ಆಸ್ಪತ್ರೆಗಳಲ್ಲಿ ಆಂಪೌಲ್‌ಗಳ ಸುಲಭ ಸಂಗ್ರಹಣೆ ಮತ್ತು ಲಭ್ಯತೆಯನ್ನು ಪ್ರತಿಪಾದಿಸಿದ ಫಿಗೋ ಪ್ರೆಗ್ನೆನ್ಸಿ ಮತ್ತು ಎನ್‌ಸಿಡಿ ಸಮಿತಿಯ ಉಪಾಧ್ಯಕ್ಷರಾದ ಡಾ. ಹೇಮಾ ದಿವಾಕರ್, ಅತಿಯಾದ ರಕ್ತಸ್ರಾವದಿಂದ ತಾಯಿ ಮರಣ ಪ್ರಮಾಣ ಕಡಿಮೆ ಮಾಡಲು ಔಷಧದ ಸಮಯೋಚಿತ ನಿರ್ವಹಣೆ ಮಹತ್ವದ್ದಾಗಿದೆ ಎಂದಿದ್ದಾರೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆರಿಗೆಯ ನಂತರ ಮಹಿಳೆಯರಲ್ಲಿ ಅತಿಯಾದ ರಕ್ತಸ್ರಾವವನ್ನು (ಪ್ರಸವಾನಂತರದ ರಕ್ತಸ್ರಾವ) ತಡೆಗಟ್ಟುವ ಔಷಧಗಳ ಸುಲಭ ಲಭ್ಯತೆ, ಸಂಗ್ರಹಣೆ ಮತ್ತು ಸಮಯೋಚಿತ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸಿರುವ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಗೈನೆಕಾಲಜಿ ಅಂಡ್ ಪ್ರಸೂತಿ (ಎಫ್‌ಐಜಿಒ)ಯ ಗರ್ಭಾವಸ್ಥೆ ಮತ್ತು ಎನ್‌ಸಿಡಿ (ಸಾಂಕ್ರಾಮಿಕವಲ್ಲದ ಕಾಯಿಲೆಗಳು) ಸಮಿತಿಯ ಉಪಾಧ್ಯಕ್ಷರಾದ ಖ್ಯಾತ ಆರೋಗ್ಯ ಮುಂದಾಳು ಡಾ.ಹೇಮಾ ದಿವಾಕರ್, ಇದು ಅಭಿವೃದ್ಧಿಯಾಗದ ರಾಷ್ಟ್ರಗಳಲ್ಲಿ ಹೆಚ್ಚಿನ ತಾಯಿಯ ಮರಣ ಪ್ರಮಾಣಕ್ಕೆ (ಎಂಎಂಆರ್) ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.
ಬೆಂಗಳೂರು ಮೂಲದ ಆರ್ಟಿಸ್ಟ್ ಫಾರ್ ಹರ್ (ಏಷ್ಯನ್ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್ಫರ್) ನ ಸಿಇಒ ಆಗಿರುವ ಡಾ. ಹೇಮಾ, ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು, ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ನಲ್ಲಿ , ಮಹಿಳಾ ಮತ್ತು ಮಕ್ಕಳ ಆರೋಗ್ಯ ಘಟಕದಲ್ಲಿ ಆರ್ಟಿಎಸ್ ಕಾರ್ಬೆಟೋಸಿನ್ ಫೆರಿಂಗ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಅವಲೋಕನವನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ, ಪ್ರಸವಾನಂತರದ ರಕ್ತಸ್ರಾವವನ್ನು ನಿಯಂತ್ರಿಸುವ ಔಷಧಿ ಕಾರ್ಬೆಟೋಸಿನ್‌ನ 1,000 ಆಂಪೌಲ್‌ಗಳನ್ನು ಉಚಿತವಾಗಿ ನೀಡಲಾಯಿತು.
ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಇಂತಹ ಔಷಧಿಗಳಿಗೆ ಶೈತ್ಯೀಕರಣ ಸೇರಿದಂತೆ ವಿಶೇಷ ಶೇಖರಣಾ ವ್ಯವಸ್ಥೆಗಳು ಬೇಕಾಗುತ್ತವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ಕಾರ್ಬೆಟೋಸಿನ್ ಶಾಖ ಸ್ಥಿರವಾಗಿರುತ್ತದೆ ಮತ್ತು ಶೈತ್ಯೀಕರಣದ ಅಗತ್ಯವಿರುವುದಿಲ್ಲ, ವಿದ್ಯುತ್ ಸರಬರಾಜು ಸ್ಥಿರವಾಗಿರದ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ದೇಶಗಳಲ್ಲಿ ಬಳಕೆಗೆ ಇದು ಸೂಕ್ತವಾಗಿದೆ. ಭಾರತದಲ್ಲಿ ಕಾರ್ಬೆಟೋಸಿನ್ ಬಳಕೆಯಾಗುತ್ತಿರುವುದು ಇದೇ ಮೊದಲು ಎಂದು ಅವರು ವಿವರಿಸಿದರು.
ತಾವು FOGSI (ಫೆಡರೇಶನ್ ಆಫ್ ಅಬ್ಸ್ಟೆಟ್ರಿಕ್ ಅಂಡ್ ಗೈನೆಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ) ಯ ಅಧ್ಯಕ್ಷರಾಗಿದ್ದಾಗ ಜನನದ ನಂತರ ರಕ್ತಸ್ರಾವವನ್ನು ತಡೆಗಟ್ಟಲು ಔಷಧದ ನಿರ್ವಹಣೆಯನ್ನು ಸಾಂಸ್ಥೀಕರಣಗೊಳಿಸಲು ಮುಂದಾಗಿದ್ದನ್ನು ಡಾ.ಹೇಮಾ ಅವರು ನೆನಪಿಸಿದರು.
ಔಷಧಿಗಳ ಶೈತ್ಯೀಕರಣದ ಶೇಖರಣೆಯ ಅಗತ್ಯತೆಯ ಬಗ್ಗೆ ಆರೋಗ್ಯ ಪೂರೈಕೆದಾರರಿಗೆ ಮನದಟ್ಟು ಮಾಡುವುದು ಮತ್ತು ವಿತರಣೆಯ ನಂತರ ಒಂದು ನಿಮಿಷದಲ್ಲಿ ಅದನ್ನು ಪೂರೈಸುವುದು ಸೇರಿದಂತೆ 2013 ರಿಂದ ತಮ್ಮ ನಾಯಕತ್ವದಲ್ಲಿ ಮತ್ತು FOGSI ಚಾಂಪಿಯನ್‌ಗಳ ಸಹಾಯದಿಂದ, ಪ್ರಸವಾನಂತರದ ರಕ್ತಸ್ರಾವವನ್ನು ತಡೆಗಟ್ಟಲು ಔಷಧಿಯನ್ನು ಸೂಕ್ತವಾಗಿ ಬಳಸುವುದಕ್ಕಾಗಿ ಪ್ರೋಟೋಕಾಲ್ ಅನುಷ್ಠಾನವು ಭಾರತದ ಅನೇಕ ಭಾಗಗಳಲ್ಲಿ ‘ಹೆಲ್ಪಿಂಗ್ ಮದರ್ಸ್ ಸರ್ವೈವ್’ ಅಭಿಯಾನದ ಮೂಲಕ ಶೇ.68 ಕ್ಕಿಂತ ಹೆಚ್ಚಾಗಿರುವುದನ್ನು ಅವರು ವಿವರಿಸಿದರು.
“ಇಂದು, ಖಾಸಗಿ ಮತ್ತು ಸರ್ಕಾರದ ಆಸ್ಪತ್ರೆಗಳು ಹೆರಿಗೆ ಮಾಡಿದ ಕೂಡಲೇ ಮಹಿಳೆಯರಿಗೆ ಔಷಧಿ ನೀಡುವುದು ಪ್ರಮಾಣಿತ ಪ್ರೋಟೋಕಾಲ್ ಆಗಿದೆ. ಇದು ಭಾರತದಲ್ಲಿ ತಾಯಿ ಮರಣ ಪ್ರಮಾಣ ಕಡಿತಕ್ಕೆ ಗಮನಾರ್ಹವಾಗಿ ಕಾರಣವಾಗಿದೆ. ನಮ್ಮ ದೇಶದಲ್ಲಿ ಇದು ಹೆಚ್ಚು ಮುಖ್ಯವಾದುದು. ಏಕೆಂದರೆ ಇಲ್ಲಿ ಶೇ.50 ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ಅಂತಹ ಮಹಿಳೆಯರು ಅತಿಯಾದ ರಕ್ತಸ್ರಾವವಾಗಿದ್ದರೆ, ಈ ಔಷಧಿಯನ್ನು ಸಮಯಕ್ಕೆ ಸರಿಯಾಗಿ ನೀಡದಿದ್ದಲ್ಲಿ ಪ್ರಸವಾನಂತರದ ರಕ್ತಸ್ರಾವದಿಂದ ಸಾವನ್ನಪ್ಪುವ ಸಂಭವ ಇನ್ನೂ ಹೆಚ್ಚಾಗುತ್ತದೆ ” ಎಂದು ಡಾ. ಹೇಮಾ ಹೇಳಿದರು.
ಇನ್ನೊಬ್ಬರಿಗೆ ಜೀವ ಕೊಡುವಾಗ ತಾಯಿ ತಾನು ಸಾವಿಗೀಡಾಗುವ ಸ್ಥಿತಿ ಬರಲೇಬಾರದು. ಒಬ್ಬಳೇ ಒಬ್ಬ ತಾಯಿ ಕೂಡ ಹೆರಿಗೆ ವೇಳೆ ಜೀವ ಕಳೆದುಕೊಳ್ಳಬಾರದು ಎಂದ ಹೇಮಾ, ತಮ್ಮ ಮತ್ತು ಕೆಎಲ್ಇ ಸಂಸ್ಥೆಯ ಸಂಬಂಧ 20 ವರ್ಷದಷ್ಟು ಹಳೆಯದು. ಇಂದು ಇದೇ ಸಂಸ್ಥೆಯ ಆಶ್ರಯದಲ್ಲಿ ಇಂತಹ ಕಾರ್.ಕ್ರಮ ನಡೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.
ಎಫ್‌ಒಜಿಎಸ್‌ಐ ಅಧ್ಯಕ್ಷೆ ಡಾ.ಎಸ್.ಶಾಂತ ಕುಮಾರಿ, ಆಸ್ಪತ್ರೆಗಳಿಗೆ ಶಿಕ್ಷಣ ನೀಡಲು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿವಿಧ ನಿಯಮಾವಳಿಗಳ ಬಗ್ಗೆ ವಿಶೇಷ ಅಭಿಯಾನದ ಮೂಲಕ ತರಬೇತಿ ನೀಡುವ ಪ್ರಯತ್ನವನ್ನು ತೀವ್ರಗೊಳಿಸಲಾಗಿದೆ. ಯಾವೊಬ್ಬ ತಾಯಿ ಕೂಡ ಹೆರಿಗೆ ವೇಳೆ ಸಾವಿಗೀಡಾಗಬಾರದು ಎನ್ನುವುದೇ ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.
“ಸಮಯಕ್ಕೆ ಸರಿಯಾಗಿ ಔಷಧಿಯನ್ನು ನೀಡುವ ಪ್ರೋಟೋಕಾಲ್ ಅನುಷ್ಠಾನ ಮತ್ತು ಅಭ್ಯಾಸವನ್ನು ಹೆಚ್ಚಿಸುವ ಮೂಲಕ ಪ್ರಸವಾನಂತರದ ರಕ್ತಸ್ರಾವವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ” ಎಂದು ಅವರು ಹೇಳಿದರು.
ಕೆಎಲ್ಇ ಸೊಸೈಟಿಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಬಿ ಕೋರೆ ಅಧ್ಯಕ್ಷತೆ ವಹಿಸಿ, ಇಂತಹ ಮಹೋನ್ನತ ಕಾರ್ಯಕ್ರಮಕ್ಕೆ ಕೆಎಲ್ಇ ಸಂಸ್ಥೆ ವೇದಿಕೆಯಾಗುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಹೇಳಿದರು.
ಮತ್ತು ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೇರ್) ಉಪಕುಲಪತಿ ಡಾ.ವಿವೇಕ್ ಎ ಸಾವೋಜಿ, ಕಸೋಗಾ ಅಧ್ಯಕ್ಷ ಬಸವರಾಜ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವದಲ್ಲಿಯೇ ಮೊದಲ ಬಾರಿಗೆ ಕೆಎಲ್ಇ ಆಸ್ಪತ್ರೆಯಲ್ಲಿ ಆರ್‌ಟಿಎಸ್ ಕಾರ್ಬೆಟೋಸಿನ್ ಚುಚ್ಚುಮದ್ದು
Global Launch of RTS Carbetocin Ferring at KLE-JNMC, Belagavi
ಬೆಳಗಾವಿಯಲ್ಲಿ ಶುಕ್ರವಾರ ಆರ್‌ಟಿಎಸ್ ಕಾರ್ಬೆಟೋಸಿನ್‌ನ ಜಾಗತಿಕ ಅನಾವರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ