ಯಡಿಯೂರಪ್ಪಗೆ ಈಗ ಮದುವೆ ಮಾಡಿದ್ರೂ ನಾಲ್ಕು ಮಕ್ಕಳಾಗುತ್ತೆ; ವಯಸ್ಸಿನ ಕಾರಣಕ್ಕೆ ರಾಜೀನಾಮೆ ಸರಿಯಲ್ಲ ಎಂದ ಸಿ.ಎಂ.ಇಬ್ರಾಹಿಂ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ರಾಜಕೀಯ ಒತ್ತಡ ಹಾಕಿ ರಾಜೀನಾಮೆ ಪಡೆದಿರುವುದು ಸರಿಯಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ಬಿಎಸ್ ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಸಿ.ಎಂ ಇಬ್ರಾಹಿಂ, ಯಡಿಯೂರಪ್ಪ ಓರ್ವ ಸಮರ್ಥ ನಾಯಕ. ಕೇರಳದಲ್ಲಿ 80 ವರ್ಷದ ಶ್ರೀಧರನ್ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದರು.ಆದರೆ ಇಲ್ಲಿ ಯಡಿಯೂರಪ್ಪನವರಿಗೆ 75 ವರ್ಷವಾಯಿತು ಎಂಬ ಕಾರಣ ನೀಡಿ ಸಿಎಂ ಸ್ಥಾನದಿಂದ ರಾಜೀನಾಮೆ ಪಡೆದಿದ್ದು ಸರಿಯಲ್ಲ. ಆರುವರೆ ಕೋಟಿ ಜನರಿರುವ ರಾಯದಲ್ಲಿ ಏಕಾಏಕಿ ಇಂತಹ ಬದಲಾವಣೆ ಸಹಿಸಲಾಗಲ್ಲ. ಯಡಿಯೂರಪ್ಪನವರಿಗೆ ಸರಿ ಸಾಟಿ ನಾಯಕ ಬಿಜೆಪಿಯಲ್ಲಿಲ್ಲ. ಅಮಿತ್ ಶಾ ಮುಂದೆ ರೇಸ್ ಗಿಳಿದರೇ ಯಡಿಯೂರಪ್ಪನವರೇ ಮೊದಲಿಗರಾಗ್ತಾರೆ. ಯಡಿಯೂರಪ್ಪನವರಿಗೆ ಈಗ ಮದುವೆ ಮಾಡಿದ್ರೂ ನಾಲ್ಕು ಮಕ್ಕಳು ಮಾಡುವಷ್ಟು ತಾಕತ್ತಿದೆ ಎಂದು ನಕ್ಕಿದ್ದಾರೆ.
ನಾನು ಹಿಂದೆಯೇ ಯಡಿಯೂರಪ್ಪನವರಿಗೆ ಹೇಳಿದ್ದೆ. ನಿಮ್ಮನ್ನು ಏಣಿಯಾಗಿ ಬಳಸಿಕೊಳ್ತಾರೆ ಎಂದು. ರಾಜ್ಯದಲ್ಲಿ ಬಿಜೆಪಿ ಪಕ್ಷಕಟ್ಟಿ ಬೆಳೆಸಿದ ಓರ್ವ ಸಮರ್ಥ, ಹಿರಿಯ ನಾಯಕನನ್ನು ಒತ್ತಡದಿಂದ ರಾಜೀನಾಮೆ ಕೊಡುವಂತೆ ಮಾಡಿದ್ದು ಅವಮಾನ. ಯಡಿಯೂರಪ್ಪನವರಿಗೆ ಮಾಡಿದ ಅವಮಾನ ಕರ್ನಾಟಕಕ್ಕೆ, ಕನ್ನಡಿಗರಿಗೆ ಆದ ಅವಮಾನ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲ್ಲ. ಆದರೆ ಸೆಪ್ಟೆಂಬರ್ ನಲ್ಲಿ ರಾಜಕೀಯ ಬದಲಾವಣೆಯಾಗಲಿದೆ. ಏನಾಗಲಿದೆ ಎಂಬುದನ್ನು ಕಾದುನೋಡಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ