ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಯಾರೋ ಬ್ಲಾಕ್ ಮೇಲ್ ಮಾಡಿ ರೇಣುಕಾಚಾರ್ಯ ವಿಡಿಯೋ ಎಂದು ಹೆದರಿಸುತ್ತಿದ್ದಾರೆ. ನಾನು ಯಾವುದೇ ಬ್ಲಾಕ್ ಮೇಲ್ ಖೆಡ್ಡಾಗೆ ಬೀಳಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಿಡಿ ಭೀತಿ ಆರಂಭವಾಗಿದ್ದು, ತಮ್ಮ ವಿರುದ್ಧದ ವಿಡಿಯೋ ಪ್ರಸಾರ ಮಾಡದಂತೆ ಮಧ್ಯಂತರ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಎಡಿಟ್ ಮಾಡಿ ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖ ಅಂಟಿಸಬಹುದು. ಯಾರೋ ಪುಣ್ಯಾತ್ಮ ನನ್ನ ವಿಡಿಯೋ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.
ನಾನು ಅಂದು ಒಮ್ಮೆ ತಪ್ಪು ಮಾಡಿದ್ದೆ. ಆ ತಪ್ಪಿನಿಂದ ಪಾಠ ಕಲಿತಿದ್ದೇನೆ. ನಡೆಯುವ ಮನುಷ್ಯ ಎಡವುವುದು ಸಹಜ. ಮತ್ತೆ ಎಂದೂ ಆ ತಪ್ಪು ಮಾಡಿಲ್ಲ. ಕೀಳುಮಟ್ಟದ ರಾಜಕಾರಣವನ್ನು ಸಹಿಸಲ್ಲ ಎಂದು ಹೇಳಿದ್ದಾರೆ.
17 ವಲಸಿಗ ಶಾಸಕರಿಗೆ ಶಾಕ್ ನೀಡಿದ ಬಿಎಸ್ ವೈ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ