗಿದ್ದ ಸಂತ ಥೋಮಸ್ ಯೇಸುವಿನ ಸುವಾರ್ತೆ ಸಾರುತ್ತಾ ಮೊದಲನೇ ಶತಮಾನದ 52ನೇ ಇಸ್ವಿಯಲ್ಲಿ ಕೇರಳ ಮೂಲಕ ಭಾರತಕ್ಕೆ ಬಂದರು. ಯೇಸುವಿನ ಸುವಾರ್ತೆ ಸಾರುತ್ತಿದ್ದ ಅವರನ್ನು ಜೂಲೈ 3, 72ನೇ ಇಸ್ವಿಯಲ್ಲಿ ತಮಿಳುನಾಡಿನ ಮೈಲಾಪುರ್ (ಈಗಿನ ಚೆನ್ನೈ) ನಲ್ಲಿ ಹತ್ಯೆ ಮಾಡಲಾಯಿತು. ಅವರು ಹುತಾತ್ಮದ ದಿನದ ನೆನಪಿಗಾಗಿ ಈ ವರುಷದಿಂದಲೇ ಜೂಲೈ 3ನೇ ದಿನವನ್ನು ಜಗತ್ತಿನಾದ್ಯಂತ – ಭಾರತೀಯ ಕ್ರೈಸ್ತರ ದಿನ – ವೆಂದು ಆಚರಿಸಲಾಗುತ್ತಿದೆ. ಇದು ಭಾರತದಲ್ಲಿ ಮೊದಲನೆಯ ಆಚರಣೆಯಾಗಿದ್ದು ಪ್ರತಿವರ್ಷ ಮುಂದುವರೆಯಲಿದೆ.

ಯೇಸುಕ್ರಿಸ್ತರ ಇಹಲೋಕದ ಸೇವೆ ಪ್ರಾರಂಭವಾಗಿ ಇಸ್ವಿ 2030ಕ್ಕೆ 2000 ವರುಷಗಳು ಪೂರೈಸುವ ಹಿನ್ನಲೆಯಲ್ಲಿ ಲೋಕದಾದ್ಯಂತ ಬರುವ 10 ವರುಷ ಅನೇಕ ಆದ್ಯಾತ್ಮಿಕ, ಸಮಾಜಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತೀಯ ಕ್ರೈಸ್ತರು ದೇಶದ ಸಾರ್ವಭೌಮತೆ, ಏಕತೆ, ಅಖಂಡತೆ, ಜಾಗತಿಕ ಶಾಂತಿಗಾಗಿ ವಿಶೇಷ ಪ್ರಾರ್ಥನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
3 ಇಲಾಖೆ, 856 ಶಿಫಾರಸ್ಸು – ಆಡಳಿತ ಸುಧಾರಣೆ ಆಯೋಗ- 2ರ ಮೊದಲ ವರದಿ (ಏನೇನು ಶಿಫಾರಸ್ಸು ನೋಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button