Kannada NewsKarnataka NewsLatest

ಬೆಳಗಾವಿಗೆ ಶುಭ ಸುದ್ದಿ: ದೆಹಲಿಗೆ ನೇರ ವಿಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಜನರು ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ  ಬೆಳಗಾವಿ – ದೆಹಲಿ ನೇರ ವಿಮಾನಯಾನ ಆರಂಭವಾಗಲಿದೆ.

149 ಸೀಟರ್ ಸ್ಫೈಸ್ ಜೆಟ್ ವಿಮಾನ ಆಗಸ್ಟ್ 13ರಿಂದ ಬೆಳಗಾವಿ – ದೆಹಲಿ – ಲೇಹ್ ಮಧ್ಯೆ ಸಂಚರಿಸಲಿದೆ. ಆರಂಭದಲ್ಲಿ ವಾರದಲ್ಲಿ 2 ದಿನ ಅಂದರೆ, ಸೋಮವಾರ ಮತ್ತು ಶುಕ್ರವಾರ ವಿಮಾನ ಸಂಚರಿಸಲಿದೆ. ಸಂಜೆ 4.35ಕ್ಕೆ ಬೆಳಗಾವಿಗೆ ಆಗಮಿಸಲಿರುವ ವಿಮಾನ 5.05ಕ್ಕೆ ಇಲ್ಲಿಂದ ದೆಹಲಿಗೆ ಹೊರಡಲಿದೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಅವರು ಈಚೆಗೆ ಬೆಳಗಾವಿ ಏರ್ ಪೋರ್ಟ್ ಡೈರಕ್ಟರ್ ರಾಜೇಶ್ ಕುಮಾರ ಮೌರ್ಯ ಜೊತೆ ದೆಹಲಿಗೆ ನೇರ ವಿಮಾನ ಆರಂಭಿಸುವ ಕುರಿತಂತೆ ಚರ್ಚಿಸಿದ್ದರು

ಈಚೆಗಷ್ಟೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಈ ಬಗ್ಗೆ ವಿಶೇಷ ಪ್ರಯತ್ನ ಮಾಡಿದ್ದರು. ಮುಖ್ಯಮಂತ್ರಿಗಳ ಮೂಲಕ ಪತ್ರವ್ಯವಹಾರವನ್ನೂ ನಡೆಸಿದ್ದಲ್ಲದೆ, 2 -3 ಮೀಟಿಂಗ್ ನಡೆಸಿದ್ದರು.

ಈ ಹಿಂದೆ ಜಿಲ್ಲೆಯ ಕೆಲವು ಶಾಸಕರು ಮತ್ತು ಸಂಘ ಸಂಸ್ಥಗಳೂ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದವು.(ಪ್ರಗತಿವಾಹಿನಿ ಸುದ್ದಿ)

Home add -Advt

ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ನೇಮಕ

Related Articles

Back to top button