Latest

ಗುರುದೇವ ರಾನಡೆ ಜೀವನ ದರ್ಶನ 26ಕ್ಕೆ ಸಿದ್ದೇಶ್ವರ ಶ್ರೀಗಳಿಂದ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಆಧುನಿಕ ಸಂತ, ಸಮನ್ವಯ ಸಿದ್ಧಾಂತದರ್ಶಿ, ವಿಶ್ರಾಂತ ಕುಲಪತಿ ಡಾ. ಗುರುದೇವ ಆರ್.ಡಿ.ರಾನಡೆಯವರ ಜೀವನ ದರ್ಶನ ಮರಾಠಿ ಪುಸ್ತಕದ ಕನ್ನಡ ಅನುವಾದ ಬಿಡುಗಡೆ ಸಮಾರಂಭ ಮಂಗಳವಾರ (ಮಾ.26) ನಡೆಯಲಿದೆ.

ಅಕಾಡೆಮಿ ಆಫ್ ಕಂಪ್ಯಾರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜಿಯನ್ ಆಶ್ರಯದಲ್ಲಿ ಹಿಂದವಾಡಿಯ ರಾನಡೆ ಮಂದಿರದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಪುಸ್ತಕ ಬಿಡುಗಡೆಗೊಳಿಸುವರು.

ತೋಂಟದಾರ್ಯ ಜಗದ್ಗುರು ಶ್ರೀ ಸಿದ್ದರಾಮ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸುವರು. ಸಂಸದ ಸುರೇಶ ಅಂಗಡಿ, ಶಾಸಕರಾದ ಅನಿಲ ಬೆನಕೆ ಹಾಗೂ ಅಭಯ ಪಾಟೀಲ ಮುಖ್ಯ ಅತಿಥಿಯಾಗಿ ಆಗಮಿಸುವರು. ಪುಸ್ತಕ ಅನುವಾದಕ ಚಂದ್ರಕಾಂತ ಪೋಕಳೆ ಉಪಸ್ಥಿತರಿರಲಿದ್ದಾರೆ ಎಂದು ಎಸಿಪಿಆರ್ ಅಧ್ಯಕ್ಷ ಅಶೋಕ ಪೋತದಾರ ಹಾಗೂ ಗೌರವ ಕಾರ್ಯದರ್ಶಿ ಮಾರುತಿ ಜಿರಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button