Kannada NewsLatest

2018ರ ಚುನವಾಣೆ ವೇಳೆ ಗಣನೆಗೆ ಬರದ ಬಿಎಸ್ ವೈ ವಯಸ್ಸು ಈಗ ಬಂದಿದ್ದೇಕೆ?; ಹೈಕಮಾಂಡ್ ವಿರುದ್ಧ ಟೋಪಣ್ಣವರ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 1980ರ ದಶಕದಲ್ಲಿ ಉತ್ತರ ಭಾರತದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾನಿ ಸೇರಿಕೊಂಡು ಪಕ್ಷ ಸಂಘಟಿಸಿದರು. ದಕ್ಷಿಣ ಭಾರತದಲ್ಲಿ ಎಲ್ಲ ಸಮುದಾಯವನ್ನು ಒಗ್ಗೂಡಿಸಿಕೊಂಡು ಹೋರಾಟದ ಮೂಲಕ ಬಿಜೆಪಿ ಪಕ್ಷ ಕಟ್ಟಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ವಿಧಾನಸಭಾ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವಾಗ ಬಿಜೆಪಿ ಹೈಕಮಾಂಡ್‌ಗೆ ಯಡಿಯೂರಪ್ಪನವರ ವಯಸ್ಸು ಗಣನಗೆ ಬರಲಿಲ್ಲವೇ. ಅಧಿಕಾರ ಬಂದ ವೇಳೆ ಕರ್ನಾಟಕದ ಉತ್ತರ ಕುಮಾರರ ಪೌರುಷಕ್ಕೆ ಮಣಿದು ಒತ್ತಡದಿಂದ ರಾಜೀನಾಮೆ ಕೊಡಿಸುವಂತೆ ಮಾಡಿದ್ದು ಖಂಡಿನೀಯ ಎಂದು ಬಿಜೆಪಿ ಮುಖಂಡ ರಾಜಕುಮಾರ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಯಡಿಯೂರಪ್ಪ ನೇತೃತ್ವದಲ್ಲಿ 2018ರ ವಿಧಾಸಭಾ ಚುನಾವಣೆ ಎದುರಿಸುವಾಗ ಹೈಕಮಾಂಡ್‌ಗೆ ಅವರ ವಯಸ್ಸು ಗಣನೆಗೆ ಬರಲಿಲ್ಲವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಗಲ್ಲಿಸಿಕೊಟ್ಟಾಗಲೂ ಅವರ ವಯಸ್ಸು ಗಣನೆಗೆ ಬರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ಪತನಗೊಂಡ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದವರು ಯಡಿಯೂರಪ್ಪ. ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ವೇಳೆಯಿಂದಲೂ ಸಾಕಷ್ಟು ಸವಾಲುಗಳನ್ನು ಎದುರಿಸಿ ಜಯ ಸಾಧಿಸಿದ್ದಾರೆ. ಈಗ ಅವರ ಮೇಲೆ ಒತ್ತಡ ತಂದು ರಾಜೀನಾಮೆ ನೀಡುವಂತೆ ಮಾಡಿದ್ದು ಖಂಡನೀಯ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಎಲ್ಲ ಸಮುದಾಯದವನ್ನು ಒಗ್ಗೂಡಿಸಿಕೊಂಡು ಹೋಗುವ ಏಕೈಕ ವ್ಯಕ್ತಿ ಯಡಿಯೂರಪ್ಪ. ಕರ್ನಾಟಕ ರಾಜಕಾರಣದಲ್ಲಿ ಒಂದು ದೊಡ್ಡ ಸಮಾಜವನ್ನು ಬಿಜೆಪಿ ಹೈಕಮಾಂಡ್ ಹೀನಾಯವಾಗಿ ನಡೆಸಿಕೊಂಡಿದೆ. ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯದ ಬಿಜೆಪಿ ಹೈಕಮಾಂಡ್ ಪ್ರಕಾರ ಕುಟುಂಬ ರಾಜಕಾರಣಕ್ಕೆ ಕೊನೆ ಹಾಡುತ್ತೇವೆ ಎಂದು ಹೇಳುವ ಅವರು, ಸಾಮಾನ್ಯವಾಗಿ ಪುತ್ರ ವ್ಯಾಮೋಹ ಇರುವುದು ಸಹಜ. ಯಡಿಯೂರಪ್ಪ ಅವರ ಕಿರಿಯ ಪುತ್ರನಿಗೆ ಸ್ಥಾನ ಮಾನ ನೀಡುವಾಗ ಕುಟುಂಬ ರಾಜಕಾರಣ ಎಂದು ರಾಜ್ಯದ ಉತ್ತರ ಕುಮಾರರು ಹೈಕಮಾಂಡ್‌ಗೆ ಕಿವಿಗೆ ತುಂಬುದು ಎಷ್ಟು ಸರಿ. ಕರ್ನಾಟಕಕ್ಕೆ ಯಡಿಯೂರಪ್ಪ ಕೇವಲ ಮುಖ್ಯಮಂತ್ರಿಯಾಗಿರಲಿಲ್ಲ. ಮಾತೃ ಹೃದಯಿ, ಎಲ್ಲ ಸಮುದಾಯ ಸಂಕಷ್ಟದಲ್ಲಿದ ವೇಳೆ ಕೈ ಹಿಡಿದು ಆಡಳಿತ ನಡೆಸಿದ ವ್ಯಕ್ತಿಗೆ ಹೀನಾಯವಾಗಿ ರಾಜೀನಾಮೆ ಕೊಡುವಂತೆ ಮಾಡಿರುವುದು ಕರ್ನಾಟಕ ಬಿಜೆಪಿಗೆ ಬರುವ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಖಡಕ ಎಚ್ಚರಿಕೆ ನೀಡಿದ್ದಾರೆ.
ಹೊಸ ಸಿಎಂ; ಹೊಸ ಸಂಪುಟ; ಯಾರ್ಯಾರು ಔಟ್? ಯಾರ್ಯಾರು ಇನ್…?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button