ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಹಾಗೂ ಮುಖ್ಯಮಂತ್ರಿ ಹುದ್ದೆಗಾಗಿ ಸಚಿವ ನಿರಾಣಿ ಪ್ರಯತ್ನ ನಡೆಸಿದ್ದಾರೆ ಎಂಬ ಚರ್ಚೆ ಬೆನ್ನಲ್ಲೇ ಗಣಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಉದ್ಯಮಿ ಆಲಂ ಪಾಷಾ ಸಿಡಿ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆಲಂ ಪಾಷ, ಗಣಿ ಸಚಿವ ನಿರಾಣಿ ಮುರುಗೇಶ್ ನಿರಾಣಿ ಓರ್ವ ಸಿಡಿ ಬಾಬಾ, ಅವರ ಬಳಿ 500ಕ್ಕೂ ಹೆಚ್ಚು ಸಿಡಿಗಳಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮುರಿಗೇಶ್ ನಿರಾಣಿ ಬಳಿ ಸಾಕಷ್ಟು ಸೆಕ್ಸ್ ಸಿಡಿಗಳು ಇವೆ. ರಾಜಕಾರಣಿಗಳು, ಪ್ರಮುಖ ನಾಯಕರ ಸೆಕ್ಸ್ ಸಿಡಿಗಳು ನಿರಾಣಿ ಬಳಿಯಿದ್ದು, ಇವುಗಳ ಮೂಲಕ ಬೆದರಿಕೆಯೊಡ್ಡಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುತೂಹಲ ಮೂಡಿಸಿದ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ನಿರಾಣಿ ಭೇಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ