ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಣಿ ಸಚಿವ ಮುರಿಗೇಶ್ ನಿರಾಣಿ ದೆಹಲಿ ಭೇಟಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೆಹಲಿಗೆ ಭೇಟಿ ನೀಡಿ ವಾಪಸ್ ಆಗಿರುವ ಸಚಿವರು ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿ ಮೀಟೀಂಗ್ ಸಕ್ಸಸ್ ಎಂದು ಆಪ್ತರ ಬಳಿ ಹೇಳಿದ್ದಾರೆ. ಆದರೆ ಯಾರೊಂದಿಗೆ ಮೀಟಿಂಗ್? ಯಾವ ಮೀಟಿಂಗ್ ಅನ್ನೋದನ್ನ ಹೇಳಿಲ್ಲ. ದೆಹಲಿ ಭೇಟಿಯ ಸಂಪೂರ್ಣ ಗುಟ್ಟನ್ನು ನಿರಾಣಿ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಮೀಟಿಂಗ್ ಸಕ್ಸಸ್ ಎಂದು ಹೇಳಿರುವುದು ಕುತೂಹಲ ಇಮ್ಮಡಿಗೊಳಿಸಿದೆ.
ನಿನ್ನೆ ವರಿಷ್ಠರ ಬುಲಾವ್ ಮೇರೆಗೆ ದಿಢೀರ್ ಆಗಿ ದೆಹಲಿಗೆ ತೆರಳಿದ್ದ ಸಚಿವರು ಇಂದು ಬೆಳಿಗ್ಗೆ ವಾಪಸ್ ಆಗಿದ್ದು, ಮತ್ತೆ ನಾಳೆ ದೆಹಲಿಗೆ ಪ್ರಯಾಣಿಸುತ್ತಿರುವುದಾಗಿ ಸಚಿವರು ತಿಳಿಸಿದ್ದಾರೆ.
ರಾಜ್ಯದ 3 ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ